ಬುಡದಿಂದಲೇ ಬಿಳಿಕೂದಲನ್ನು ಕಪ್ಪಾಗಿಸಲು ತೆಂಗಿನೆಣ್ಣೆಗೆ ಈ ಎಣ್ಣೆಯನ್ನು ಬೆರೆಸಿ ಹಚ್ಚಿ: 2-3 ತಿಂಗಳು ಕೂದಲು ಬೆಳ್ಳಗಾಗುವ ಚಿಂತೆಯೇ ಇರಲ್ಲ : ಬಿಳಿ ಕೂದಲನ್ನು ಕಪ್ಪಾಗಿಸಲು ಹಲವು ವಿಧಾನಗಳಿವೆ. ಅದರಲ್ಲಿ ಅತ್ಯಂತ ಹಳೆಯ ಮತ್ತು ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ ಸಾಸಿವೆ ಎಣ್ಣೆ. ಸಾಸಿವೆ ಎಣ್ಣೆಯ ಪ್ರಯೋಜನಗಳ ಕುರಿತು ಅನೇಕ ಅಧ್ಯಯನಗಳು ಹೇಳುತ್ತವೆ. ಮುಖ್ಯವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ ಎಂದು ಸಾಬೀತುಪಡಿಸಿದೆ. :ಬಿಳಿ ಕೂದಲಿನ ಸಮಸ್ಯೆ ಅನೇಕರಲ್ಲಿ ಕಾಡುತ್ತಿದೆ. ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಬಿಳಿ ಕೂದಲಿನೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಕಾಳಜಿ ವಹಿಸುವುದು ಬಹಳ ಮುಖ್ಯ. ಆದರೆ ಹೆಚ್ಚಿನ ಸಂಖ್ಯೆಯ ಜನರ ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಒತ್ತಡವು ಬಿಳಿ ಕೂದಲಿಗೆ ಪ್ರಮುಖ ಕಾರಣವಾಗಿರಬಹುದು. ಇದನ್ನೂ ಓದಿ: ಬಿಳಿ ಕೂದಲನ್ನು ಕಪ್ಪಾಗಿಸಲು ಹಲವು ವಿಧಾನಗಳಿವೆ. ಅದರಲ್ಲಿ ಅತ್ಯಂತ ಹಳೆಯ ಮತ್ತು ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ ಸಾಸಿವೆ ಎಣ್ಣೆ. ಸಾಸಿವೆ ಎಣ್ಣೆಯ ಪ್ರಯೋಜನಗಳ ಕುರಿತು ಅನೇಕ ಅಧ್ಯಯನಗಳು ಹೇಳುತ್ತವೆ. ಮುಖ್ಯವಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ ಎಂದು ಸಾಬೀತುಪಡಿಸಿದೆ. ಸಾಸಿವೆ ಎಣ್ಣೆಯನ್ನು ಬಿಳಿ ಕೂದಲು ಕಪ್ಪಾಗಿಸಲು ಬಳಸುವುದು ಹೇಗೆ? ಇದರಿಂದ ನಿಜವಾಗಿಯೂ ಪರಿಹಾರ ಸಿಗುವುದೇ? ಎಂಬೆಲ್ಲಾ ಪ್ರಶ್ನೆಗಳಿಗೆ ಮುಂದೆ ಉತ್ತರ ತಿಳಿದುಕೊಳ್ಳೋಣ. ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯ ಮಿಶ್ರಣತೆಂಗಿನ ಎಣ್ಣೆಗೆ ಸಾಸಿವೆ ಎಣ್ಣೆಯನ್ನು ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ನಿಯಮಿತವಾಗಿ ಮಸಾಜ್ ಮಾಡಿ ಕೆಲ ಗಂಟೆಗಳ ಕಾಲ ಬಿಡಿ. ನಂತರ ಶಾಂಪೂ ಮತ್ತು ನೀರಿನಿಂದ ತೊಳೆಯಿರಿ. ಬೇವಿನ ಎಲೆ ಮತ್ತು ಸಾಸಿವೆ ಎಣ್ಣೆಯ ಮಿಶ್ರಣಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಪೇಸ್ಟ್ ತಯಾರಿಸಿ. ಅದಕ್ಕೆ ಸಾಸಿವೆ ಎಣ್ಣೆ ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ. ನಂತರ ಶಾಂಪೂ ಮತ್ತು ನೀರಿನಿಂದ ತೊಳೆಯಿರಿ. ಬಾದಾಮಿ ಮತ್ತು ಸಾಸಿವೆ ಎಣ್ಣೆಯ ಮಿಶ್ರಣಒಂದು ಬಾಟಲಿಯಲ್ಲಿ ಬಾದಾಮಿ ಮತ್ತು ಸಾಸಿವೆ ಎಣ್ಣೆಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಪ್ರತಿದಿನ ಹಚ್ಚಿ ಮಸಾಜ್ ಮಾಡಿ. ರಾತ್ರಿ ಹಚ್ಚಿ ಮಲಗಿ, ಬೆಳಗೆದ್ದು ಸ್ನಾನ ಮಾಡಿ. ಇದನ್ನೂ ಓದಿ: ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ಪರಿಣಿತರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯ ಜವಾಬ್ದಾರಿಯನ್ನು ಪಡೆದುಕೊಳ್ಳುವುದಿಲ್ಲ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...