: ಕೇವಲ 87 ರೂಪಾಯಿ ಹೂಡಿಕೆ ಮಾಡಿ, 11 ಲಕ್ಷ ರೂಪಾಯಿ ರಿಟರ್ನ್ ಪಡೆಯಿರಿ! : ಎಲ್ಐಸಿಯ ಈ ಪಾಲಿಸಿಯು ಅತ್ಯುತ್ತಮ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ ನೀವು ಕೇವಲ 87 ರೂಪಾಯಿ ಹೂಡಿಕೆ ಮಾಡುವ ಮೂಲಕ 11 ಲಕ್ಷ ರೂಪಾಯಿಗಳ ರಿಟರ್ನ್‌ ಪಡೆಯಬಹುದು. :ಪ್ರಮುಖ ವಿಮಾ ಪೂರೈಕೆದಾರರಾದ ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (), ವಿವಿಧ ಆರ್ಥಿಕ ಗುರಿಗಳನ್ನು ಪೂರೈಸಲು ವೈವಿಧ್ಯಮಯ ಜೀವ ವಿಮಾ ಪಾಲಿಸಿಗಳನ್ನು ನೀಡುತ್ತದೆ. ಆಧಾರ್ ಶಿಲಾ ಯೋಜನೆಯು ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಜಾರಿಗೆ ತಂದ ವಿಶೇಷ ಪಾಲಿಸಿಯಾಗಿದೆ. ಈ ನಾನ್-ಲಿಂಕ್ಡ್ ವೈಯುಕ್ತಿಕ ಜೀವ ವಿಮಾ ಯೋಜನೆ ಮುಕ್ತಾಯದ ವೇಳೆಗೆ ಲಕ್ಷ ಗಟ್ಟಲೇ ಹಣ ಬರುವ ಗ್ಯಾರೆಂಟಿ ರಿಟರ್ನ್‌ ಅನ್ನು ಹೊಂದಿದೆ. ಅಕಾಲಿಕ ಮರಣದ ಸಂದರ್ಭದಲ್ಲಿ ವಿಮಾದಾರರ ಕುಟುಂಬಕ್ಕೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಮಹಿಳೆಯರಿಗೆ ಆರ್ಥಿಕ ಭದ್ರತೆ: ತನ್ನ ಕಡಿಮೆ ರಿಸ್ಕ್‌ ಹೊಂದಿರುವ, ಗ್ರಾಹಕ ಕೇಂದ್ರಿತ ನೀತಿಗಳಿಗೆ ಹೆಸರುವಾಸಿಯಾಗಿದೆ. ಅದು ಹಣಕಾಸಿನ ಅಗತ್ಯಗಳಿಗೆ ಪರಿಹಾರ ಒದಗಿಸುತ್ತದೆ. ಎಲ್ಐಸಿ ಆಧಾರ್ ಶಿಲಾ ಯೋಜನೆಯು ಪಾಲಿಸಿದಾರರಿಗೆ ಕೇವಲ 87 ರೂಪಾಯಿಗಳ ದೈನಂದಿನ ಹೂಡಿಕೆಯೊಂದಿಗೆ 11 ಲಕ್ಷದವರೆಗೆ ಉಳಿಸುವ ಅವಕಾಶ ನೀಡುತ್ತದೆ. ಇದನ್ನೂ ಓದಿ: ಎಲ್ಐಸಿ ಆಧಾರ್ ಶಿಲಾ ಯೋಜನೆಯ ವಿವರಗಳು: ಪಾಲಿಸಿ ಆರಂಭಿಸಲು ಕನಿಷ್ಟ ವಯಸ್ಸು: 8 ವರ್ಷಗಳುಪಾಲಿಸಿ ಆರಂಭಿಸಲು ಗರಿಷ್ಠ ವಯಸ್ಸು: 55 ವರ್ಷಗಳುಕನಿಷ್ಟ ಪಾಲಿಸಿ ಅವಧಿ: 10 ವರ್ಷಗಳುಗರಿಷ್ಠ ಪಾಲಿಸಿ ಅವಧಿ: 20 ವರ್ಷಗಳುಗರಿಷ್ಠ ಮುಕ್ತಾಯ ವಯಸ್ಸು: 70 ವರ್ಷಗಳುಕನಿಷ್ಟ ಹೂಡಿಕೆ: 75,000 ರೂಗರಿಷ್ಠ ಹೂಡಿಕೆ: 3 ಲಕ್ಷ ರೂ ಎಲ್ಐಸಿ ಆಧಾರ್ ಶಿಲಾ ಯೋಜನೆಯ ಪ್ರಯೋಜನಗಳು: 1. ಮೆಚುರಿಟಿ ಬೆನಿಫಿಟ್: ಪಾಲಿಸಿದಾರನು ಸಂಪೂರ್ಣ ಪಾಲಿಸಿ ಅವಧಿಯನ್ನು ಆರಿಸಿಕೊಂಡರೆ ಹೆಚ್ಚು ಮೆಚ್ಯೂರಿಟಿ ಪ್ರಯೋಜನವನ್ನು ಪಡೆಯುತ್ತಾನೆ. ಈ ಒಟ್ಟು ಮೊತ್ತವನ್ನು ಹೊಸ ಪಾಲಿಸಿಯಲ್ಲಿ ಮರುಹೂಡಿಕೆ ಮಾಡಬಹುದು. 2. ಡೆತ್ ಬೆನಿಫಿಟ್: ವಿಮೆದಾರರ ಅಕಾಲಿಕ ಮರಣದ ಸಂದರ್ಭದಲ್ಲಿ, ಲಾಭವನ್ನು ಪಾಲಿಸಿಯ ನಾಮಿನಿಗೆ ಪಾವತಿಸಲಾಗುತ್ತದೆ. 3. ಖಾತರಿಯ ಸರೆಂಡರ್ ಮೌಲ್ಯ: ಪಾಲಿಸಿದಾರರು ಸತತ ಎರಡು ಪಾಲಿಸಿ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ತಮ್ಮ ಪಾಲಿಸಿಯನ್ನು ಸರೆಂಡರ್ ಮಾಡಲು ಆಯ್ಕೆ ಮಾಡಬಹುದು. ಖಾತರಿಯ ಸರೆಂಡರ್ ಮೌಲ್ಯವು ಪಾಲಿಸಿ ಅವಧಿಯಲ್ಲಿ ಪಾವತಿಸಿದ ಒಟ್ಟು ಪ್ರೀಮಿಯಂಗೆ ಸಮನಾಗಿರುತ್ತದೆ. 4. ಸಾಲದ ಪ್ರಯೋಜನ: ಒಮ್ಮೆ ಪಾಲಿಸಿಯು ಸರೆಂಡರ್ ಮೌಲ್ಯವನ್ನು ಸಾಧಿಸಿದರೆ, ಹೂಡಿಕೆದಾರರು ಸಾಲದ ಪ್ರಯೋಜನಗಳನ್ನು ಪಡೆಯಬಹುದು. 5. ಪ್ರೀಮಿಯಂ ಪಾವತಿ: ಪ್ರೀಮಿಯಂ ಪಾವತಿ ಅವಧಿಯು ಪಾಲಿಸಿ ಅವಧಿಯೊಂದಿಗೆ ಹೊಂದಾಣಿಕೆಯಾಗುವಂತೆ ರೂಪಿಸಲಾಗಿದೆ. ವಾರ್ಷಿಕ, ಮಾಸಿಕ, ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ವಿಧಾನಗಳನ್ನು ಒಳಗೊಂಡಂತೆ ವಿವಿಧ ಪಾವತಿ ಆವರ್ತನಗಳನ್ನು ನೀಡುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...