ಭಾರೀ ಇಳಿಕೆಯಾಯಿತು ಗ್ಯಾಸ್ ಸಿಲಿಂಡರ್ ಬೆಲೆ ! ಇಂದಿನ ದರ ಎಷ್ಟಿದೆ ತಿಳಿಯಿರಿ : ತೈಲ ಮಾರುಕಟ್ಟೆ ಕಂಪನಿಗಳು ಮೇ ಮೊದಲ ದಿನ ಜನ ಸಾಮಾನ್ಯರಿಗೆ ರಿಲೀಫ್ ನೀಡಿವೆ.ಸಿಲಿಂಡರ್‌ಗಳ ಬೆಲೆಯಲ್ಲಿ 19 ರೂ.ಯಷ್ಟು ಇಳಿಕೆ ಮಾಡಿದೆ. :ತೈಲ ಮಾರುಕಟ್ಟೆ ಕಂಪನಿಗಳು ಮೇ ಮೊದಲ ದಿನ ಜನ ಸಾಮಾನ್ಯರಿಗೆ ರಿಲೀಫ್ ನೀಡಿವೆ.ಸಿಲಿಂಡರ್‌ಗಳ ಬೆಲೆಯಲ್ಲಿ 19 ರೂ.ಯಷ್ಟು ಇಳಿಕೆ ಮಾಡಿದೆ.ಹೊಸ ಬೆಲೆಗಳು ಇಂದಿನಿಂದ ಅಂದರೆ ಮೇ 1ರಿಂದಲೇ ದೇಶಾದ್ಯಂತ ಜಾರಿಗೆ ಬಂದಿವೆ.ಕಳೆದ ತಿಂಗಳು ಸಹ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿತ್ತು. ಏಪ್ರಿಲ್ 1 ರಂದು 30.50 ರೂ.ಯಷ್ಟು ದರ ಕಡಿತ ಮಾಡಲಾಗಿತ್ತು.ಆದರೆ ಮಾರ್ಚ್‌ನಲ್ಲಿ 25.5 ರೂಪಾಯಿ ಮತ್ತು ಫೆಬ್ರವರಿಯಲ್ಲಿ 14 ರೂಪಾಯಿಗಳಷ್ಟು ಬೆಲೆಯನ್ನು ಹೆಚ್ಚಿಸಲಾಗಿತ್ತು. ಕರ್ಮಶಿಯಲ್ ಸಿಲಿಂಡರ್ ಬೆಲೆ ಎಷ್ಟು ಆಯಿತು? :ದೇಶಾದ್ಯಂತ ಜಾರಿಗೆ ಬರುವಂತೆ 19 ರೂಪಾಯಿ ಕಡಿತಗೊಳಿಸಲಾಗಿದೆ. ಬೆಲೆ ಕಡಿತದ ನಂತರ ಕಮರ್ಷಿಯಲ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1745.50 ರೂ. ಕೋಲ್ಕತ್ತಾದಲ್ಲಿ 1859 ರೂ. ಮುಂಬಯಿಯಲ್ಲಿ 1698.50 ರೂ.ಗೆ ಮತ್ತು ಚೆನ್ನೈನಲ್ಲಿ 1911 ರೂ.ಗೆ ಆಗಿದೆ. ಇದನ್ನೂ ಓದಿ : ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ : 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ ಮನೆಗಳಲ್ಲಿ ಬಳಸುವ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಯು ಇಂಧನ ಬೆಲೆಯಲ್ಲಿ ಹೆಚ್ಚಳ :ಮೇ ತಿಂಗಳ ಮೊದಲ ದಿನವೇಶಾಕ್ ಸಿಕ್ಕಿದ್ದು, ವಾಯು ಇಂಧನ ಬೆಲೆಯಲ್ಲಿ ಏರಿಕೆಯಾಗಿದೆ.ತೈಲ ಮಾರುಕಟ್ಟೆ ಕಂಪನಿಗಳು () ವಿಮಾನ ಇಂಧನದ ಬೆಲೆಯನ್ನು ಲೀಟರ್‌ಗೆ 749.25 ರೂ.ಗಳಷ್ಟು ಹೆಚ್ಚಿಸಿವೆ. ಹೊಸ ದರಗಳು ಇಂದಿನಿಂದ ಜಾರಿಗೆ ಬಂದಿವೆ. ಈ ಹಿಂದೆ, ಏಪ್ರಿಲ್‌ನಲ್ಲಿ ರೂ 502.91/ಕೆಜಿ ಲೀಟರ್‌ಗೆ ಇಳಿಕೆಯಾಗಿದ್ದರೆ, ಮಾರ್ಚ್‌ನಲ್ಲಿ ವಿಮಾನ ಇಂಧನ ಬೆಲೆ ಲೀಟರ್‌ಗೆ ರೂ 624.37/ಕೆಜಿ ಏರಿಕೆಯಾಗಿತ್ತು. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...