ಮಾವು ಬೆಲೆಯ ಮೇಲೂ ಬಿಸಿಲಿನ ಹೊಡೆತ !ಮಂಡಿಯಲ್ಲಿಯೇ ಮಾವಿನ ಹಣ್ಣಿನ ಕೊರತೆ ! : ಈ ವರ್ಷ ಮಳೆ ಬಾರದ ಪರಿಣಾಮ ನೀರಿಕ್ಷೆಗೆ ತಕ್ಕಷ್ಟು ಹಣ್ಣುಗಳು ಮಂಡಿಗಳಿಗೆ ಬಂದಿಲ್ಲ.‌ ಬೆಂಗಳೂರು : :ಬಿಸಿಲಿನ ಹೊಡೆತ ಈ ವರ್ಷ ಮಾವಿನ ಹಣ್ಣಿನ ಮೇಲೂ ಬಿದ್ದಿದೆ. ಬೇಸಿಗೆ ಬಂತೆಂದರೆ ಸಾಕು ಎಲ್ಲಿ ನೋಡಿದರೂ ಮಾವಿನ ಹಣ್ಣು ಕಾಣಿಸುತ್ತದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿಯೇ ವಿವಿಧ ತಳಿಯ ಮಾವು ಮಂಡಿಗೆ ಲಗ್ಗೆ ಇಟ್ಟಾಗುತ್ತದೆ. ಆದರೆ ಈ ವರ್ಷ ಮಳೆ ಬಾರದ ಪರಿಣಾಮ ನೀರಿಕ್ಷೆಗೆ ತಕ್ಕಷ್ಟು ಹಣ್ಣುಗಳು ಮಂಡಿಗಳಿಗೆ ಬಂದಿಲ್ಲ.‌ ಮಾವುಗಳ ಬೆಲೆಯಲ್ಲಿ ಹೆಚ್ಚಳ :ಸಾಮಾನ್ಯವಾಗಿ ಮಾರ್ಚ್, ಏಪ್ರೀಲ್‌ ತಿಂಗಳಲ್ಲಿಯೇ ರಾಜ್ಯರಾಜಾಧಾನಿಯಲ್ಲಿಆರಂಭವಾಗುತ್ತದೆ. ಆದರೆ ಈ ಬಾರಿ ಮೇ ತಿಂಗಳು ಆರಂಭವಾದರೂ ಮಾವಿನ ಮಂಡಿಗೆ ಹಣ್ಣುಗಳು ಇನ್ನು ಬಂದಿಲ್ಲ.‌ಮಾರುಕಟ್ಟೆಗೆ ನಿರೀಕ್ಷಿತ ರೂಪದಲ್ಲಿ ಮಾವಿನ ಹಣ್ಣಿನ ಪೂರೈಕೆಯಾಗದ ಕಾರಣ ಮಾವಿನ ಹಣ್ಣಿನ ಬೆಲೆ ಕೂಡಾ ಹೆಚ್ಚಾಗಿದೆ.ಈ ಬೆಲೆ ಏರಿಕೆಯ ನಡುವೆಯೂ ಗ್ರಾಹಕರ ಬೇಡಿಕೆಯೂ ಹೆಚ್ಚಾಗಿದೆ. ಇದನ್ನೂ ಓದಿ : ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಶೇ.6-7ರಷ್ಟು ವ್ಯಾಪಾರ ಕುಸಿತ ಕಂಡಿದೆ. ಮೇ ತಿಂಗಳಲ್ಲಿ ಹೆಚ್ಚಿನ ಮಾವಿನ ಹಣ್ಣು ಪೂರೈಕೆ ಆಗುವ ಸಾಧ್ಯತೆ ಇದೆ.ನೆರೆಯ ತಮಿಳುನಾಡು ಮಾವಿನ ಫಸಲಿಗೆ ಹೆಸರುವಾಸಿ.ಇಲ್ಲಿ ಮಾವು ಬೆಳೆಗಾರರು ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ. ಕೃಷ್ಣಗಿರಿ ಸೇರಿದಂತೆ ತಮಿಳುನಾಡಿನ ಹಲವು ಭಾಗಗಳಿಂದ ರಾಜಧಾನಿ ಬೆಂಗಳೂರಿಗೆ ಮಾವಿನ ಹಣ್ಣು ಪೂರೈಕೆ ಆಗುತ್ತಿದೆ. ಕೆಲವರು ರಾಸಾಯಿನಿಕಗಳನ್ನು ಬಳಕೆ ಮಾಡಿ ಹಣ್ಣು ಮಾಡಿರುವ ಹಿನ್ನೆಲೆಯಲ್ಲಿ ಅವುಗಳು ರಚಿಕಳೆದುಕೊಂಡಿವೆ. ಇನ್ನು ಕೆಲವುಬೇಡಿಕೆ ಹೆಚ್ಚು. ಮಹಾರಾಷ್ಟ್ರದ ರತ್ನಾಗಿರಿ ಮೂಲದ ಅಲ್ಫೋನ್ಸೊ, ಸಿಂಧೂರ ಮತ್ತು ಬಾದಾಮಿ ಕಳೆದ ವರ್ಷ ಕೆಜಿಗೆ 100 ರೂ.ಗೆ ಮಾರಾಟ ಆಗಿತ್ತು. ಆದರೆ ಈ ಬಾರಿ ಪೂರೈಕೆಯಿಲ್ಲದ ಹಿನ್ನೆಲೆಯಲ್ಲಿ ಈ ಹಣ್ಣುಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೆಜಿಗೆ 150-200 ರೂ.ಗೆ ಮಾರಾಟವಾಗುತ್ತದೆ. ಇದನ್ನೂ ಓದಿ : ಹಣ್ಣುಗಳ ಬೆಲೆ ಎಷ್ಟಿದೆ ನೋಡೋಣ :ಹಿಮಾಯತ್ - 300ಬಾದಾಮಿ - 250ಸಕ್ಕರೆಗುತ್ತಿ- 150ಬಾಗಾನ್ ಪಲ್ಲಿ - 150ಸಿಂಧೂರ - 150ಕೇಸರಿ - 200ಕಸ್ತೂರಿ - 200ಅಲ್ಪಾನ್ಸಾ- 300ರಸ್ಪುರಿ - 160 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...