ರೈಲ್ವೇ ನಿಲ್ದಾಣ ಕಾಮಗಾರಿ: ಬೆಂಗಳೂರಿನ ಈ ರೈಲು ನಿಲ್ದಾಣದಲ್ಲಿ 92 ದಿನಗಳ ಕಾಲ ರೈಲು ನಿಲುಗಡೆ ಬಂದ್! : ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ನಿಲ್ದಾಣದ 1 & 2ನೇ ಫ್ಲಾಟ್‌ ಫಾರ್ಮ್ ಸ್ಥಗಿತಗೊಳ್ಳಲಿದೆ. ಹೀಗಾಗಿ ಈ ನಿಲ್ದಾಣದಲ್ಲಿ ಬಂದು ಹೋಗುವ ರೈಲುಗಳ ನಿಲುಗಡೆ ರದ್ದಾಗಲಿದೆ. : ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ( ) ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನಲೆಯಲ್ಲಿ ಇದೇ ಸೆಪ್ಟೆಂಬರ್ 20ರಿಂದ ಡಿಸೆಂಬರ್ 20ರವರೆಗೆ ಈ ನಿಲ್ದಾಣದಿಂದ ಸಂಚರಿಸುವ ರೈಲು ಸೇವೆಳಗು ಬಂದ್‌ ಆಗಲಿವೆ ಎಂದು ನೈರುತ್ಯ ರೈಲ್ವೆ ( ) ತಿಳಿಸಿದೆ. ಈ ಕುರಿತಂತೆ ಪ್ರಕಟಣೆ ಹೊರಡಿಸುರುವ( ), ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ಕಾಮಗಾರಿ ಹಿನ್ನಲೆಯಲ್ಲಿ ನಿಲ್ದಾಣದ 1 & 2ನೇ ಫ್ಲಾಟ್‌ ಫಾರ್ಮ್ ಸ್ಥಗಿತಗೊಳ್ಳಲಿದೆ. ಹೀಗಾಗಿ ಬಂದು ಹೋಗುವ ರೈಲುಗಳ ನಿಲುಗಡೆ ರದ್ದಾಗಲಿದ್ದು ಒಟ್ಟು 92 ದಿನಗಳ ಕಾಲ 41 ರೈಲುಗಳ ನಿಲುಗಡೆ ಬಂದ್ ಆಗಲಿದೆ ಎಂದು ತಿಳಿಸಿದೆ. ಇದನ್ನೂ ಓದಿ- ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆ ರದ್ದಾಗಲಿರುವ ರೈಲುಗಳ ವಿವರ ಕೆಳಕಂಡಂತಿದೆ ( ):->> ಪ್ರತಿದಿನ ಸಂಚರಿಸುವ ಮೈಸೂರು- ಎಸ್‌ಎಂವಿಟಿ ಬೆಂಗಳೂರು ರೈಲು (06269) ಸೆ.19ರಿಂದ ಡಿ.19ರವರೆಗೆ ನಿಲುಗಡೆ ರದ್ದು>> ವಾರಕ್ಕೊಮ್ಮೆ ಸಂಚರಿಸುವ ಮೈಸೂರು ರೇಣಿಗುಂಟ (22135) ರೈಲು ನಿಲುಗಡೆ ರದ್ದು>> ಸೆ. 6 ದಿನಕ್ಕೊಮ್ಮೆ ಸಂಚರಿಸುವ( )- ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರದ್ದು>> ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ರೈಲು (12677)>> ಪ್ರತಿದಿನದ ಕೆಎಸ್‌ಆರ್ ಬೆಂಗಳೂರು - ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (12608),>> ಮುರ್ಡೇಶ್ವರ- ಎಸ್ ಎಂವಿಟಿ ಬೆಂಗಳೂರು (16586),>> ಕೆಎಸ್‌ಆರ್ ಬೆಂಗಳೂರು- ಮಾರಿಕುಪ್ಪಂ (06396),>> ಕೆಎಸ್‌ಆರ್ ಬೆಂಗಳೂರು- ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ (06515),>> ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (06515),>> ಕೆಎಸ್‌ಆರ್ ಬೆಂಗಳೂರು- ಕೋಲಾರ (06387),>> ಕೆಎಸ್‌ಆರ್ ಬೆಂಗಳೂರು- ಭುವನೇಶ್ವರ (18464)>> ಸೆ.20ರಿಂದ ಡಿ.20ರವರೆಗೆ ನಿಲುಗಡೆ ರದ್ದು>> ಕೆಎಸ್‌ಆರ್ ಬೆಂಗಳೂರು - ಜೋಳಪಟ್ಟಿ (06551),>> ಕೆಎಸ್‌ಆರ್ ಬೆಂಗಳೂರು - ವೈಟ್‌ಫೀಲ್ಡ್ (01765)>> ಕೆಎಸ್‌ಆರ್ ಬೆಂಗಳೂರು - ಬಂಗಾರಪೇಟೆ (06561/06389),>> ಕೆಎಸ್‌ಆರ್ ಬೆಂಗಳೂರು - ಕುಪ್ಪಂ (06529) 01775),>> ವಾರಕ್ಕೆ ಎರಡು ಬಾರಿ ಮೈಸೂರು-ಜೈಪುರ (12975) ರೈಲು ಸೆ. 21 ರಿಂದ ಡಿ.19.>> ಮೈಸೂರು- ಕೂಚುವೇಲಿ (16315), ಮೈಸೂರು- ಕಾಚಿಗುಡ (12786),ಕೆಎಸ್‌ಆರ್ ಬೆಂಗಳೂರು- ಧರ್ಮಪುರಿ, ಕೆಎಸ್‌ಆರ್ ಬೆಂಗಳೂರು- ನವದೆಹಲಿ (12627),>> ಕೆಎಸ್‌ಆರ್ ಬೆಂಗಳೂರು- ಸಿಎಸ್‌ಎಂಟಿ ಮುಂಬೈ (1302),>> ಬೆಂಗಳೂರು ದೇಬ್ ನಾಂದೇಡ್ (16593) ಸೆ.20 ರಿಂದ ಡಿ.20 ನಿಲುಗಡೆ ರದ್ದುಗೊಳಿಸಲಾಗಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...