ಲಂಡನ್, ಅಬುದಾಬಿಯಲ್ಲಿ ಅಲ್ಲ, ಇಲ್ಲಿ ನೆರವೇರಲಿದೆ ಅನಂತ್ ಅಂಬಾನಿ ವಿವಾಹ ! ನಡೆಯುತ್ತಿದೆ ಅದ್ದೂರಿ ತಯಾರಿ : ಕುಟುಂಬದ ಕಿರಿಯ ಮಗನ ಮದುವೆಯನ್ನು ಅವಿಸ್ಮರಣೀಯವಾಗಿಸಲು ಅಂಬಾನಿ ಕುಟುಂಬದ ಸಿದ್ಧತೆಗಳು ಪ್ರಾರಂಭವಾಗಿವೆ.ಜಾಮ್‌ನಗರದಲ್ಲಿ ನಡೆದ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮಗಳ ನಂತರ ಇದೀಗ ಎಲ್ಲರ ಕಣ್ಣು ಅನಂತ್ ಮತ್ತು ರಾಧಿಕಾ ಮದುವೆಯತ್ತ ನೆಟ್ಟಿದೆ. :ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹವಾಗಲಿದ್ದಾರೆ.ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನಗಳ ಕಾಲ ನಡೆದ ವಿವಾಹ ಪೂರ್ವ ಕಾರ್ಯಕ್ರಮದ ನಂತರ ಇದೀಗ ಅಂಬಾನಿ ಕುಟುಂಬದಲ್ಲಿ ಮದುವೆಯ ತಯಾರಿ ಜೋರಾಗಿ ನಡೆಯುತ್ತಿದೆ.ಕುಟುಂಬದ ಕಿರಿಯ ಮಗನ ಮದುವೆಯನ್ನು ಅವಿಸ್ಮರಣೀಯವಾಗಿಸಲು ಸಿದ್ಧತೆಗಳು ಪ್ರಾರಂಭವಾಗಿವೆ. ಜಾಮ್‌ನಗರದಲ್ಲಿ ನಡೆದ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮಗಳ ನಂತರ ಇದೀಗ ಎಲ್ಲರ ಕಣ್ಣು ಅನಂತ್ ಮತ್ತು ರಾಧಿಕಾ ಮದುವೆಯತ್ತ ನೆಟ್ಟಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮದುವೆ ಎಲ್ಲಿ ನಡೆಯಲಿದೆ? :ಈ ಹಿಂದೆಮದುವೆ ಲಂಡನ್‌ನಲ್ಲಿ ನಡೆಯಲಿದೆ, ಸಂಗೀತ ಅಬುಧಾಬಿಯಲ್ಲಿ ನಡೆಯಲಿದೆ ಎನ್ನುವ ಸುದ್ದಿ ಬಂದಿತ್ತು. ಆದರೆ, ಈಗ ಈ ಪ್ಲಾನ್‌ನಲ್ಲಿ ಬದಲಾವಣೆಯಾಗಿದೆ ಎನ್ನಲಾಗುತ್ತಿದೆ.ವರದಿ ಪ್ರಕಾರ, ಅನಂತ್ ಮತ್ತು ರಾಧಿಕಾ ಮದುವೆ ಲಂಡನ್ ಅಥವಾ ಅಬುಧಾಬಿಯಲ್ಲಿ ನಡೆಯುವುದಿಲ್ಲ ಬದಲಿಗೆ ಭಾರತದಲ್ಲಿಯೇ ನಡೆಯಲಿದೆ ಎಂಬ ಸುದ್ದಿ ಇದೆ.ಅನಂತ್ ಮತ್ತು ರಾಧಿಕಾ ಮುಂಬಯಿಯಲ್ಲಿಯೇ ಸಪ್ತಪದಿ ತುಳಿಯಲಿದ್ದಾರೆ. ಇದನ್ನೂ ಓದಿ: ಮೂರು ದಿನಗಳ ವಿಶೇಷ ಕಾರ್ಯಕ್ರಮ :ಲಂಡನ್‌ನ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿನಡೆಯಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಅಬುಧಾಬಿಯಲ್ಲಿ ಈ ಜೋಡಿಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಎನ್ನುವ ಮಾತು ಕೂಡಾ ಇತ್ತು.ಇತ್ತೀಚೆಗೆ, ಸೆಲೆಬ್ರಿಟಿ ಛಾಯಾಗ್ರಾಹಕ ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಮೆಗಾ ವೆಡ್ಡಿಂಗ್ ಕಾರ್ಯಕ್ರಮದ ಬಗ್ಗೆ ದೊಡ್ಡ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅನಂತ್ ಮತ್ತು ರಾಧಿಕಾ ಮದುವೆ ವಿದೇಶದ ಬದಲು ಭಾರತದಲ್ಲಿಯೇ ನಡೆಯಲಿದೆ ಎಂದು ಹೇಳಿದ್ದಾರೆ. ಜುಲೈ 12 ರಂದು ಅನಂತ್-ರಾಧಿಕಾ ವಿವಾಹ :ಪ್ರಧಾನಿ ಮೋದಿಯವರ 'ವೆಡ್ ಇನ್ ಇಂಡಿಯಾ' ಮನವಿಯಿಂದ ಅಂಬಾನಿ ಕುಟುಂಬ ಪ್ರಭಾವಿತವಾಗಿದ್ದು, ಅನಂತ್ ಮತ್ತು ರಾಧಿಕಾ ಮದುವೆ ಮುಂಬೈನಲ್ಲಿಯೇ ನಡೆಯಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.ಆದರೆ,ಈ ಬಗ್ಗೆ ಅಂಬಾನಿ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಜುಲೈ 12 ರಂದು ಅನಂತ್ ಮತ್ತು ರಾಧಿಕಾ ವಿವಾಹವಾಗಲಿದ್ದಾರೆ.ಈ ವಿವಾಹ ಕಾರ್ಯಕ್ರಮಕ್ಕಾಗಿ ತಾಯಿ ನೀತಾ ಅಂಬಾನಿ ವಿಶೇಷ ತಯಾರಿ ನಡೆಸುತ್ತಿದ್ದಾರೆ. ಇದನ್ನೂ ಓದಿ : ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಅತಿಥಿಗಳ ಪಟ್ಟಿ :ಅನಂತ್ ಮತ್ತು ರಾಧಿಕಾ ಮದುವೆಗೆ ವಿಶೇಷ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ.ಬಾಲಿವುಡ್ ಸೆಲೆಬ್ರಿಟಿಗಳಿಗೆ ಮದುವೆಯ ಆಮಂತ್ರಣಗಳನ್ನು ಈಗಾಗಲೇ ಕಳುಹಿಸಲಾಗಿದೆ.ವರದಿಗಳನ್ನು ನಂಬುವುದಾದರೆ, 9 ಪುಟಗಳ ಮದುವೆ ಕಾರ್ಡ್ ಅನ್ನು ಸಿದ್ಧಪಡಿಸಲಾಗಿದೆ.ಬಾಲಿವುಡ್‌ನಿಂದ ಹಿಡಿದು ವಿದೇಶಿ ಅತಿಥಿಗಳು ಈ ಮದುವೆಗೆ ಆಗಮಿಸಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...