ಕೇವಲ 'ಈ' ಒಂದು ಹಣ್ಣು ಬಳಸಿ ನಿಮ್ಮ ಪೂಜಾ ಕೊಠಡಿಯ ಪಾತ್ರೆಗಳನ್ನು ಹೊಳೆಯುವಂತೆ ಮಾಡಬಹುದು! ಹೇಗೆ ಗೊತ್ತಾ? : ನಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಸಾಮಾನ್ಯವಾಗಿ ನಾವು ಹಿತ್ತಾಳೆ ವಸ್ತುಗಳನ್ನು ಬಳಸುತ್ತೇವೆ. ಆದರೆ, ಈ ಹಿತ್ತಾಳೆ ವಸ್ತುಗಳು ನೀವು ಎಷ್ಟೇ ಉಜ್ಜಿದರು, ಮಂಕಾಗಿ ಕಾಣುತ್ತದೆ. ಇದಕ್ಕೆ ಪರಿಹಾರ ಇದೆ. ಈ ಒಂದು ಹಣ್ಣು ಬಳಸಿ ನಿಮ್ಮ ಮನೆಯ ಹಿತ್ತಾಳೆ ಪಾತ್ರೆಗಳನ್ನು ಹೊಲೆಯುವಂತೆ ಮಾಡಬಹುದು. ಹೇಗೆ? ತಿಳಿಯಲು ಮುಂದೆ ಓದಿ... : ನಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಸಾಮಾನ್ಯವಾಗಿ ನಾವು ಹಿತ್ತಾಳೆ ವಸ್ತುಗಳನ್ನು ಬಳಸುತ್ತೇವೆ. ಆದರೆ, ಈ ಹಿತ್ತಾಳೆ ವಸ್ತುಗಳು ನೀವು ಎಷ್ಟೇ ಉಜ್ಜಿದರು, ಮಂಕಾಗಿ ಕಾಣುತ್ತದೆ. ಇದಕ್ಕೆ ಪರಿಹಾರ ಇದೆ. ಈ ಒಂದು ಹಣ್ಣು ಬಳಸಿ ನಿಮ್ಮ ಮನೆಯ ಹಿತ್ತಾಳೆ ಪಾತ್ರೆಗಳನ್ನು ಹೊಲೆಯುವಂತೆ ಮಾಡಬಹುದು. ಹೇಗೆ? ತಿಳಿಯಲು ಮುಂದೆ ಓದಿ... ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಪೂಜಾ ಕೊಠಡಿ ಇರುವುದು ಸಾಮಾನ್ಯ. ಕೆಲವೊಂದು ಮನೆಯಲ್ಲಿ ದಿನವೂ ದೀಪ ಹಚ್ಚಿ ಪೂಜಿಸಿದರೆ ಇನ್ನೂ ಕೆಲವು ಮನೆಗಳಲ್ಲಿ ವಾರಕ್ಕೊಮ್ಮೆ ಅಥವಾ ಶುಕ್ರವಾರ ದೇವರ ಮನೆಯ ಎಲ್ಲಾ ಪಾತ್ರೆಗಳನ್ನು ತೊಳೆದು ಸ್ವಚ್ಛ ಗೊಳಿಸುವುದು ಸಾಮಾನ್ಯ. ಇನ್ನೂ ವಿಶೇಷ ಪೂಜೆ ಅಂದರೆ ಬಿಡಿ, ಗೃಹಿಣಿಯರು ತಮ್ಮ ಪೂಜಾ ಕೊಠಡಿಯ ಹಿತ್ತಾಳೆ ಪಾತ್ರೆಗಳನ್ನು ಹೊಳೆಯುವಂತೆ ಮಾಡಲು ಕೈ ಬಿದ್ದೋಗುವಂತೆ ಉಜ್ಜುತ್ತಾ ಕೂರುತ್ತಾರೆ. ಎಲ್ಲರ ಮನೆಯ ಪೂಜಾ ಕೊಠಡಿಯಲ್ಲಿ ಸಾಮಾನ್ಯವಾಗಿ ಕಂಡು ಬರುವ ಪಾತ್ರೆಗಳೆಂದರೆ ಗಂಟೆ, ದೀಪ, ಆರತಿ, ಹಿತ್ತಾಳೆ ವಿಘ್ರವ ಇತ್ಯಾದಿ. ಬೇರೆ ಎಲ್ಲವೂ ಬಿಡಿ ಆದರೆ ದೀಪಗಳು ಮಾತ್ರ ಹಿತ್ತಳೆಯದ್ದನ್ನೆ ಹಲವು ಮನೆಗಳಲ್ಲಿ ಬಳಸಲಾಗುತ್ತದೆ. ಈ ದೀಪಗಳು ಉರಿಯುವ ಕಾರಣ ಇದರ ಬಣ್ಣ ಮಾಸಿ ಹೋಗುತ್ತದೆ, ಎಣ್ಣೆಯ ಜಿಡ್ಡಗಳಂತೂ ಬಿಡದೆ ನೆಲೆ ಊರಿ ಬಿಟ್ಟಿರುತ್ತದೆ. ಇವುಗಳಿಂದ ಜಿಡ್ಡನ್ನು ತೆಗೆದು ಹಾಕಿ ಹೊಳೆಯುವಂತೆ ಮಾಡುವುದು ತುಂಬಾನೆ ಕಷ್ಟದ ಸಂಗತಿ ಅಂತಲೇ ಹೇಳಬಹುದು. ಈ ಕಲೆಗಳನ್ನು ಹೋಗಲಾಡಿಸಲು ಗೃಹಿಣಿಯರು ಹಲವಾರು ಟಿಪ್ಸ್‌ ಹಾಗೂ ಹಲವು ಬಗೆಯ ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ, ಈ ಕಲೆಗಳನ್ನು ತೆಗೆದು ಹಾಕಲು ಇದ್ಯಾವುದು ಬೇಡ. ಕೇವಲ ಒಂದು ಹಣ್ಣು ಸಾಕು. ಹೌದು, ಹಿತ್ತಾಳೆಯ ಪಾತ್ರೆಗಳ ಮೇಲಿನ ಜಿಡ್ಡನ್ನು ಹೋಗಲಾಡಿಸಲು ಕೇವಲ ಒಂದು ಟೊಮ್ಯಾಟೋ ಹಣ್ಣು ಸಾಕು. ಆಚ್ಚರಿ ಎನಿಸಿದರೂ ಇದು ಸತ್ಯ. ಟೊಮ್ಯಾಟೋ ಹಣ್ಣು ಬಳಸಿ ಹಿತ್ತಾಳೆ ಪಾತ್ರೆಗಲನ್ನು ಸ್ವಚ್ಛಗೊಳಿಸಲು ಸುಲಭವಾದ ಮೂರು ಮಾರ್ಗಗಳಿವೆ. ಮೊದಲಿಗೆ ಹಿತ್ತಾಳೆ ದೀಪಗಳನ್ನು ನೀರಿನಲ್ಲಿ ನೆನೆಸಿಡಿ, ಸ್ವಲ್ಪ ಸಮಯದ ನಂತರ ಈ ಪಾತ್ರೆಗಳನ್ನು ನೀರಿನಿಂದ ಹೊರ ತೆಗೆದು ನಂತರ ಟೊಮ್ಯಾಟೋ ಸಿಪ್ಪೆ ಹಾಗೂ ತಿರುಳಿನಿಂದ ಚೆನ್ನಾಗಿ ಉಜ್ಜಿ. ನಂತರ ಬಿಸಿ ನೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಹಿತ್ತಾಳೆ ಪಾತ್ರೆಗಳಲ್ಲಿನ ಕಲೆ ಮಾಯವಾಗುತ್ತದೆ. ಟೊಮ್ಯಾಟೋ ರಸವನ್ನು ಶೇಕರಿಸಿ ಅದರಲ್ಲಿ ಹಿತ್ತಾಲೆ ಪಾತ್ರೆಗಳನ್ನು 30 ನಿಮಿಷಗಳ ಕಾಲ ನೆನೆಸಿಡಿ. ನಂತರ ಬಿಸಿ ನೀರಿನಲ್ಲಿ ಈ ಪಾತ್ರೆಗಳನ್ನು ಚೆನ್ನಾಗಿ ತೊಳೆಯಿರಿ. ಇದರಿಂದ ಕಲೆಗಳಷ್ಟ ಅಲ್ಲ ಪಾತ್ರೆಗಳನ್ನು ಹೊಳೆಯುವಂತೆ ಮಾಡುತ್ತದೆ. ಟೊಮ್ಯಾಟೋ ಅಷ್ಟೆ ಅಲ್ಲ ಟೊಮ್ಯಾಟೋ ಕೆಚಪ್‌ ಬಲಸಿ ಕೂ ನಿಮ್ಮ ಹಿತ್ತಾಲೆ ಪಾತ್ರೆಗಳನ್ನು ನೀವು ಹೊಳೆಯುವಂತೆ ಮಾಡಬಹುದು. ಇದಕ್ಕಾಗಿ ನೀವು ಮೊದಲು ಹಿತ್ತಾಲೆ ಪಾತ್ರೆಗಳಿಗೆ ಕೆಚಪ್‌ ಅನ್ನು ಲೇಪಿಸಿ ಒಂದು ಗಂಟೆಗಳ ಕಾಲ ನೆನೆಯಲು ಬಿಡಿ, ನಂತರ ಬಿಸಿ ನೀರಿನಿಂದ ತೊಳೆಯಿರಿ. ಇದರಿಂದ ಪಾತ್ರೆಗಳು ಪಳ ಪಳ ಹೊಳೆಯಲು ಆರಂಭಿಸುತ್ತದೆ. ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...