: ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ, ಇಲ್ಲಿದೆ ಫುಲ್ ಲಿಸ್ಟ್ : ಮೇ ತಿಂಗಳ ಮೊದಲ ದಿನ ಎಂದರೆ ಮೇ 01ರಂದು ಕಾರ್ಮಿಕ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದಲ್ಲದೆ, ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಯಾವ್ಯಾವ ದಿನ ರಜೆ ಇರಲಿದೆ ತಿಳಿಯಿರಿ. : ನಾಳೆಯಿಂದ ಮೇ ತಿಂಗಳು ಆರಂಭವಾಗಲಿದೆ. ಮೇ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ ಇರಲಿದೆ ಎಂದು ತಿಳಿಯಲು ಇಲ್ಲಿದೆ ಆರ್‌ಬಿ‌ಐ ರಜಾ ದಿನಗಳ ಪಟ್ಟಿ. ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜೆ?() ಬಿಡುಗಡೆ ಮಾಡಿರುವ ಬ್ಯಾಂಕ್‌ಗಳ ರಜೆ ದಿನ ಪಟ್ಟಿಯ ಪ್ರಕಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ನಾಲ್ಕು ಭಾನುವಾರಗಳು ಸೇರಿದಂತೆ ಒಟ್ಟು 14 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಇದನ್ನೂ ಓದಿ- ಆರ್‌ಬಿ‌ಐಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದಯ ( ) ಪ್ರಕಾರ, ವಿವಿಧ ರಾಜ್ಯಗಳಿಗೆ ಅನುಗುಣವಾಗಿ ಸ್ಥಳೀಯ ರಜೆಗಳು ಬದಲಾಗಲಿವೆ. ಇದರೊಂದಿಗೆ ಚುನಾವಣಾ ಪ್ರದೇಶಗಳಲ್ಲಿ ಮತದಾನದ ದಿನದಂದು ಬ್ಯಾಂಕ್‌ಗಳಿಗೆ ರಜೆ ( ) ಇರಲಿದೆ. ಇದನ್ನೂ ಓದಿ- ಮೇ ತಿಂಗಳಿನಲ್ಲಿ ಎಷ್ಟು ದಿನ ಬ್ಯಾಂಕ್‌ಗಳು ಮುಚ್ಚಿರುತ್ತವೆ?ಮೇ 01: ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕ ದಿನಾಚರಣೆಯ ಕಾರಣ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.ಮೇ 05: ಭಾನುವಾರ ರಜೆ.ಮೇ 07ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.ಮೇ 08: ರವೀಂದ್ರನಾಥ ಟ್ಯಾಗೋರ್ ಜಯಂತಿ ರಜೆ. (ಕೋಲ್ಕತ್ತಾದಲ್ಲಿ ಮಾತ್ರ)ಮೇ 10: ಬಸವ ಜಯಂತಿ/ಅಕ್ಷಯ ತೃತೀಯದ ಕಾರಣ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.ಮೇ 11: ಎರಡನೇ ಶನಿವಾರ ಬ್ಯಾಂಕ್‌ಗಳಿಗೆ ರಜೆ.ಮೇ 12: ಭಾನುವಾರ ರಜೆ.ಮೇ 13: ವಿವಿಧ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ ಕಾರಣ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.ಮೇ 16: ರಾಜ್ಯ ದಿನದ ಕಾರಣ, ಗ್ಯಾಂಗ್ಟಾಕ್‌ನ ಎಲ್ಲಾ ಬ್ಯಾಂಕ್‌ಗಳು ಈ ದಿನ ಮುಚ್ಚಲ್ಪಡುತ್ತವೆ.ಮೇ 19: ಭಾನುವಾರ ರಜೆ.ಮೇ 20: ಬೇಲಾಪುರ ಮತ್ತು ಮುಂಬೈನಲ್ಲಿ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.ಮೇ 23: ಬುದ್ಧ ಪೂರ್ಣಿಮಾ ರಜೆಮೇ 25: ನಾಲ್ಕನೇ ಶನಿವಾರ ರಜೆಮೇ 26: ಭಾನುವಾರ ರಜೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...