ನಿಮ್ಮ ಪ್ರೀತಿ ಮದುವೆಯವರೆಗೆ ಮುಂದುವರಿಯುತ್ತಾ ಅಥವಾ ಮಧ್ಯದಲ್ಲಿಯೇ ಬ್ರೇಕ್ ಅಪ್ ಆಗುವುದಾ? ಕೈಯಲ್ಲಿರುವ ಈ ರೇಖೆ ನೋಡಿ ಮೊದಲೇ ತಿಳಿದುಕೊಳ್ಳಿ ನಿಮ್ಮ್ಮ ಜೀವನದಲ್ಲಿ ಬರುವ ಪ್ರೀತಿ, ಬ್ರೇಕ್ ಅಪ್ , ವಿವಾಹಿಕ ಜೀವನ ಎಲ್ಲದುರ ಬಗ್ಗೆ ನಿಖರವಾಗಿ ಹೇಳುತ್ತದೆಯಂತೆ ಹಸ್ತದಲ್ಲಿರುವ ಈ ರೇಖೆ. :ಜ್ಯೋತಿಷ್ಯದಂತೆಯೇ,ಜೀವನದ ಪ್ರತಿಯೊಂದು ಅಂಶವನ್ನು ಹಸ್ತಸಾಮುದ್ರಿಕ ಶಾಸ್ತ್ರದಿಂದಲೂ ತಿಳಿಯಬಹುದು.ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಹಸ್ತಸಾಮುದ್ರಿಕ ಶಾಸ್ತ್ರವು ಉತ್ತಮ ಮಾರ್ಗವಾಗಿದೆ. ಸಾಮಾನ್ಯವಾಗಿ ಸಂಬಂಧ,ಪ್ರೀತಿ,ಮದುವೆಯ ಬಗ್ಗೆ ಜನ ಹೆಚ್ಚು ಕುತೂಹಲ ಹೊಂದಿರುತ್ತಾರೆ.ಅಂಗೈಯ ಮೂಲೆಯಲ್ಲಿರುವ ಸಣ್ಣ ಮದುವೆಯ ರೇಖೆಗಳು ಈ ವಿಷಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತದೆಯಂತೆ. ನಿಮಗೆ ಇರುವ ಲವ್ ಅಫೇರ್ ಗಳೆಷ್ಟು? ಪ್ರೀತಿಯಲ್ಲಿ ಎಷ್ಟು ಬಾರಿ ಮೋಸ ಹೋಗುತ್ತೀರಿ? ದಾಂಪತ್ಯ ಜೀವನ ಹೇಗಿರುತ್ತದೆ? ಎಂಬುದನ್ನು ಹಸ್ತಸಾಮುದ್ರಿಕ ಶಾಸ್ತ್ರದಿಂದ ನಿಖರವಾಗಿ ತಿಳಿದುಕೊಳ್ಳಬಹುದು ಎನ್ನಲಾಗಿದೆ. ಅಂಗೈಯಲ್ಲಿದೆ ಮದುವೆಯ ರೇಖೆ :ಕೆಳಭಾಗದ ಅಂಚಿನಲ್ಲಿ ಸಣ್ಣ ಅಡ್ಡ ರೇಖೆಗಳಿರುತ್ತವೆ.ಈ ರೇಖೆಗಳು ಅಂಗೈಯ ಹೊರ ಭಾಗದಿಂದ ಒಳಕ್ಕೆ ಬರುತ್ತವೆ.ಈ ಸಾಲುಗಳನ್ನು ಮದುವೆ ರೇಖೆಗಳು ಎಂದು ಕರೆಯಲಾಗುತ್ತದೆ. ಇದನ್ನೂ ಓದಿ : ಅಂಗೈಯಿಂದಲೇ ತಿಳಿಯಿರಿ ಪ್ರೀತಿ ಮತ್ತು ಮದುವೆ ಜೀವನ:ತಾಳೆಗರಿ ಮತ್ತು ವಿವಿಧ ರೇಖೆಗಳ ಆಧಾರದ ಮೇಲೆ ಲೆಕ್ಕಾಚಾರ ಹಾಕಿ ನೋಡಿದರೆ ಪ್ರೀತಿ ಮತ್ತು ವೈವಾಹಿಕ ಜೀವನದ ಬಗ್ಗೆ ಹೇಳಬಹುದಾದರೂ ಮದುವೆಯ ಬಗ್ಗೆ ಸ್ಪಷ್ಟ ಮಾಹಿತಿ ಸಿಗಬೇಕಾದರೆ ಈ ರೇಖೆಯನ್ನೇ ನೋಡಬೇಕು. -ಅಂಗೈಯಲ್ಲಿ ಅನೇಕ ಸಣ್ಣ ವಿವಾಹ ರೇಖೆಗಳಿದ್ದರೆ,ಅಂತಹ ಜನರ ಜೀವನದಲ್ಲಿ ಬಹಳಷ್ಟು ಮಂದಿ ಪ್ರೇಮಿಗಳ ರೀತಿ ಬಂದು ಹೋಗುತ್ತಾರೆಯಂತೆ.ಈ ರೇಖೆಗಳು ತುಂಬಾ ತೆಳ್ಳಗೆ ಇದ್ದರೆ ಆ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಸಂಬಂಧಗಳನ್ನು ಹೊಂದಿರುವುದಲ್ಲದೆ, ಬಹಳಷ್ಟು ಬಾರಿ ಬ್ರೇಕ್ ಅಪ್ ಕೂಡಾ ಆಗುತ್ತದೆ ಎಂದು ಹೇಳಲಾಗುತ್ತದೆ. -ಒಂದಕ್ಕಿಂತ ಹೆಚ್ಚು ವಿವಾಹ ರೇಖೆಗಳಿದ್ದರೆ ಮತ್ತು ಅವು ಗಾಢವಾಗಿದ್ದರೆ,ಆ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ವಿವಾಹವಾಗುವ ಸಾಧ್ಯತೆ ಕೂಡಾ ಅಷ್ಟೇ ದಟ್ಟವಾಗಿರುತ್ತದೆ. -ಮದುವೆಯ ರೇಖೆಯು ನೇರವಾಗಿದ್ದರೆ ಮತ್ತು ಬೇರೆ ಯಾವುದೇ ರೇಖೆ ಅದನ್ನು ಕತ್ತರಿಸದಿದ್ದರೆ, ಅಥವಾ ಅದರ ಮೇಲೆ ಯಾವುದೇ ಅಶುಭ ಚಿಹ್ನೆ ಇಲ್ಲದಿದ್ದರೆ, ಅಂತಹ ವ್ಯಕ್ತಿಯ ವೈವಾಹಿಕ ಜೀವನ ಅದ್ಭುತವಾಗಿರುತ್ತದೆ.ಅವರು ಸಂತೋಷದ ವೈವಾಹಿಕ ಜೀವನವನ್ನು ನಡೆಸುತ್ತಾರೆ. ಇದನ್ನೂ ಓದಿ : -ಬೇರೆ ಯಾವುದಾದರೂ ರೇಖೆ ಮಧ್ಯದಲ್ಲಿ ಕತ್ತರಿಸಿದರೆ ಅವರ ಮೊದಲನೇ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. -ಮದುವೆಯ ರೇಖೆಯು ಸ್ವಲ್ಪ ದೂರದವರೆಗೆ ನೇರವಾಗಿದ್ದರೆ ಮತ್ತು ನಂತರ ಕತ್ತರಿಸಲ್ಪಟ್ಟರೆ ಅಥವಾ ತುಂಬಾ ತೆಳುವಾಗಿದ್ದರೆ ಅಂಥಹ ವ್ಯಕ್ತಿಗೆ ವಿಚ್ಛೇದನವಾಗುವ ಸಾಧ್ಯತೆ ಇರುತ್ತದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...