ಇಪಿಎಫ್ ಖಾತೆ ಯುಎಎನ್ ಪಾಸ್‌ವರ್ಡ್ ಮರೆತಿದ್ದೀರಾ? ಈ ರೀತಿ ಸುಲಭವಾಗಿ ಮರುಹೊಂದಿಸಿ! : ಪಿ‌ಎಫ್ ಖಾತೆಯನ್ನು ನಿರ್ವಹಿಸಲು ಸಾರ್ವತ್ರಿಕ ಖಾತೆ ಸಂಖ್ಯೆ ಎಂದರೆ ಯುಎಎನ್ ಹೊಂದಿರುವುದು ತುಂಬಾ ಮುಖ್ಯ. ಆದರೆ, ನಿವೇನಾದರೂ ಯುಎಎನ್ ಸಂಖ್ಯೆಯ ಪಾಸ್‌ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. :ನೌಕರರ ಭವಿಷ್ಯ ನಿಧಿ ಅಥವಾ ಇಪಿಎಫ್ ಖಾತೆಯನ್ನು ನಿರ್ವಹಿಸಲು ಯುನಿವರ್ಸಲ್ ಖಾತೆ ಸಂಖ್ಯೆ ಅಥವಾ ಯುಎಎನ್ ಅತ್ಯಂತ ಪ್ರಮುಖ ಮಾಹಿತಿಯಾಗಿದೆ. ಯುಎಎನ್ ಖಾತೆಯನ್ನು ನಿರ್ವಹಿಸಲು ಪಾಸ್‌ವರ್ಡ್ ಕೊಡೋಯ ಅಗತ್ಯ. ಆದಾಗ್ಯೂ, ನೀವು ಈ ಯುಎಎನ್ ಖಾತೆಯ ಪಾಸ್‌ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವೇ ಕೆಲವು ಸುಲಭ ಹಂತಗಳನ್ನು ಅನುಸರಿಸಿ ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಯುಎಎನ್ ಪಾಸ್‌ವರ್ಡ್ ಮರು ಹೊಂದಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ!ಹಂತ 1:- ಇಪಿಎಫ್ ವೆಬ್‌ಸೈಟ್‌ಗೆ ಭೇಟಿ ನೀಡಿನೀವು ನಿಮ್ಮಮರುಹೊಂದಿಸಲು ( ) ಮೊದಲಿಗೆ ಯುಎಎನ್ ಪೋರ್ಟಲ್‌ಗೆ -.... ಭೇಟಿ ನೀಡಬೇಕು. ಹಂತ 2: - ಪಾಸ್‌ವರ್ಡ್ ಮರೆತುಹೋಗಿದೆ ಆಯ್ಕೆಯನ್ನು ಆರಿಸಿಪೋರ್ಟಲ್‌ನಲ್ಲಿ ಪಾಸ್‌ವರ್ಡ್ ಮರೆತು ಹೋಗಿದೆ ( ) ಎಂಬ ಆಯ್ಕೆಯನ್ನು ಆರಿಸಿ. ಹಂತ 3:- ಯುಎಎನ್ ಮತ್ತು ಕ್ಯಾಪ್ಚಾ ನಮೂದಿಸಿನಂತರ ನಿಗದಿತ ಬಾಕ್ಸ್ ನಲ್ಲಿ() ನಮೂದಿಸಿ ಸ್ಕ್ರೀನ್ ಮೇಲೆ ಕಾಣಿಸುವ ಕ್ಯಾಪ್ಚಾವನ್ನು ನಮೂದಿಸಿ. ಇದನ್ನೂ ಓದಿ- ಹಂತ 4:- ಓ‌ಟಿ‌ಪಿ ಪರಿಶೀಲನೆಯುಎಎನ್ ಕ್ಯಾಪ್ಚಾವನ್ನು ನಮೂದಿಸಿಸ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಓ‌ಟಿ‌ಪಿ (ಒನ್ ಟೈಮ್ ಪಾಸ್‌ವರ್ಡ್) ಅನ್ನು ಪೋರ್ಟಲ್‌ನಲ್ಲಿ ನಮೂದಿಸಿ. ಹಂತ 5:- ಪಾಸ್‌ವರ್ಡ್ ಮರುಹೊಂದಿಸಿಓಟಿಪಿ ನಮೂದಿಸಿದ ಬಳಿಕ ಪಾಸ್‌ವರ್ಡ್ ಮರುಹೊಂದಿಸಲು ಕೇಳಲಾಗುತ್ತದೆ. ನಿಗದಿತ ಮಾನದಂಡಗಳನ್ನು ಪೂರೈಸುವ ಬಲವಾದ ಪಾಸ್‌ವರ್ಡ್ ನಮೂದಿಸಿ. ಇದನ್ನೂ ಓದಿ- ಹಂತ 6:- ಹೊಸ ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಇನ್ ಆಗಿನೀವು ಹೊಸ ಪಾಸ್‌ವರ್ಡ್ ಅನ್ನು ಮರುಹೊಂದಿಸಿದ ಬಳಿಕ ಪೇಜ್ ರಿಫ್ರೇಶ್ ಮಾಡಿ, ಹೊಸ ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಇನ್ ಮಾಡಿ. ಸುರಕ್ಷತೆ ದೃಷ್ಟಿಯಿಂದ ನಿಮ್ಮ ಈ ಪಾಸ್‌ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...