ಬೇಸಿಗೆ ಬಿಸಿಲಿನ ಎಫೆಕ್ಟ್ :ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ :ಎಷ್ಟಿದೆ ನೋಡಿ ಇಂದಿನ ಬೆಲೆ : ದಿನೇ ದಿನೇ ತರಕಾರಿಯ ಬೆಲೆ ಹೆಚ್ಚಳದಿಂದಾಗಿ ಗ್ರಾಹಕರು ತರಕಾರಿಖರೀದಿಗೆ ಮುಂದಾಗುತ್ತಿಲ್ಲ.ವ್ಯಾಪಾರಿಗಳು ತಂದ ತರಕಾರಿಗಳು ಹಾಗೆಯೇ ಒಣಗಿ ಹೋಗುತ್ತವೆ. ಬೆಂಗಳೂರು :ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ತರಕಾರಿಗಳು ಪೂರೈಕೆಯಾಗುತ್ತಿಲ್ಲ. ಕಾರಣ ತರಕಾರಿ ಬೆಲೆ ಗಗನಕ್ಕೇರಿದೆ.ತರಕಾರಿ ಬೆಲೆ ಇಷ್ಟೊಂದು ಏರಿಕೆ ಕಂಡಿರುವುದು ವ್ಯಾಪಾರಿಗಳನ್ನು ಕೂಡಾ ಚಿಂತೆಗೆ ಈಡುಮಾಡಿದೆ. ಚಿಲ್ಲರೆ ವ್ಯಾಪಾರಿಗಳು ತರಕಾರಿ ತಂದು ಮಾರಾಟ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ದಿನೇ ದಿನೇಹೆಚ್ಚಳದಿಂದಾಗಿ ಗ್ರಾಹಕರು ತರಕಾರಿಖರೀದಿಗೆ ಮುಂದಾಗುತ್ತಿಲ್ಲ.ವ್ಯಾಪಾರಿಗಳು ತಂದ ತರಕಾರಿಗಳು ಹಾಗೆಯೇ ಒಣಗಿ ಹೋಗುತ್ತವೆ.ಸದ್ಯಕ್ಕೆ ಮಳೆ ಬಂದರೂ ಹೊಸ ತರಕಾರಿ ಬರಲು 2 ತಿಂಗಳಾದರೂ ಕಾಲವಕಾಶಬೇಕು. ಹಾಗಾಗಿ ಸದ್ಯಕ್ಕೆ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದನ್ನೂ ಓದಿ : ಮಾರುಕಟ್ಟೆಯಲ್ಲಿ ತರಕಾರಿ ದರ :ಹುರುಳಿಕಾಯಿ ಕೆಜಿಗೆ 200 ರೂ.ಕ್ಯಾರೆಟ್‌ - 10 ರೂ .ಟಮೋಟೋ - 30 ರೂ.ಕ್ಯಾಪ್ಸಿಕಂ - 80 ರೂ.ಆಲೂಗೆಡ್ಡೆ - 40 ರೂ.ಬದನೆಕಾಯಿ - 50 ರೂ.ಗೆಡ್ಡೆಕೋಸು - 50 ರೂ .ಸೌತೆಕಾಯಿ - 50 ರೂ.ಬಾಟಲ್ ಬದನೆ- 60 ರೂ.ಸೌತೆಕಾಯಿ -48ರೂ.ನುಗ್ಗೆಕಾಯಿ -44 ರೂ.ಬೆಳ್ಳುಳ್ಳಿ -294 ರೂ.ಹಾಗಲಕಾಯಿ - 59 ರೂ.ಬೆಂಡೆಕಾಯಿ - 60ರೂ. ಇದನ್ನೂ ಓದಿ : ಮಳೆಯ ಕೊರತೆ, ಬಿಸಿಲಿನ ತಾಪ, ಬರ, ಬಿತ್ತನೆ ಕಡಿಮೆಯಾಗಿರುವುದು, ಇಳುವರಿ ಕುಂಠಿತವಾಗಿರುವ ಪರಿಣಾಮ ತರಕಾರಿಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಸದ್ಯಕ್ಕಂತೂ ಈ ಬೆಲೆಯಲ್ಲಿ ಇಳಿಕೆಯಾಗುವ ಯಾವ ಲಕ್ಷಣಗಳೂ ಕಂಡು ಬರುತ್ತಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...