ಕೈಗೆಟಕುವ ದರದಲ್ಲಿ ಎಸಿ,ಫ್ರಿಡ್ಜ್,ಟಿವಿ,ವಾಷಿಂಗ್ ಮೆಷಿನ್!ಆರಂಭವಾಗಿದೆ ಮುಖೇಶ್ ಅಂಬಾನಿಯ ಹೊಸ ಬಿಸಿನೆಸ್! : ಅನೇಕ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಿಗೆ ಪೈಪೋಟಿ ನೀಡಲು ವೈಜರ್ ಎಂಬ ಹೊಸ ಬ್ರಾಂಡ್‌ನೊಂದಿಗೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳ ಮಾರುಕಟ್ಟೆಯನ್ನು ರಿಲಯನ್ಸ್ ಪ್ರವೇಶಿಸಲಿದೆ. :ಇಂದು ರಿಲಯನ್ಸ್ ಇಂಡಸ್ಟ್ರೀಸ್ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ. ಇದೀಗ ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಪೈಪೋಟಿ ನೀಡಲು ವೈಜರ್ ಎಂಬ ಹೊಸ ಬ್ರಾಂಡ್‌ನೊಂದಿಗೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳ ಮಾರುಕಟ್ಟೆಯನ್ನು ರಿಲಯನ್ಸ್ ಪ್ರವೇಶಿಸಲಿದೆ.ವರದಿಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರಿಯಲ್‌ನ ಇತ್ತೀಚಿನ ಆವಿಷ್ಕಾರವಾಗಿದೆ.ಇದು ಭಾರತದಾದ್ಯಂತ ಲಾಂಚ್ ಆಗಲಿದೆ.ಇದರೊಂದಿಗೆ ಕಂಪನಿಯು ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳ ಕ್ಷೇತ್ರವನ್ನು ಪ್ರವೇಶಿಸುತ್ತಿದೆ. ಅಗ್ಗದ ದರದಲ್ಲಿ ಎಸಿ, ಫ್ರಿಡ್ಜ್, ಟಿವಿ, ಕೂಲರ್ :ಕಳೆದ ವರ್ಷ ಭಾರತದಲ್ಲಿ ತಯಾರಿಸಿದ ಗ್ರಾಹಕ ಸರಕುಗಳಅನ್ನು ಪ್ರಾರಂಭಿಸಲಾಯಿತು. ಕಂಪನಿಯು ಈ ಬ್ರಾಂಡ್‌ನೊಂದಿಗೆ ಹಿಟ್ಟು, ಅಕ್ಕಿ ಮತ್ತು ಕಾಳುಗಳಂತಹ ಕಡಿಮೆ ಬೆಲೆಯ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. ಇದನ್ನೂ ಓದಿ : ಈ ನಡುವೆ, ಇದೀಗ ರಿಲಯನ್ಸ್ ಅಗ್ಗದ ಎಸಿಗಳು, ಫ್ರಿಜ್, ಟಿವಿ, ಕೂಲರ್ ಗಳಂತಹ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ವ್ಯಾಪಾರವನ್ನು ಪ್ರವೇಶಿಸಲು ಸಜ್ಜಾಗಿದೆ.ಗೃಹೋಪಯೋಗಿ ವಸ್ತುಗಳ ವ್ಯವಹಾರಕ್ಕೆ ಕಾಲಿಡುತ್ತಿದ್ದಂತೆ ವಿದೇಶಿ ಕಂಪನಿಗಳ ಪ್ರಾಬಲ್ಯವನ್ನು ಕೊನೆಗಾಣಿಸಲು ಸಂಸ್ಥೆ ಸಜ್ಜಾಗಿದೆ. ಬ್ರ್ಯಾಂಡ್ ಪರಿಚಯ :ಏರ್ ಕೂಲರ್‌ಗಳನ್ನು ಈಗಾಗಲೇ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ರಿಟೇಲ್ ಅಂಗವಾದ ರಿಲಯನ್ಸ್ ರೀಟೈಲ್ ಬಿಡುಗಡೆ ಮಾಡಿದೆ.ಈ ಮೂಲಕ ತನ್ನ ಕಂಪನಿಯ ಇತ್ತೀಚಿನ ಬ್ರಾಂಡ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದನ್ನು ಸಾರಿದಂತಾಗಿದೆ. ಇದರೊಂದಿಗೆ ಟೆಲಿವಿಷನ್‌, ವಾಷಿಂಗ್ ಮೆಷಿನ್, ರೆಫ್ರಿಜರೇಟರ್‌ಗಳು, ಏರ್ ಕಂಡಿಷನರ್‌ಗಳು, ಸಣ್ಣ ಉಪಕರಣಗಳು ಮತ್ತು ಎಲ್‌ಇಡಿ ಬಲ್ಬ್‌ಗಳಂಥಹ ಉತ್ಪನ್ನಗಳನ್ನು ಪ್ರಾರಂಭಿಸಲು ಯೋಜಿಸಿದೆ. ಇದನ್ನೂ ಓದಿ : ಬ್ರಾಂಡ್ ಉತ್ಪನ್ನಗಳು ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು, ಡೀಲರ್‌ಗಳು, ಪ್ರಾದೇಶಿಕ ಚಿಲ್ಲರೆ ಅಂಗಡಿಗಳು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಬೇರೆ ಬೇರೆ ಪ್ಲಾಟ್ ಫಾರಂ ಗಳಲ್ಲಿ ಲಭ್ಯವಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...