ಕಲ್ಪತರು ನಾಡಿನ ಜನರಿಗೆ ಗುಡ್ ನ್ಯೂಸ್ ನೀಡಿದ ರೈಲ್ವೇ ಇಲಾಖೆ: ಇನ್ಮುಂದೆ ಈ ರೈಲ್ವೆ ನಿಲ್ದಾಣದಲ್ಲೂ ನಿಲ್ಲುತ್ತೇ ವಂದೇ ಭಾರತ್ ಎಕ್ಸ್‌ಪ್ರೆಸ್ : ಬೆಂಗಳೂರು -ಧಾರವಾಡ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್‌ ರೈಲು ಇಂದಿನಿಂದ ತುಮಕೂರಿನಲ್ಲೂ ನಿಲುಗಡೆಗೆ ನೀಡಲಿದೆ. :ಕಲ್ಪತರು ನಾಡು ತುಮಕೂರು ಜಿಲ್ಲೆಗೆ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಇಂದಿನಿಂದ ತುಮಕೂರಿನ ರೈಲ್ವೆ ನಿಲ್ದಾಣದಿಂದಲೂ "ವಂದೇ ಭಾರತ್ ಎಕ್ಸ್‌ಪ್ರೆಸ್" ( ) ಸಂಚರಿಸಲಿದೆ. ಹೌದು, ಬೆಂಗಳೂರು -ಧಾರವಾಡ ನಡುವೆ ಸಂಚಾರ ನಡೆಸುತ್ತಿರುವ( ) ಇಂದಿನಿಂದ ತುಮಕೂರಿನಲ್ಲೂ ನಿಲುಗಡೆಗೆ ನೀಡಲಿದೆ. ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಇಂದು (ಆಗಸ್ಟ್ 23) ಸಂಜೆ ತುಮಕೂರಿನಲ್ಲಿ ವಂದೇ ಭಾರತ್‌ ರೈಲು ಸೇವೆಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಲಿದ್ದಾರೆ. ಇದನ್ನೂ ಓದಿ- ಈ‌ ಕುರಿತುತಮ್ಮ ಅಧಿಕೃತ ‌ ಖಾತೆಯಲ್ಲಿ‌( ) ಮಾಹಿತಿ‌ ಹಂಚಿಕೊಂಡಿದ್ದು ವಂದೇ ಭಾರತ್‌ ರೈಲು ತುಮಕೂರಿನಲ್ಲಿ ಇಂದು ಸಂಜೆ 6.18ಕ್ಕೆ ರೈಲು ಮೊದಲ ಸ್ಟಾಪ್‌ ನೀಡಲಿದೆ. ಆ ಬಳಿಕ ಆಗಸ್ಟ್‌ 24 ರಿಂದ ಧಾರವಾಡಕ್ಕೆ ತೆರಳುವಾಗ ಹಾಗೂ ಧಾರವಾಡದಿಂದ ಹಿಂದಿರುಗುವಾಗ ಬೆಳಗ್ಗೆ ಹಾಗೂ ಸಂಜೆ ನಿಲುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಈ ಕಾರ್ಯಕ್ರಮಕ್ಕೆ ತುಮಕೂರು ಲೋಕಸಭಾ ಕ್ಷೇತ್ರದ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಆಗಮಿಸಿ, ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ. ರೈಲಿನ ವೇಳಾಪಟ್ಟಿ ಬದಲಾವಣೆ:* ರೈಲು ಸಂಖ್ಯೆ 20662 ಧಾರವಾಡ-ಕೆ.ಎಸ್.ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಸಂಜೆ 6.18/6.20 ಘಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಉಳಿದಂತೆ ಎಲ್ಲಾ ನಿಲ್ದಾಣಗಳ ಸಮಯ ಈ ಹಿಂದಿನಂತೆ ಇರಲಿದೆ. ಇದನ್ನೂ ಓದಿ- * ರೈಲು ಸಂಖ್ಯೆ 20661 ಕೆ.ಎಸ್.ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಬೆಳಿಗ್ಗೆ 6:32/ಘಂಟೆಗೆ ಆಗಮಿಸಿ 6:34 ಗಂಟೆಗೆ ನಿರ್ಗಮಿಸಲಿದೆ. ಉಳಿದಂತೆ ಎಲ್ಲಾ ನಿಲ್ದಾಣಗಳ ಸಮಯ ಈ ಹಿಂದಿನಂತೆ ಇರಲಿದೆ ಎಂದು ತಿಳಿದು ಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...