20 ರೂಪಾಯಿಗೆ ಊಟ, 3 ರೂ.ಗೆ ನೀರು ರೈಲ್ವೆ ಹೊರ ತಂದಿದೆ ಹೊಸ ಫುಡ್ ಚಾರ್ಟ್ :ರೈಲಿನಲ್ಲಿ ಪ್ರಯಾಣಿಸುವಾಗ ಇನ್ನು ಮುಂದೆ ಅತ್ಯಂತ ಕಡಿಮೆ ಬೆಲೆಯಲ್ಲಿ ಆಹಾರ ಲಭ್ಯವಿರುತ್ತದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೂ ಅಗ್ಗದ ಆಹಾರ ಮಳಿಗೆಗಳನ್ನು ತೆರೆಯಲಾಗಿದೆ. :ರೈಲ್ವೇಯಿಂದ ಪ್ರಯಾಣಿಕರಿಗೆ ಕಾಲಕಾಲಕ್ಕೆ ಹಲವು ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಕೇವಲ 20 ರೂಪಾಯಿಗಳಲ್ಲಿ ಆಹಾರವನ್ನು ಪರಿಚಯಿಸಿದೆ.ಇದರೊಂದಿಗೆ 3 ರೂ.ಗೆ ನೀರು ಕೂಡಾ ಸಿಗಲಿದೆ. ಅಂದರೆ ರೈಲಿನಲ್ಲಿ ಪ್ರಯಾಣಿಸುವಾಗ ಇನ್ನು ಮುಂದೆ ಅತ್ಯಂತ ಕಡಿಮೆ ಬೆಲೆಯಲ್ಲಿ ಆಹಾರ ಲಭ್ಯವಿರುತ್ತದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿಯೂ ಅಗ್ಗದ ಆಹಾರ ಮಳಿಗೆಗಳನ್ನು ತೆರೆಯಲಾಗಿದೆ. ಚೋಲೆ-ಬಟುರಾ, ಖಿಚಡಿ ಸೇರಿದಂತೆ ಹಲವು ರೀತಿಯ ಆಯ್ಕೆಗಳನ್ನು ರೈಲ್ವೆ ಪ್ರಯಾಣಿಕರಿಗೆ ನೀಡಿದೆ. ಭಾರತೀಯ ರೈಲ್ವೇ ಈ ಸೌಲಭ್ಯವನ್ನು ಭಾರತೀಯ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಸಹಯೋಗದೊಂದಿಗೆ ಪ್ರಾರಂಭಿಸಿದೆ. ಇದನ್ನೂ ಓದಿ : ಜನರಲ್ ಕೋಚ್ ಎದುರು ಸ್ಟಾಲ್ :ಪ್ರಸ್ತುತ ರೈಲ್ವೆಯು 100ಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ 150 ಸ್ಟಾಲ್‌ಗಳನ್ನು ಆರಂಭಿಸಿದೆ. ಜನರಲ್ ಕೋಚ್ ಮುಂಭಾಗದ ಪ್ಲಾಟ್‌ಫಾರ್ಮ್‌ನಲ್ಲಿ ಈ ಸ್ಟಾಲ್‌ಗಳನ್ನು ಹಾಕಲಾಗಿದೆ. ಜನರಲ್ ಕೋಚ್ ನಲ್ಲಿ ಪ್ರಯಾಣಿಸುವವರಿಗೆ ಅಗ್ಗದ ದರದಲ್ಲಿ ಆಹಾರ ಸಿಗುತ್ತವೆ. ಈ ಸ್ಟಾಲ್‌ನಲ್ಲಿ ಎರಡು ಆಯ್ಕೆಯಲ್ಲಿ ಆಹಾರ ನೀಡಲಾಗುತ್ತದೆ. ಮೊದಲನೆಯದ್ದು, 20 ರೂ.ಗೆ ಸಿಗುವ ಆಹಾರ ಹಾಗೂ ಎರಡನೇಯದ್ದು 50 ರೂ.ಗೆ ಸಿಗುವ ಆಹಾರ. 20 ರೂ.ಗೆ ಪುರಿ-ಪಲ್ಯ :ರೈಲ್ವೆ ನಿಗದಿಪಡಿಸಿದೆ. 20 ರೂಪಾಯಿಗೆ ಪೂರಿ, ಪಲ್ಯ , ಉಪ್ಪಿನಕಾಯಿ ಸಿಗುತ್ತದೆ. ಇದರಲ್ಲಿ 7 ಪೂರಿ ಜೊತೆಗೆ 150 ಗ್ರಾಂ ತರಕಾರಿ ಸಿಗಲಿದೆ. 50 ರೂಪಾಯಿಗೆ ಏನು ಸಿಗುತ್ತದೆ?:ಇದಲ್ಲದೇ 50 ರೂ.ಗೆ ಸಿಗುವ ಆಹಾರದಲ್ಲಿ ರಾಜ್ಮಾ-ರೈಸ್, ಖಿಚಡಿ-ಪೊಂಗಲ್, ಚೋಲೆ-ಕುಲ್ಚೆ, ಚೋಲೆ-ಬಟುರಾ ಮತ್ತು ಮಸಾಲೆ ದೋಸೆ ಸಿಗುತ್ತದೆ. ಇದರಲ್ಲಿ ಯಾವುದನ್ನು ಬೇಕಾದರೂ ಆರಿಸಬಹುದು. ಇದನ್ನೂ ಓದಿ : 3 ರೂ.ಗೆ ನೀರು :ಇದಲ್ಲದೆ, ನೀರು ಸಹ ಸಾಕಷ್ಟು ಅಗ್ಗವಾಗಿದೆ. ನೀರಿಗಾಗಿ ಕೇವಲ 3 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. 200 ಎಂಎಂ ಪ್ಯಾಕೇಜ್ ಮಾಡಿದ ಸೀಲ್ಡ್ ವಾಟರ್ ಗ್ಲಾಸ್‌ಗಳನ್ನು 3ಗೆ ನೀಡಲಾಗುತ್ತದೆ. ಈ ಹಿಂದೆ 51 ನಿಲ್ದಾಣಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು :ಕಳೆದ ವರ್ಷ ಸುಮಾರು 51 ನಿಲ್ದಾಣಗಳಲ್ಲಿ ರೈಲ್ವೇ ಈ ಬಗ್ಗೆ ಟೆಸ್ಟಿಂಗ್ ನಡೆಸಿದ್ದು, ಇದರಲ್ಲಿ ಸಾಕಷ್ಟು ಯಶಸ್ವಿಯಾಗಿತ್ತು.ನಂತರ, ರೈಲ್ವೆಯು ಈ ಆಧಾರದ ಮೇಲೆ ಕಡಿಮೆ ಬೆಲೆಯ ಆಹಾರದ ಕಲ್ಪನೆಯನ್ನು ವಿಸ್ತರಿಸಿದೆ. ಇದೀಗ 100 ಸ್ಟಾಲ್‌ಗಳನ್ನು ಪ್ರಾರಂಭಿಸಿದೆ. ಅಂದರೆ ಈಗ ಒಟ್ಟು 151 ಸ್ಟಾಲ್‌ಗಳಲ್ಲಿ ಕಡಿಮೆ ಬೆಲೆಯ ಆಹಾರ ಸಿಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...