ವೈಷ್ಣೋದೇವಿ ಭಕ್ತರಿಗೆ ಭಾರತೀಯ ರೈಲ್ವೆ ಉಡುಗೊರೆ: ಜೂನ್‌ವರೆಗಷ್ಟೇ ಈ ಪ್ರಯೋಜನ : ಈ ಬೇಸಿಗೆಯಲ್ಲಿ ನೀವು ಮಾತಾ ವೈಷ್ಣೋದೇವಿ ಸನ್ನಿಧಾನಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ ರೈಲ್ವೆ ಇಲಾಖೆ ನಿಮಗಾಗಿ ಒಂದು ವಿಶೇಷ ಉಡುಗೊರೆಯನ್ನು ನೀಡಿದೆ. :ವೈಷ್ಣೋದೇವಿಗೆ ತೆರಳಲು ಯೋಚಿಸುತ್ತಿರುವ ಭಕ್ತರಿಗಾಗಿ ಭಾರತೀಯ ರೈಲ್ವೆ ( ) ಇಲಾಖೆ ಗುಡ್ ನ್ಯೂಸ್ ಒಂದನ್ನು ನೀಡಿದೇ. ಈ ಬೇಸಿಗೆಯಲ್ಲಿ ಮಾತಾ ವೈಷ್ಣೋ ದೇವಿಗೆ ವಿಶೇಷ ರೈಲುಗಳನ್ನು ( ) ಓಡಿಸುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ. ಭಾರತೀಯ ರೈಲ್ವೇಯ ಪಶ್ಚಿಮ ರೈಲ್ವೇ ಈ ವಿಶೇಷ ರೈಲುಗಳನ್ನು ಓಡಿಸುವುದಾಗಿ ತಿಳಿಸಿದೆ. ಜೂನ್‌ವರೆಗಷ್ಟೇ ಸಿಗಲಿದೆ ಈ ಸೌಲಭ್ಯ:ಸಂಚರಿಸಲಿವೆ. ಗಮನಾರ್ಹವಾಗಿ, ಬೇಸಿಗೆ ರಜೆಯ ಸಂದರ್ಭದಲ್ಲಿ ಭಕ್ತರಿಗೆ ಸುಲಭವಾಗಿ ಮಾತಾ ವೈಷ್ಣೋದೇವಿಗೆ ( ) ಭೇಟಿ ನೀಡಲು ಅನುಕೂಲವಾಗುವಂತೆ ಈ ವಿಶೇಷ ರೈಲುಗಳನ್ನು ( ) ಓಡಿಸಲಾಗುತ್ತಿದ್ದು, ಏಪ್ರಿಲ್ ನಿಂದ ಜೂನ್‌ವರೆಗಷ್ಟೇ ಈ ವಿಶೇಷ ರೈಲುಗಳ ವ್ಯವಸ್ಥೆ ಇರಲಿದೆ. ಇದನ್ನೂ ಓದಿ- ಶ್ರೀ ಮಾತಾ ವೈಷ್ಣೋ ದೇವಿಗೆ ವಿಶೇಷ ರೈಲುಗಳ ( ) ಸಂಚಾರದಿಂದ ಏನು ಪ್ರಯೋಜನ?ವು ಬೇಸಿಗೆಯ ರಜೆಯಲ್ಲಿ ವೈಷ್ಣೋದೇವಿಗೆ ಭೇಟಿ ನೀಡಲು ಯೋಜಿಸುತ್ತಿರುವವರಿಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಇದರಿಂದಾಗಿ ಭಕ್ತರು ಸುಲಭವಾಗಿ ಕನ್ಫರ್ಮ್ ಸೀಟ್ ಪಡೆಯಲು ಅನುಕೂಲವಾಗಲಿದೆ. ವೈಷ್ಣೋದೇವಿಗೆ ಟಿಕೆಟ್ ಬುಕಿಂಗ್ ಮಾಡುವ ಮೊದಲು ರೈಲುಗಳ ವೇಳಾಪಟ್ಟಿ, ಟಿಕೆಟ್ ಲಭ್ಯತೆಯ ಬಗ್ಗೆಯೂ ಪರಿಶೀಲಿಸಬಹುದಾಗಿದೆ. ರೈಲು ವೇಳಾಪಟ್ಟಿ:ಏಪ್ರಿಲ್ 21 ರಿಂದ ಬಾಂದ್ರಾ ಟರ್ಮಿನಸ್-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ( - ) ಎಸಿ ಸೂಪರ್‌ಫಾಸ್ಟ್ ವಿಶೇಷ ರೈಲು ಕಾರ್ಯಾಚರಣೆ ಪ್ರಾರಂಭವಾಗಿದೆ. ಈ ರೈಲು ಏಪ್ರಿಲ್ 21 ರಿಂದ ಜೂನ್ 30 ರವರೆಗೆ ಚಲಿಸುತ್ತದೆ. ಬಾಂದ್ರಾ ಟರ್ಮಿನಸ್‌ನಿಂದ ಪ್ರತಿ ಭಾನುವಾರ ರಾತ್ರಿ 09.50 ಕ್ಕೆ ಕಾರ್ಯನಿರ್ವಹಿಸಲಿದೆ. ಮಂಗಳವಾರ ರೈಲು ಮಾತಾ ವೈಷ್ಣೋ ದೇವಿ ಕತ್ರಾ ಧಾಮ್‌ಗೆ ಬೆಳಿಗ್ಗೆ 10 ಗಂಟೆಗೆ ತಲುಪಲಿದೆ. ಇದನ್ನೂ ಓದಿ- ಹಿಂದಿರುಗುವಾಗ ಯಾವ ರೈಲಿನಲ್ಲಿ ಪ್ರಯಾಣಿಸಬೇಕು:ವೈಷ್ಣೋದೇವಿಯಿಂದ ಮುಂಬೈಗೆ ಪ್ರಯಾಣಿಸುವ ಭಕ್ತರಿಗಾಗಿ ನಾಳೆಯಿಂದ ಎಂದರೆ ಏಪ್ರಿಲ್ 23ಋಕ್ನ್ದ ವಿಶೇಷ ರೈಲು ಆರಂಭವಾಗಲಿದೆ. ಇದರ ಹೆಸರು ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ-ಬಾಂದ್ರಾ ಟರ್ಮಿನಸ್ ಎಸಿ ಸೂಪರ್‌ಫಾಸ್ಟ್ ವಿಶೇಷ ರೈಲು.ಈ ರೈಲು ಪ್ರತಿ ಮಂಗಳವಾರ ರಾತ್ರಿ 09:40ಕ್ಕೆ ವೈಷ್ಣೋದೇವಿಯಿಂದ ಹೊರಡಲಿದ್ದು, ಗುರುವಾರ ಬೆಳಿಗ್ಗೆ 10.10ಕ್ಕೆ ಬಾಂದ್ರಾ ಟರ್ಮಿನಸ್ ತಲುಪಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...