ಜಿರಳೆಗಳನ್ನು ಶಾಶ್ವತವಾಗಿ ನಿಮ್ಮ ಮನೆಯಿಂದ ಹೊರ ಹಾಕಲು ಹೀಗೆ ಮಾಡಿ... : ಜಿರಳೆಗಳು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಗೃಹಿಣಿಯರನ್ನು ಕಾಡುವ ತಲೆ ನೋವು. ಏನೇ ಮಾಡಿದರು, ಎಷ್ಟೆ ರೀತಿಯ ಪ್ರಯತ್ನಗಳನ್ನು ಮಾಡಿದರು ಸಹ ಒಂದಲ್ಲ ಒಂದು ಜಿರಳೆ ಮನೆಯಲ್ಲಿ ಉಳಿಯುತ್ತದೆ. ಇವು ನಮಗೆ ಏನು ತೊಂದರೆ ಮಾಡದೆ ಇದ್ದರೂ ಸಹ, ಆಹಾರ ಮೇಲೆ ಇವು ಓಡಾಡುವುದರಿಂದ ಗುನಪಡಿಸಲಾಗದ ಕಾಯಿಲೆಗಳು ನಿಮ್ಮನ್ನು ಆವರಿಸುತ್ತದೆ. ಹಾಗಾದರೆ ಈ ಜಿರೆಳೆಗಳಿಂದ ಶಾಶ್ವತವಾಗಿ ಮುಕ್ತಿ ಪಡೆಯುವುದು ಹೇಗೆ? ತಿಳಿಯಲು ಮುಂದೆ ಓದಿ... :ಜಿರಳೆಗಳು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಗೃಹಿಣಿಯರನ್ನು ಕಾಡುವ ತಲೆ ನೋವು. ಏನೇ ಮಾಡಿದರು, ಎಷ್ಟೆ ರೀತಿಯ ಪ್ರಯತ್ನಗಳನ್ನು ಮಾಡಿದರು ಸಹ ಒಂದಲ್ಲ ಒಂದು ಜಿರಳೆ ಮನೆಯಲ್ಲಿ ಉಳಿಯುತ್ತದೆ. ಇವು ನಮಗೆ ಏನು ತೊಂದರೆ ಮಾಡದೆ ಇದ್ದರೂ ಸಹ, ಆಹಾರ ಮೇಲೆ ಇವು ಓಡಾಡುವುದರಿಂದ ಗುನಪಡಿಸಲಾಗದ ಕಾಯಿಲೆಗಳು ನಿಮ್ಮನ್ನು ಆವರಿಸುತ್ತದೆ. ಹಾಗಾದರೆ ಈ ಜಿರೆಳೆಗಳಿಂದ ಶಾಶ್ವತವಾಗಿ ಮುಕ್ತಿ ಪಡೆಯುವುದು ಹೇಗೆ? ತಿಳಿಯಲು ಮುಂದೆ ಓದಿ... ಜಿರಳೆಗಳಿಲ್ಲದ ಮನೆಯೇ ಇಲ್ಲ ಎಂದು ಕೇಳಿದರೆ ಸಮಾಧಾನ ಎನಿಸಬಹುದು,ಆದರೆ ಇದು ನಿಜ. ಇರುವೆ, ನೊಣಗಳ ಜೊತೆಗೆ ಜಿರಳೆಗಳು ಸಹ ಅಡುಗೆಮನೆಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಜಿರಳೆಗಳು ಅಡುಗೆ ಮನೆಯಲ್ಲಿನ ಆಹಾರದ ಮೇಲೆ ಓಡಾಡುತ್ತದೆ, ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮಗೆ ಅನೇಕ ಕಾಯಿಲೆಗಳು ಬರುತ್ತವೆ. ಅವುಗಳನ್ನು ಅಡುಗೆಮನೆಯಿಂದ ಶಾಶ್ವತವಾಗಿ ಓಡಿಸಲು ನಾವು ಸಣ್ಣ ಸಲಹೆಗಳನ್ನು ಅನುಸರಿಸಿದರೆ, ನಾವು ಆರೋಗ್ಯವಾಗಿರಬಹುದು. ಸೀಮೆಎಣ್ಣೆ:ಸೀಮೆಎಣ್ಣೆ, ಕೇವಲ ಅಡುಗೆ ಮಾಡುವುದಕ್ಕಾಗಿ ಒಲೆ ಉರಿಸಲು ಅಷ್ಟೆ ಉಪಯುಕ್ತ ಎಂದು ನೀವು ಭಾವಿಸಿದೆ ಅದು ತಪ್ಪು, ಆದರೆ ಇದರಿಂದ ನೀವು ಊಹಿಸಲು ಸಹ ಸಾದ್ಯವಾಗದ ಉಪಯೋಗಗಳಿದೆ ಎಂದರೆ ನೀವು ನಂಬುತ್ತೀರಾ? ಹೌದು, ಸೀಮೆಎಣ್ಣೆಯನ್ನು ಬಲಸಿ ನಿಮ್ಮ ಅಡಯಗೆ ಮನೆಯಲ್ಲಿನ ಜಿರಳೆಗಳನ್ನು ನೀವು ಓಡಿಸಬಹುದು. ಜಿರಳೆಗಳು ಸೀಮೆಎಣ್ಣೆಯ ವಾಸನೆಯನ್ನು ಇಷ್ಟಪಡುವುದಿಲ್ಲ.ನೀವು ಅಡುಗೆ ಮನೆಯಲ್ಲಿ ಈ ಸೀಮೆ ಎಣ್ಣೆಯನ್ನು ಇಡುವುದರಿಂದ ಜಿರಳೆಗಳು ನಿಮ್ಮ ಅಡುಗೆ ಮನೆಯನ್ನು ಪ್ರವೇಶಿಸುವುದಿಲ್ಲ. ಇದಕ್ಕಾಗಿ ಅಡುಗೆ ಮನೆಯ ಮೂಲೆ ಮೂಲೆ, ಬಾಗಿಲ ಬಳಿ, ಡ್ರೈನೇಜ್ ಬಳಿ ಸೀಮೆ ಎಣ್ಣೆಯನ್ನು ಸ್ವಲ್ಪ ಸ್ವಲ್ಪವಾಗಿ ಸುರಿಯಬೇಕು. ಇದರ ವಾಸನೆಯು ಜಿರಳೆಗಳನ್ನು ದೂರವಿಡುತ್ತದೆ. ಬೇವಿನ ಎಣ್ಣೆ:ಬೇವಿನ ಎಣ್ಣೆಯಿಂದ ಕೂಡ ಮನೆ ಒಂದೇ ಜಿರಳೆ ಮುಕ್ತವಾಗಿರುತ್ತದೆ. ಇದಕ್ಕಾಗಿ ಜಿರಳೆ ಬರುವ ಅಡುಗೆಮನೆಯಲ್ಲಿ ಬೇವಿನ ಎಣ್ಣೆಯನ್ನು ಸಿಂಪಡಿಸಬೇಕು. ಇದು ಜಿರಳೆಗಳನ್ನು ಹಿಮ್ಮೆಟ್ಟಿಸಲು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಡುಗೆಮನೆಯ ಪ್ರತಿಯೊಂದು ಮೂಲೆಯಲ್ಲಿಯೂ ಬೇವಿನ ಎಣ್ಣೆಯನ್ನು ಸಿಂಪಡಿಸುವುದರಿಂದ, ನೀವು ಜಿರಳೆಗಳಿಂದ ಮುಕ್ತಿ ಪಡೆಯಬಹುದು. ಬೋರಿಕ್ ಪೌಡರ್:ಬೋರಿಕ್ ಪೌಡರ್ ನಿಂದ ಅಡುಗೆ ಮನೆಯಲ್ಲಿ ಜಿರಳೆಗಳನ್ನು ಕೂಡ ಹಿಮ್ಮೆಟ್ಟಿಸಬಹುದು. ಇದಕ್ಕಾಗಿ ಬೋರಿಕ್ ಪೌಡರ್ ಅನ್ನು ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಜಿರಳೆಗಳು ಓಡಾಡುವ ಅಡುಗೆಮನೆಯ ಪ್ರತಿಯೊಂದು ಮೂಲೆಯಲ್ಲಿ ಇವುಗಳನ್ನು ಇರಿಸಿ. ಈ ಕಾರಣದಿಂದಾಗಿ, ಜಿರಳೆಗಳು ಎಂದಿಗೂ ನಿಮ್ಮ ಅಡುಗೆಮನೆಗೆ ಪ್ರವೇಶಿಸುವುದಿಲ್ಲ. ಬಿರಿಯಾನಿ ಎಲೆಗಳು:ಬಿರಿಯಾನಿ ಎಲೆಗಳನ್ನು ಅನೇಕ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಈ ಮಸಾಲೆ ಅಡುಗೆಗೆ ಮಾತ್ರ ಉಪಯುಕ್ತವಲ್ಲ. ಹೌದು, ಅಡುಗೆಮನೆಯಲ್ಲಿ ಜಿರಳೆಗಳನ್ನು ಹಿಮ್ಮೆಟ್ಟಿಸಲು ಅವುಗಳನ್ನು ಬಳಸಬಹುದು. ಇದಕ್ಕಾಗಿ ಬಿರಿಯಾನಿ ಎಲೆಗಳ ಪುಡಿ ಮಾಡಿ. ಈ ಪುಡಿಯನ್ನು ನೀರಿನಲ್ಲಿ ಸೇರಿಸಿ ಅಡುಗೆಮನೆಯಲ್ಲಿ ಸಿಂಪಡಿಸಿ. ಅಡುಗೆಮನೆಯಿಂದ ಜಿರಳೆಗಳನ್ನು ಓಡಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ. ವಿನೆಗರ್:ನಿಮ್ಮ ಮನೆಯಲ್ಲಿ ಜಿರಳೆ ತೊಡೆದುಹಾಕಲು ನೀವು ವಿನೆಗರ್ ಅನ್ನು ಸಹ ಬಳಸಬಹುದು. ಜಿರಳೆಗಳು ಹೆಚ್ಚಾಗಿ ಅಡುಗೆಮನೆಯ ಸುತ್ತಲೂ, ಅಡುಗೆಮನೆಯ ಸಿಂಕ್ ಒಳಗೆ ಸುತ್ತಾಡುತ್ತವೆ. ಅದಕ್ಕಾಗಿಯೇ ಕುದಿಯುವ ನೀರಿನಲ್ಲಿ ವಿನೆಗರ್ ಅನ್ನು ಬೆರೆಸಿ ಅಲ್ಲಿ ಅಡುಗೆ ಮನೆಯಲ್ಲಿ ಸಿಂಪಡಿಸಿ. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...