: ರೋಸ್ ವಾಟರ್ ಅನ್ನು ಈ ರೀತಿ ಬಳಸಿದ್ರೆ 30 ದಾಟಿದ್ರು ಯಂಗ್ ಆಗೇ ಕಾಣಬಹುದು! : ಬದಲಾದ ಋತುಮಾನ, ಜೀವನಶೈಲಿಯಿಂದಾಗಿ ಚರ್ಮದ ಸಮಸ್ಯೆಗಳು ಸರ್ವೇ ಸಾಮಾನ್ಯ. ಇದರಿಂದಾಗಿ ಅತಿ ಸಣ್ಣ ವಾಯಸಿನಲ್ಲೇ ಕೆಲವರು ವಯಸ್ಸಾದವರಂತೆ ಕಾಣಿಸುತ್ತಾರೆ. ಆದರೆ, ರೋಸ್ ವಾಟರ್ ಬಳಸಿ ನಿಮ್ಮ ತ್ವಚೆ ಸದಾ ಯೌವನಭರಿತವಾಗಿರುವಂತೆ ಮಾಡಬಹುದು. :ಸುಂದರವಾದ ತ್ವಚೆ ಪಡೆಯಬೇಕು. ವಯಸ್ಸು 30-40 ದಾಟಿದ್ರು ಕೂಡ ಸದಾ ಯಂಗ್ ಆಗಿ ಕಾಣ್ಬೇಕು ಅಂತ ಬಯಸುವವರಿಗೆ ರೋಸ್ ವಾಟರ್ ರಾಮಬಾಣ ಎಂತಲೇ ಹೇಳಬಹುದು. ತ್ವಚೆಗೆ ರೋಸ್ ವಾಟರ್:ನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ನಂಜುನಿರೋಧಕ ಮತ್ತು ಬ್ಯಾ ಕ್ಟೀ ರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮದಲ್ಲಿನ ಸುಕ್ಕು, ಗೆರೆಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲ, ನಿಯಮಿತವಾಗಿ ರೋಸ್ ವಾಟರ್ ಬಳಕೆಯಿಂದ ( ) ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸಿ ಸುಂದರವಾದ ಕಾಂತಿಯುತ ಚರ್ಮವನ್ನು ಹೊಂದಲು ಪ್ರಯೋಜನಕಾರಿ ಆಗಿದೆ. ತ್ವಚೆಗೆ ರೋಸ್ ವಾಟರ್ ( ) ಪ್ರಯೋಜನಗಳೆಂದರೆ... ಮೊಡವೆ ನಿಯಂತ್ರಣ:ರೋಸ್ ವಾಟರ್ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ನಿತ್ಯ ರಾತ್ರಿ ಮಲಗುವ ಮೊದಲು ಹತ್ತಿ ಉಂಡೆಗೆ ರೋಸ್ ವಾಟರ್ ಹಾಕಿ ಇದರಿಂದ ಮುಖವನ್ನು ಸ್ವಚ್ಛಗೊಳಿಸಿದರೆ( ), ಚರ್ಮದ ಬಣ್ಣವೂ ಸುಧಾರಿಸುವಂತೆ ಮಾಡುತ್ತದೆ. ಇದನ್ನೂ ಓದಿ- ಅಲರ್ಜಿಗೆ ಪರಿಹಾರ:ರೋಸ್ ವಾಟರ್ ಬಳಕೆಯಿಂದ ಚರ್ಮದ ( ) ಸಾಮಾನ್ಯ ಸಮಸ್ಯೆಗಳಾದ ಚರ್ಮದ ದದ್ದು, ಉರಿ, ಅಲರ್ಜಿಯಂತಹ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು. ಅಷ್ಟೇ ಅಲ್ಲ, ಇದು ಆರೋಗ್ಯಕರ ಕಾಂತಿಯುತ ಚರ್ಮವನ್ನು ಹೊಂದಲು ತುಂಬಾ ಪ್ರಯೋಜನಕಾರಿ ಆಗಿದೆ. ಚರ್ಮಕ್ಕೆ ನೈಸರ್ಗಿಕ ಸಂಕೋಚಕ:ನಿಯಮಿತವಾಗಿ ತ್ವಚೆಗೆ ರೋಸ್ ವಾಟರ್ ಬಳಕೆಯಿಂದ ಇದು ಚರ್ಮವನ್ನು ಟೋನ್ ಮಾಡಿ, ಮುಖದಲ್ಲಿನ ರಂಧ್ರ ಗಳನ್ನು ಕಡಿಮೆ ಮಾಡುವಲ್ಲಿಯೂ ಪರಿಣಾಮಕಾರಿ ಆಗಿದ್ದು ಚರ್ಮಕ್ಕೆ ನೈಸರ್ಗಿಕ ಸಂಕೋಚಕವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ- ಚರ್ಮವನ್ನು ಹೈಡ್ರೀಕರಿಸಲು:ತ್ವಚೆಗೆ ರೋಸ್ ವಾಟರ್ ಬಳಕೆಯಿಂದ ಇದು ಚರ್ಮವನ್ನು ಹೈಡ್ರೀಕರಿಸಿ, ಆರೋಗ್ಯಕರ ಸುಂದರ ತ್ವಚೆಯನ್ನು ಪಡೆಯಲು ಸಹಕಾರಿ ಆಗಿದೆ. ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...