ಪಾಸಾದವರಿಗೆ ಗುಡ್ ನ್ಯೂಸ್: ಈ ಯೋಜನೆಯಡಿ ಪ್ರತಿ ತಿಂಗಳು ಸಿಗಲಿದೆ 8,000 ರೂ.! : ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯ ಮೂಲಕ ಲಕ್ಷಾಂತರ ಯುವಕರಿಗೆ ಮನೆಯಲ್ಲಿ ಕುಳಿತು ಆನ್ಲೈನ್‌ ತರಬೇತಿ ನೀಡಲಾಗುತ್ತದೆ. ಇದಕ್ಕೆ ಎಲ್ಲಾ ಯುವಕರು ʼಸ್ಕಿಲ್ ಇಂಡಿಯಾ ಡಿಜಿಟಲ್‌ʼನಲ್ಲಿ ಪ್ರಾಯೋಗಿಕ ಕೋರ್ಸ್‌ಗೆ ಸೇರಬೇಕು. :ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರುದ್ಯೋಗಿ ಯುವಜರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ʼಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಅಭಿವೃದ್ಧಿ ಯೋಜನೆʼ ಜಾರಿಗೆ ತಂದಿದ್ದು, ಈ ಮೂಲಕ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ʼಪಿಎಂ ಕೌಶಲ್ಯ ವಿಕಾಸ ಯೋಜನೆʼಯ ಮೂಲಕ ಹೆಚ್ಚಿನ ಸಂಖ್ಯೆಯಯುವಕರಿಗೆ ಸರ್ಕಾರವು ತರಬೇತಿ ನೀಡುತ್ತಿದೆ. ಇದರಿಂದ ಅವರಿಗೆ ಉದ್ಯೋಗದ ಹಾದಿ ಸುಲಭವಾಗುತ್ತದೆ. ನೀವು ಸಹ ಭಾರತದ ಪ್ರಜೆಯಾಗಿದ್ದರೆ ಮತ್ತು ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲು ಬಯಸಿದರೆ ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದನ್ನೂ ಓದಿ: ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆ 2024 ನಿರುದ್ಯೋಗಿ ಯುವಕರಿಗಾಗಿ ಕೇಂದ್ರ ಸರ್ಕಾರವು ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿದೆ. ಇದನ್ನು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ನಿರ್ವಹಿಸುತ್ತಿದೆ. ಈ ಯೋಜನೆಯು ದೇಶದ ನಿರುದ್ಯೋಗಿ ಯುವಕರಿಗೆ ಉಚಿತ ತರಬೇತಿ ಕೋರ್ಸ್‌ಗಳನ್ನು ಒದಗಿಸುತ್ತದೆ. ಇದರಿಂದ ಅವರು ಕೌಶಲ್ಯಗಳನ್ನು ಪಡೆಯುವ ಮೂಲಕ ತಮ್ಮ ಜೀವನೋಪಾಯವನ್ನು ಭದ್ರಪಡಿಸಿಕೊಳ್ಳಬಹುದು. ಈ ಯೋಜನೆಯ ಮೂಲಕ ಸುಮಾರು 40 ವಿವಿಧ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯ ಮೂಲಕ ಲಕ್ಷಾಂತರ ಯುವಕರಿಗೆ ಮನೆಯಲ್ಲಿ ಕುಳಿತು ಆನ್ಲೈನ್‌ ತರಬೇತಿ ನೀಡಲಾಗುತ್ತದೆ. ಇದಕ್ಕೆ ಎಲ್ಲಾ ಯುವಕರು ʼಸ್ಕಿಲ್ ಇಂಡಿಯಾ ಡಿಜಿಟಲ್‌ʼನಲ್ಲಿ ಪ್ರಾಯೋಗಿಕ ಕೋರ್ಸ್‌ಗೆ ಸೇರಬೇಕು. ಅಲ್ಲಿ ಪ್ರತಿಯೊಬ್ಬ ಯುವಕರಿಗೆ ತಿಂಗಳಿಗೆ 8,000 ರೂ. ನೀಡಲಾಗುತ್ತದೆ. ತರಬೇತಿ ಹೊರತಾಗಿ ಈ ಯೋಜನೆಯ ಮೂಲಕ ಸರ್ಕಾರವು ಪ್ರಮಾಣಪತ್ರವನ್ನು ನೀಡುತ್ತದೆ. ಇದರಿಂದ ಫಲಾನುಭವಿ ಸುಲಭವಾಗಿ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ನಿರುದ್ಯೋಗಿ ಯುವಕರು ಮನೆಯಲ್ಲೇ ಕುಳಿತು ಆನ್ಲೈನ್‌ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಪಿಎಂ ಕೌಶಲ್ಯ ಅಭಿವೃದ್ಧಿ ಯೋಜನೆಗೆ ಅರ್ಹತೆ ಅಗತ್ಯ ದಾಖಲೆಗಳು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈ ರೀತಿ ನೀವುಯೋಜನೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...