ಹೆಚ್ಚಿದ ತುಟ್ಟಿಭತ್ಯೆಯೊಂದಿಗೆ ಅರಿಯರ್ಸ್ ಕೂಡಾ ಖಾತೆಗೆ!ಈ ದಿನ ಸರ್ಕಾರಿ ನೌಕರರ ಖಾತೆ ಸೇರುವುದು ಭರ್ಜರಿ ಮೊತ್ತ! ಮಾರ್ಚ್ ತಿಂಗಳಿನಲ್ಲಿ ನೌಕರರ ವೇತನದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಅಂದರೆ ಮಾರ್ಚ್ ತಿಂಗಳ ವೇತನದಲ್ಲಿ ಹೆಚ್ಚಳವಾದ ತುಟ್ಟಿಭತ್ಯೆ ಮೊತ್ತವನ್ನು ವರ್ಗಾಯಿಸಲಿಲ್ಲ. :ನೀವೇ ಕೇಂದ್ರ ಉದ್ಯೋಗಿಯಾಗಿದ್ದರೆ ಅಥವಾ ನಿಮ್ಮ ಕುಟುಂಬದ ಯಾರಾದರೂ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಈ ಸುದ್ದಿ ನಿಮಗಾಗಿ.ಮಾರ್ಚ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರವು ಶೇಕಡಾ 4 ರಷ್ಟು ಡಿಎ ಹೆಚ್ಚಳವನ್ನು ಘೋಷಿಸಿತು.ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ಡಿಆರ್ ನಲ್ಲಿ ಏರಿಕೆ ಕಂಡು ಬಂತು. ಇದಾದ ನಂತರ ಡಿಎ ಮತ್ತು ಡಿಆರ್ ಅನ್ನು ಶೇಕಡಾ 50ಕ್ಕೆ ಹೆಚ್ಚಿಸಲಾಯಿತು. ವರದಿಗಳ ಪ್ರಕಾರ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳ :ಏಪ್ರಿಲ್ ವೇತನದ ಜೊತೆಗೆ, ಉದ್ಯೋಗಿಗಳು ಹೆಚ್ಚಿದ ಸಂಬಳ ಮತ್ತುಪಡೆಯುವ ನಿರೀಕ್ಷೆಯಿದೆ.2024ರ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದ್ದರೂ,ಮಾರ್ಚ್ ತಿಂಗಳಿನಲ್ಲಿ ನೌಕರರ ವೇತನದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಅಂದರೆ ಮಾರ್ಚ್ ತಿಂಗಳ ವೇತನದಲ್ಲಿ ಹೆಚ್ಚಳವಾದ ತುಟ್ಟಿಭತ್ಯೆ ಮೊತ್ತವನ್ನು ವರ್ಗಾಯಿಸಲಿಲ್ಲ.ಇನ್ನು ಡಿಎ ಹೆಚ್ಚಳದ ಜೊತೆಗೆ ಮಾರ್ಚ್ 2024ರ ವೇತನದ ಮೊದಲು ಬಾಕಿ ಪಾವತಿಯನ್ನು ಮಾಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದನ್ನೂ ಓದಿ : ಡಿಎ ಮತ್ತು ಡಿಆರ್ ಎಂದರೇನು?:ಎಂದರೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಗುವ ತುಟ್ಟಿ ಭತ್ಯೆ. ತುಟ್ಟಿಭತ್ಯೆಯನ್ನು (ಡಿಎ) ಸರ್ಕಾರವು ನೌಕರರಿಗೆ ನೀಡುತ್ತದೆ. ಪಿಂಚಣಿದಾರರು ತುಟ್ಟಿ ಪರಿಹಾರ (ಡಿಆರ್)ಪಡೆಯುತ್ತಾರೆ.ಸಾಮಾನ್ಯವಾಗಿ ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ.ಮೊದಲ ಹೆಚ್ಚಳವು ಜನವರಿ 1 ರಿಂದ ಜಾರಿಯಾದರೆ ಎರಡನೆಯದು ಜುಲೈನಿಂದ ಅನ್ವಯವಾಗುತ್ತದೆ. . ಮಾರ್ಚ್ 7 ರಂದು ತುಟ್ಟಿಭತ್ಯೆ ಹೆಚ್ಚಳ ಘೋಷಣೆ :ಕೇಂದ್ರ ಸರ್ಕಾರ ಮಾರ್ಚ್ 7 ರಂದು ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ.ಈ ಹೆಚ್ಚಳ ಜನವರಿ ಒಂದರಿಂದ ಜಾರಿಗೆ ಬಂದಿದೆ.ಇದರಿಂದ ಒಂದು ಕೋಟಿಗೂ ಹೆಚ್ಚು ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯುತ್ತಿದ್ದಾರೆ.ಡಿಎ ಜೊತೆಗೆ ಉದ್ಯೋಗಿಗಳ ಎಚ್‌ಆರ್‌ಎ ಕೂಡಾ ಹೆಚ್ಚಿಸಲಾಗಿದೆ. ಇದನ್ನೂ ಓದಿ : ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿದೆ.ಇದರಿಂದ ಸರ್ಕಾರಿ ನೌಕರರ ವೇತನದಲ್ಲಿ ಎಷ್ಟು ವ್ಯತ್ಯಾಸವಾಗುತ್ತದೆ ಎಂದು ನೋಡುವುದಾದರೆ, ಉದ್ಯೋಗಿಯ ಮೂಲ ವೇತನವು 15,000 ರೂ.ಇದ್ದರೆ 46% ಡಿಎ ಲೆಕ್ಕಾಚಾರದ ಪ್ರಕಾರ ಆತ ಪಡೆಯುವ ತುಟ್ಟಿಭತ್ಯೆ 6900 ರೂಪಾಯಿ.ಡಿಎ ಹೆಚ್ಚಳ ಘೋಷಣೆಯ ನಂತರ ತುಟ್ಟಿಭತ್ಯೆ 46% ದಿಂದ 50 ಕ್ಕೆ ಏರಿಕೆಯಾಗಿದೆ. ಹೀಗಾದಾಗ ಆತ ಪಡೆಯುವ ತುಟ್ಟಿಭತ್ಯೆ ತಿಂಗಳಿಗೆ 7500 ರೂ.ಅಂದರೆ ಒಟ್ಟು ವೇತನದಲ್ಲಿ 600 ರೂಪಾಯಿಗಳಷ್ಟು ಹೆಚ್ಚಳವಾಗುವುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...