ಶೀಘ್ರದಲ್ಲೇ ಖಾತೆಗೆ ಬೀಳಲಿದೆ ಪಿಎಫ್ ಬಡ್ಡಿ : ಈ ರೀತಿಯಲ್ಲಿ ನಿಮ್ಮ ಪಿಎಫ್ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ ! :ಅನೇಕ ಸದಸ್ಯರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.2023-24ರ ಆರ್ಥಿಕ ವರ್ಷದ ಬಡ್ಡಿಯನ್ನು ತಮ್ಮ ಇಪಿಎಫ್ ಖಾತೆಗೆ ಯಾವಾಗ ಜಮಾ ಮಾಡಲಾಗುವುದು ಎನ್ನುವ ಬಗ್ಗೆ ವಿಚಾರಿಸುತ್ತಿದ್ದಾರೆ. :ಪ್ರತಿ ತಿಂಗಳು ನೌಕರರು ತಮ್ಮ ಸಂಬಳದಿಂದ ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ಕಂಪನಿಯು ಕೂಡಾ ಅಷ್ಟೇ ಪ್ರಮಾಣದ ಮೊತ್ತವನ್ನು ಠೇವಣಿ ಮಾಡುತ್ತದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಕೂಡಾ ಈ ಮೊತ್ತಕ್ಕೆ ಬಡ್ಡಿಯನ್ನು ಪಾವತಿಸುತ್ತದೆ. ಇತ್ತೀಚೆಗೆ ಇಪಿಎಫ್‌ಒ ಪಿಎಫ್ ಮೊತ್ತದ ಮೇಲಿನ ಬಡ್ಡಿ ದರವನ್ನು ಶೇಕಡಾ 8.25ಕ್ಕೆ ಹೆಚ್ಚಿಸಿದೆ.ಇದೀಗ ಕೋಟಿಗಟ್ಟಲೆ ಇಪಿಎಫ್ ಸದಸ್ಯರು ಈ ಮೊತ್ತ ಯಾವಾಗ ಖಾತೆಗೆ ಜಮೆ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಅನೇಕ ಸದಸ್ಯರುಈ ಬಗ್ಗೆ ಆಗಾಗ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.2023-24ರ ಆರ್ಥಿಕ ವರ್ಷದ ಬಡ್ಡಿಯನ್ನು ತಮ್ಮ ಇಪಿಎಫ್ ಖಾತೆಗೆ ಯಾವಾಗ ಜಮಾ ಮಾಡಲಾಗುವುದು ಎನ್ನುವ ಬಗ್ಗೆ ವಿಚಾರಿಸುತ್ತಿದ್ದಾರೆ. ಇದನ್ನೂ ಓದಿ : ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಇದಕ್ಕೆ ಪ್ರತಿಕ್ರಿಯಿಸಿದ ಇಪಿಎಫ್‌ಒ, ಇಪಿಎಫ್ ಸದಸ್ಯರ ಖಾತೆಗಳಿಗೆ ಇಪಿಎಫ್ ಬಡ್ಡಿ ಮೊತ್ತವನ್ನು ಜಮಾ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ.ಇದರ ಹೊರತಾಗಿ,ಬಡ್ಡಿಯ ವಿಷಯದಲ್ಲಿ ಯಾವುದೇ ಸದಸ್ಯರಿಗೆ ಯಾವುದೇ ನಷ್ಟವಾಗದಂತೆ ಇಪಿಎಫ್‌ಒ ನೋಡಿಕೊಳ್ಳಲಿದೆ ಎಂದು ಹೇಳಿದೆ. ಪಿಎಫ್ ಸದಸ್ಯರು ತಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಪರಿಶೀಲಿಸಬಹುದು.ಈ ವಿವರಗಳನ್ನು ಆನ್‌ಲೈನ್‌ನಲ್ಲಿ ಇಪಿಎಫ್‌ಒ ವೆಬ್‌ಸೈಟ್ ಅಥವಾ ಉಮಾಂಗ್ ಅಪ್ಲಿಕೇಶನ್ ಮೂಲಕ ಮತ್ತು ಆಫ್‌ಲೈನ್‌ನಲ್ಲಿ ಎಸ್‌ಎಂಎಸ್ ಅಥವಾ ಮಿಸ್ಟ್ ಕಾಲ್ ಮೂಲಕ ಪರಿಶೀಲಿಸಬಹುದು. ಇಪಿಎಫ್‌ಒ ವೆಬ್‌ಸೈಟ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವ ವಿಧಾನ :- ಮೊದಲು ಇಪಿಎಫ್ ವೆಬ್‌ಸೈಟ್ಗೆ ಹೋಗಿ- ಪೋರ್ಟಲ್‌ಗೆ ಲಾಗ್ ಇನ್ ಮಾಡಿ.- ಅದರಲ್ಲಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.- ನಂತರ ಅದರಲ್ಲಿ ಆಯ್ಕೆಯನ್ನು ಆರಿಸಿ.- ಅದರ ನಂತರ ಆಯ್ಕೆಯನ್ನು ಆರಿಸಿ.- ಇದರಲ್ಲಿ ಉದ್ಯೋಗಿಗಳುಮಾಸಿಕ ಕೊಡುಗೆ ಮತ್ತು ಒಟ್ಟು ಇಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುತ್ತದೆ. ಇದನ್ನೂ ಓದಿ : ಅಪ್ಲಿಕೇಶನ್‌ ಮೂಲಕ ಬ್ಯಾಲೆನ್ಸ್ ಪರಿಶೀಲನೆ :ಉಮಾಂಗ್ ಅಪ್ಲಿಕೇಶನ್ ಮೂಲಕ ಬ್ಯಾಲೆನ್ಸ್ ಪರಿಶೀಲಿಸಲು ಮೊಬೈಲ್‌ನಲ್ಲಿ ಉಮಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.ಈ ಆ್ಯಪ್‌ನಲ್ಲಿ ಉದ್ಯೋಗಿಗಳು 127 ರೀತಿಯ ಸೇವೆಗಳ ಲಾಭವನ್ನು ಪಡೆಯಬಹುದು. ಉಮಾಂಗ್ ಅಪ್ಲಿಕೇಶನ್ ಭಾರತ ಸರ್ಕಾರವು ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಆಗಿದೆ. ಬ್ಯಾಲೆನ್ಸ್ ಪರಿಶೀಲಿಸಲು ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ. ನಂತರ ಆಯ್ಕೆಯನ್ನು ಆರಿಸಿ.ಇದಾದ ನಂತರ ಸಂಖ್ಯೆಯನ್ನು ನಮೂದಿಸಿ. ಈಗ ನಿಮ್ಮ ಮೊಬೈಲ್‌ ಗೆ ಬರುತ್ತದೆ. ಅದನ್ನು ಹಾಕಿ. ನಂತರ, ಇ-ಪಾಸ್‌ಬುಕ್ ವೀಕ್ಷಿಸಲು ಸದಸ್ಯರ ಐಡಿ ಮೇಲೆ ಕ್ಲಿಕ್ ಮಾಡಬೇಕು. ಎಸ್‌ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ? :-ನಿಮ್ಮ ವಿವರಗಳೊಂದಿಗೆ ಅನ್ನು ಸಂಯೋಜಿಸಿದ್ದರೆ,ಈ ಪ್ರಕ್ರಿಯೆಯನ್ನು ಅನುಸರಿಸಿ.- ಮೊಬೈಲ್ ಸಂಖ್ಯೆ 7738299899 ಗೆ ಕಳುಹಿಸಿ- ' ' ಸ್ವರೂಪದಲ್ಲಿ ಕಳುಹಿಸಿ.- ಅಲ್ಲಿ ಕೊನೆಯ ಮೂರು ಅಕ್ಷರಗಳು ಭಾಷೆಯನ್ನು ಸೂಚಿಸುತ್ತವೆ.- ನಿಮ್ಮ ಸಕ್ರಿಯವಾಗಿದ್ದರೆ ಮತ್ತು ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಮತ್ತು ಗೆ ಲಿಂಕ್ ಮಾಡಿದ್ದರೆ ನಂತರ ನೀವು ಕಳುಹಿಸುವ ಮೂಲಕ ಈ ವಿವರವನ್ನು ತಿಳಿದುಕೊಳ್ಳಬಹುದು.ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಮತ್ತು ಪ್ಯಾನ್‌ನೊಂದಿಗೆ ನಿಮ್ಮ ಅನ್ನು ಲಿಂಕ್ ಮಾಡದಿದ್ದರೆ, ಮೂಲಕ ನಿಮ್ಮ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ನೊಂದಿಗೆ ಅನ್ನು ಪೂರ್ಣಗೊಳಿಸಬೇಕು. ಇದನ್ನೂ ಓದಿ : ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? :ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9966044425ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...