ಅಕ್ಕ ಸಮ್ಮೇಳನಕ್ಕೆ ಗಡಿಜಿಲ್ಲೆ ಗಾಯಕನಿಗೆ ಅವಕಾಶ: ವಿದೇಶದಲ್ಲಿ ಜಾನಪದ ಅನಾವರಣ : ಅಮೇರಿಕಾದ ರಿಚ್ ಮಂಡ್ ನಗರದಲ್ಲಿ ಆ.30 ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಶ್ವ ಅಕ್ಕ ಕನ್ನಡ ಸಮ್ಮೇಳನಕ್ಕೆ ಚಾಮರಾಜನಗರದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರಿಗೆ ಅವಕಾಶ ಸಿಕ್ಕಿದೆ. :ಅನಿವಾಸಿ ಕನ್ನಡಿಗರು ಆಯೋಜನೆ ಮಾಡುವ ಪ್ರತಿಷ್ಟಿತ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ( ) ಚಾಮರಾಜನಗರದ ಗಾಯಕನಿಗೆ ಅವಕಾಶ ಸಿಕ್ಕಿದೆ. ಅಮೇರಿಕಾದ ರಿಚ್ ಮಂಡ್ ನಗರದಲ್ಲಿ ಆ.30 ರಿಂದ ಮೂರು ದಿನಗಳ ಕಾಲ ನಡೆಯಲಿರುವಕ್ಕೆ ( )ಚಾಮರಾಜನಗರದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರಿಗೆ ಅವಕಾಶ ಸಿಕ್ಕಿದೆ. ಇದನ್ನೂ ಓದಿ- ಎಂಬ ಶೀರ್ಷಿಕೆಯಡಿ ಜಾನಪದ ಸಂಸ್ಕೃತಿಯನ್ನು ನರಸಿಂಹಮೂರ್ತಿ ಅನಾವರಣ ಮಾಡಲಿದ್ದಾರೆ. ಅಂದಹಾಗೆ ಮೂರನೇ ಬಾರಿ ನರಸಿಂಹಮೂರ್ತಿ () ಅವರಿಗೆ ಅಕ್ಕ ಸಮ್ಮೇಳನದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ಇದನ್ನೂ ಓದಿ- ಸಮ್ಮೇಳನದಲ್ಲಿ ಚಾಮರಾಜನಗರ ಜಿಲ್ಲೆಯ ಪವಾಡ ಪುರುಷರಾದ ಮಲೆ ಮಹದೇಶ್ವರ, ಬಿಳಿಗಿರಿರಂಗನಾಥ ಸ್ವಾಮಿ, ಮಂಟೆಸ್ವಾಮಿ ಗೀತೆ ಹಾಡಿ ಅಮೇರಿಕಾದ ಕನ್ನಡಿಗರನ್ನು ರಂಜಿಸಲಿದ್ದಾರೆ. 2010 ರಲ್ಲಿ ನ್ಯೂಜೆರ್ಸಿಯಲ್ಲಿ, 2014 ರಲ್ಲಿ ನಡೆದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲೂ ನರಸಿಂಹಮೂರ್ತಿ ಭಾಗಿಯಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...