ನೀವು ಕೂಡಾ ಕಡಲೆಪುರಿಯನ್ನು ಇಷ್ಟಪಟ್ಟು ತಿನ್ನುತ್ತೀರಾ ? ಹಾಗಿದ್ದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು ಮಂಡಕ್ಕಿ ಬಳಸಿ ನಾನಾ ರೀತಿಯ ತಿಂಡಿಯನ್ನು ತಯಾರಿಸಲಾಗುತ್ತದೆ. ಬೆಂಗಳೂರು :ಗರಿಗರಿಯಾದ ಕಡಲೆಪುರಿ ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಇದನ್ನು ಕಡಲೆಪುರಿ, ಮಂಡಕ್ಕಿ, ಪಫ್ಡ್ ರೈಸ್ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ಇನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವ ಚುರ್ ಮುರಿ, ಬೆಲ್ ಪುರಿಯಲ್ಲಿಯೂ ಇದನ್ನೇ ಬಳಸುವುದು.ಮಂಡಕ್ಕಿ ಚಿತ್ರಾನ್ನ, ಮಂಡಕ್ಕಿ ಒಗ್ಗರಣೆ, ಮಂಡಕ್ಕಿ ದೋಸೆ, ಮಂಡಕ್ಕಿ ಪಡ್ದು, ಮಂಡಕ್ಕಿ ಉಂಡೆ ಹೀಗೆ ಅನೇಕ ರುಚಿಕರ ತಿಂಡಿಗಳನ್ನು ಕೂಡಾ ಇದರಿಂದ ತಯಾರಿಸಲಾಗುತ್ತದೆ. ಈ ಮಂಡಕ್ಕಿ ನಾಲಗೆರುಚಿ ಮಾತ್ರ ಅಲ್ಲ ಇದು ಆರೋಗ್ಯಕ್ಕೆ ಕೂಡಾ ನಾನಾ ರೀತಿಯಲ್ಲಿ ಪ್ರಯೋಜನಕಾರಿ.ತನ್ನ ರುಚಿ ಮೂಲಕ ಬಾಯಿ ಚಪ್ಪರಿಸಿಕೊಂಡು ತಿನ್ನುವಂತೆ ಮಾಡುವ ಈ ಕಡಲೆ ಪುರಿ ನಿಮ್ಮ ಆರೋಗ್ಯವನ್ನುಕೂಡಾ ವೃದ್ದಿಸುತ್ತದೆ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ : 1.ಕಡಿಮೆ ಕ್ಯಾಲೋರಿ, ಹೆಚ್ಚು ಫೈಬರ್ :ದೊಡ್ಡ ಪ್ರಯೋಜನವೆಂದರೆ ಅದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ.ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.ಇದು ಉತ್ತಮ ಪ್ರಮಾಣದ ಫೈಬರ್ ಅನ್ನು ಸಹ ಹೊಂದಿದೆ.ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಯುತ್ತದೆ. 2.ಶಕ್ತಿಯ ಮೂಲಕಡಲೆಪುರಿ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿರುತ್ತದೆ.ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ.ಬೆಳಗಿನ ಉಪಾಹಾರದಲ್ಲಿ ಅಥವಾ ಮಧ್ಯದಲ್ಲಿ ಇದನ್ನು ತಿನ್ನುವುದರಿಂದ ಎನರ್ಜಿ ಲೆವೆಲ್ ಅನ್ನು ಕಾಪಾಡಿಕೊಳ್ಳಬಹುದು. 3.ಸುಲಭವಾಗಿ ಜೀರ್ಣವಾಗುತ್ತದೆಕಡಲೆಪುರಿಯ ಮತ್ತೊಂದು ದೊಡ್ಡ ಪ್ರಯೋಜನವೆಂದರೆ ಅದು ತುಂಬಾ ಹಗುರವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ.ಇದನ್ನು ತಿಂದ ಬಳಿಕ ಹೊಟ್ಟೆ ಭಾರ ಎಂದು ಅನ್ನಿಸುವುದಿಲ್ಲ.ಇದು ಮಕ್ಕಳು ಮತ್ತು ವೃದ್ಧರಿಗೂ ಉತ್ತಮ ಆಹಾರದ ಆಯ್ಕೆಯಾಗಿದೆ. ಇದನ್ನೂ ಓದಿ : 4.ಗ್ಲುಟನ್ ಮುಕ್ತಕಡಲೆಪುರಿ ಗ್ಲುಟನ್ ಫ್ರೀ ಆಹಾರವಾಗಿದೆ.ಇರುವವರಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ.ಇದನ್ನು ವಿವಿಧ ರೀತಿಯ ಆಹಾರಗಳಲ್ಲಿ ಬಳಸಬಹುದು. 5.ಅಗ್ಗದ ಬೆಲೆಯಲ್ಲಿ ಲಭ್ಯಕಡಲೆಪುರಿ ಅಗ್ಗದ ಬೆಲೆಯಲ್ಲಿ ಸುಲಭವಾಗಿ ಲಭ್ಯವಿರುವ ಆಹಾರ ಪದಾರ್ಥವಾಗಿದೆ. ಇದು ಪೌಷ್ಟಿಕಾಂಶದಲ್ಲಿ ಸಮೃದ್ಧವಾಗಿದೆ. ಕಡಲೆಪುರಿ ಆರೋಗ್ಯಕ್ಕೆ ಒಳ್ಳೆಯದು.ವಿಶೇಷವಾಗಿ ಸರಿಯಾಗಿ ಮತ್ತು ಸಮತೋಲಿತ ಪ್ರಮಾಣದಲ್ಲಿ ಇದನ್ನು ಸೇವಿಸಿದಾಗ ಇದು ಆರೋಗ್ಯಕ್ಕೆ ದೊಡ್ಡ ಮಟ್ಟದ ಪ್ರಯೋಜನ ನೀಡುತ್ತದೆ. (ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ. ) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...