: ರಿಯಾಯಿತಿ ಹೆಸರಿನಲ್ಲಿ ಮೋಸ ಹೋಗದಿರಿ, ಕಾರ್ ವಿಮೆ ಕೊಳ್ಳುವಾಗ ನೆನಪಿರಲಿ ಈ ವಿಷಯ : ಏನನ್ನಾದರೂ ಕೊಳ್ಳುವಾಗ ರಿಯಾಯಿತಿಗಳನ್ನು ಹುಡುಕುವುದು ಸರ್ವೇ ಸಾಮಾನ್ಯ. ವಿಮೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಕೆಲವರು ವಿಮಾ ಹೆಸರಿನಲ್ಲೂ ಸಹ ಗ್ರಾಹಕರನ್ನು ವಂಚಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿದೆಯೇ? :ಪ್ರಸ್ತುತ ಬದಲಾದ ಜೀವನ ಶೈಲಿಯಲ್ಲಿ ಕಾರು ಕೊಳ್ಳುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದೆ. ಕಾರ್ ಖರೀದಿಸುವಾಗ ಭವಿಷ್ಯದ ದೃಷ್ಟಿಯಿಂದ ಕಾರ್ ವಿಮೆ ಕೊಳ್ಳುವುದು ಕೂಡ ಅವಶ್ಯಕ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಸ್ಕ್ಯಾಮರ್‌ಗಳು ರಿಯಾಯಿತಿಯಲ್ಲಿ ಅಗ್ಗದ ವಿಮಾ ಯೋಜನೆಗಳ ಮೂಲಕ ಜನರನ್ನು ವಂಚಿಸುತ್ತಿದ್ದಾರೆ. ನೀವು ಇಂತಹ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಕಾರ್ ವಿಮೆ ಕೊಳ್ಳುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡುವುದು ತುಂಬಾ ಅವಶ್ಯಕ. ಹೌದು,( ) ಹೆಸರಿನಲ್ಲಿ ಗ್ರಾಹಕರನ್ನು ವಂಚಿಸುತ್ತಿರುವ ಹಲವು ಪ್ರಕರಣಗಳು ಮುನ್ನಲೆಗೆ ಬರಲಾರಂಭಿಸಿವೆ. ಇಂತಹ ವಂಚನೆಗಳಿಂದ ಬಚಾವ್ ಆಗಲು ವಿಮೆ ಕೊಳ್ಳುವಾಗ ಕೆಲವು ವಿಚಾರಗಳ ಬಗ್ಗೆ ಎಚ್ಚರಿಕೆವಹಿಸುವುದು ಅಗತ್ಯ. ನೀವು ಕಾರ್ ವಿಮೆಯನ್ನು ಖರೀದಿಸುತ್ತಿದ್ದರೆ ( ) ಅಂತಹ ಸಂದರ್ಭದಲ್ಲಿ ಈ ಪ್ರಮುಖ ವಿಚಾರಗಳ ಬಗ್ಗೆ ವಿಶೇಷ ಗಮನಹರಿಸಿ. ಅವುಗಳೆಂದರೆ... ಇದನ್ನೂ ಓದಿ- ಕಾರ್ ವಿಮಾ ಪಾಲಿಸಿಯನ್ನು ಖರೀದಿಸುವಾಗ ನೆನಪಿಡಬೇಕಾದ ಅಂಶಗಳೆಂದರೆ...* ನೀವು( ) ಖರೀದಿಸುವಾಗ ಅದರ ಪೇಪರ್‌ಗಳನ್ನು ಎಚ್ಚರಿಕೆಯಿಂದ ಓದಿ. ಆನ್‌ಲೈನ್‌ನಲ್ಲಿ ನೀಡಿರುವ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ. * ನೀವು ವಿಮೆಯನ್ನು ಪಡೆಯಲು ಹೊರಟಿರುವ ಕಂಪನಿಯ ಹೆಸರನ್ನು ಐ‌ಆರ್‌ಡಿ‌ಎಐ () ಪೋರ್ಟಲ್‌ನಲ್ಲಿ ಪರಿಶೀಲಿಸುವುದನ್ನು ಮರೆಯಬೇಡಿ. * ವಿಮಾ ಪಾಲಿಸಿಯಲ್ಲಿ ಸಂಖ್ಯೆಯನ್ನು ಪರೀಕ್ಷಿಸಲು ಮರೆಯದಿರಿ. ವಾಸ್ತವವಾಗಿ, ಯುಐಡಿ ಸಂಖ್ಯೆಯು ಪ್ರತಿ ಪಾಲಿಸಿಗೆ ನಿಂದ ನೀಡುವ ಸಂಖ್ಯೆಯಾಗಿದ್ದು, ಈ ಸಂಖ್ಯೆ ಇಲ್ಲದಿದ್ದರೆ ಅದು ನಕಲಿ ಪಾಲಿಸಿಯಾಗಿರುತ್ತದೆ. * ಪ್ರತಿ ವಿಮಾ ಪಾಲಿಸಿಗೆ ಕ್ಯೂಆರ್ ಕೋಡ್ ಅಗತ್ಯ. ಈ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ನೀವು ಪಾಲಿಸಿಯ ವಿವರಗಳನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ ಇದು ನಿಮ್ಮ ಪಾಲಿಸಿ ಅಸಲಿಯೋ/ನಕಲಿಯೋ ಎಂಬುದನ್ನೂ ಕೊಡೋಯ ಸಾಬೀತುಪಡಿಸುತ್ತದೆ. ಇದನ್ನೂ ಓದಿ- * ನೀವು ಕಾರ್ ವಿಮೆಯನ್ನು ( ) ಖರೀದಿಸುವಾಗ ಆನ್‌ಲೈನ್ ಅಥವಾ ಚೆಕ್ ಮೂಲಕ ಪಾವತಿ ಮಾಡಿ. ಇದನ್ನು ಏಜೆಂಟ್ ಬದಲಿಗೆ ನೇರವಾಗಿ ಕಂಪನಿಯ ಹೆಸರಿಗೆ ಮಾಡುವುದು ಒಳ್ಳೆಯದು. * ಕಂಪನಿಯ ಕಸ್ಟಮರ್ ಕೇರ್‌ನಿಂದ ಪಾಲಿಸಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಮರೆಯದಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...