: ಈ ವಿಷಯಗಳ ಬಗ್ಗೆ ಕಾಳಜಿ ಇದ್ದರೆ ಕ್ರೆಡಿಟ್ ಕಾರ್ಡ್ ತುಂಬಾ ಪ್ರಯೋಜನಕಾರಿ : ಪ್ರಸ್ತುತ, ಕ್ರೆಡಿಟ್ ಕಾರ್ಡ್‌ಗಳ ಟ್ರೆಂಡ್ ಹೆಚ್ಚಾಗಿದೆ. ಆದಾಗ್ಯೂ, ಕೆಲವರು ಕ್ರೆಡಿಟ್ ಕಾರ್ಡ್ ಎಂದರೆ ಹೆದರುತ್ತಾರೆ. ಇದಕ್ಕೆ ಮುಖ್ಯ ಕಾರಣ, ಕ್ರೆಡಿಟ್ ಕಾರ್ಡ್ ಅನ್ನು ಸರಿಯಾಗಿ ನಿರ್ವಹಿಸದಿದ್ದರೆ ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. :ತುರ್ತು ಪರಿಸ್ಥಿತಿಯಲ್ಲಿ ಹಣಕಾಸಿನ ಅವಶ್ಯಕತೆಯನ್ನು ಪೂರೈಸಲು ಕ್ರೆಡಿಟ್ ಕಾರ್ಡ್ ( ) ಬಹಳ ಉಪಯುಕ್ತವಾಗಿದೆ. ಕ್ರೆಡಿಟ್ ಕಾರ್ಡ್‌ಗಳಲ್ಲಿ ಆಕರ್ಷಕ ಬಹುಮಾನಗಳು, ಕ್ಯಾಶ್‌ಬ್ಯಾಕ್, ರಿಯಾಯಿತಿಗಳು, ಕೊಡುಗೆಗಳು ಇತ್ಯಾದಿ ಪ್ರಯೋಜನಗಳು ಕೂಡ ಲಭ್ಯವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಬಳಕೆ ( ) ಹೆಚ್ಚಾಗಿದೆ ಆದರೂ, ಕೆಲವರು ಕ್ರೆಡಿಟ್ ಕಾರ್ಡ್ ಬಳಕೆಯಿಂದ ನಾವು ಸಾಲಗಾರರಾಗುತ್ತೇವೆ ಎಂಬ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ, ಇಂದೇ ಈ ಮನಸ್ಥಿತಿಯಿಂದ ಹೊರಬನ್ನಿ. ವಾಸ್ತವವಾಗಿ, ಕ್ರೆಡಿಟ್ ಕಾರ್ಡ್ ( )ತಕ್ಷಣದ ಹಣಕಾಸಿನ ಅಗತ್ಯತೆಗಳನ್ನು ಪೂರೈಸಲು ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ಇದು ನಮ್ಮ( ) ಅನ್ನು ಕೂಡ ಸುಧಾರಿಸುತ್ತದೆ. ಆದರೆ, ಕ್ರೆಡಿಟ್ ಕಾರ್ಡ್ ಬಲಸುವಾಗ ಕೆಲವು ವಿಚಾರಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಇಲ್ಲದಿದ್ದರೆ, ಇದು ನಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸುವುದರಲ್ಲಿ ಅನುಮಾನವೇ ಇಲ್ಲ. ಇದನ್ನೂ ಓದಿ- ಕ್ರೆಡಿಟ್ ಕಾರ್ಡ್ ಅನ್ನು ಲಾಭದಾಯಕವನ್ನಾಗಿಸಲು ಏನು ಮಾಡಬೇಕು? ಯಾವ ವಿಷಯಗಳ ಬಗ್ಗೆ ಗಮನವಹಿಸಬೇಕು ಎಂದು ನೋಡುವುದಾದರೆ...* ಖರ್ಚಿನ ಮಿತಿ:ಖರ್ಚುಗಳನ್ನು ಪೂರೈಸಲುಪ್ರಯೋಜನಕಾರಿಯೇ, ಆದರೂ, ಇದು ಹಿತ-ಮಿತವಾಗಿದ್ದರೆ ಮಾತ್ರವೇ ಪ್ರಯೋಜನಕಾರಿ. ಕೈಯಲ್ಲಿ ಕ್ರೆಡಿಟ್ ಕಾರ್ಡ್ ಇದೆ ಎಂದು ಬೇಕಾಬಿಟ್ಟಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಇದು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಬಹುದು. ಇದನ್ನು ತಪ್ಪಿಸಲು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯ ಶೇಕಡಾ 30ಕ್ಕಿಂತ ಹೆಚ್ಚಿನ ಹಣವನ್ನು ಬಳಸದೆ ಇರುವಂತೆ ನಿಮ್ಮ ಖರ್ಚಿಗೆ ಮಿತಿಯನ್ನು ಹೊಂದಿಸಿ. * ನಿಗದಿತ ದಿನಾಂಕವನ್ನು ಮರೆಯಬೇಡಿ:ನೀವು ತಿಂಗಳಿಡೀ ಬಳಸಿದ ಕ್ರೆಡಿಟ್ ಕಾರ್ಡ್ ಬಿಲ್ ( ) ಪಾವತಿಸಲು ಬ್ಯಾಂಕ್ ನಿಗದಿಗೊಳಿಸಿರುವ ದಿನಾಂಕವನ್ನು ಎಂದಿಗೂ ಮರೆಯಬೇಡಿ. ಕ್ರೆಡಿಟ್ ಕಾರ್ಡ್ ಡ್ಯೂ ಡೇಟ್ ಬಳಿಕ ಪಾವತಿಸಲಾಗುವ ಹಣಕ್ಕೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. * ಕೊಡುಗೆಗಳು/ರಿಯಾಯಿತಿಗಳಿಗಾಗಿ ಶಾಪಿಂಗ್ ಮಾಡಬೇಡಿ:ಕೆಲವರು ತಮಗೆ ಅಗತ್ಯವಿಲ್ಲದಿದ್ದರೂ ಕೊಡುಗೆಗಳು, ರಿಯಾಯಿತಿಗಳಿಗಾಗಿ ಶಾಪಿಂಗ್ ಮಾಡುತ್ತಾರೆ. ಈ ಅಭ್ಯಾಸ ನಿಮಗೂ ಇದ್ದರೆ, ಇಂದೇ ಇಂತಹ ಅಭ್ಯಾಸವನ್ನು ಬಿಡಿ. ಏಕೆಂದರೆ ಇದು ನಿಮ್ಮ ಸಾಲದ ಹೊರೆಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ- * ಅಧಿಕ ಕ್ರೆಡಿಟ್ ಕಾರ್ಡ್:ನಿಮ್ಮ ಬಳಿ ಈಗಾಗಲೇ ಒಂದು ಕ್ರೆಡಿಟ್ ಕಾರ್ಡ್ ಇದ್ದರೆ, ಇನ್ನೊಂದು ಕ್ರೆಡಿಡ್ ಕಾರ್ಡ್ ತೆಗೆದುಕೊಳ್ಳುವ ತಪ್ಪನ್ನು ಮಾಡಬೇಡಿ. ಏಕೆಂದರೆ ಅಧಿಕ ಕ್ರೆಡಿಟ್ ಕಾರ್ಡ್ ಹೊಂದಿರುವುದು ಕೆಲವೊಮ್ಮೆ ನಿಮ್ಮನ್ನು ಅನಗತ್ಯ ವೆಚ್ಚಗಳಿಗೆ ಪ್ರೇರೇಪಿಸಬಹುದು. ಮಾತ್ರವಲ್ಲ, ಭವಿಷ್ಯದಲ್ಲಿ ಇದು ನಿಮ್ಮನ್ನು ಸಾಲದ ಸುಳಿಯಲ್ಲೂ ಸಿಲುಕಿಸಬಹುದು. * ಕ್ಯಾಶ್ ವಿತ್ ಡ್ರಾ:ಕ್ರೆಡಿಟ್ ಕಾರ್ಡ್‌ನ್ನು ಬಳಸಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ. ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಗದು ವಹಿವಾಟಿಗೆ ಹೆಚ್ಚಿನ ಶೂಲವನ್ನು ಕಡಿತಗೊಳಿಸಲಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಬಡ್ಡಿರಹಿತ ಕ್ರೆಡಿಟ್ ಅವಧಿಯ ಯಾವುದೇ ಪ್ರಯೋಜನವೂ ಸಹ ಲಭ್ಯವಿರುವುದಿಲ್ಲ. ನೀವು ಸಾಲವನ್ನು ತೆಗೆದುಕೊಂಡ ದಿನದಿಂದ, ಬಡ್ಡಿಯು ಪ್ರಾರಂಭವಾಗುತ್ತದೆ. ನೀವು ಕ್ರೆಡಿಟ್ ಕಾರ್ಡ್ ಬಳಸುವಾಗ ಈ ಐದು ಪ್ರಮುಖ ವಿಷಯಗಳ ಬಗ್ಗೆ ಹೆಚ್ಚಿನ ಗಮನವಹಿಸಿದರೆ ಕ್ರೆಡಿಟ್ ಕಾರ್ಡ್ ಲಾಭದಾಯಕ ಎಂದು ಸಾಬೀತುಪಡಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...