ಕೆಂಪು ಇರುವೆಯ ಚಟ್ನಿ ಸೇವಿಸಿದರೆ ಹಣ್ಣು ಹಣ್ಣು ಮುದುಕರಾದರೂ ದೃಷ್ಟಿ ಮಂಜಾಗುವುದಿಲ್ಲ! ಇದು ಸಾಬೀತಾದ ಸತ್ಯ ! ಕೆಂಪು ಇರುವೆ ನಮ್ಮ ಮನೆಯ ಎದುರುಗಡೆ ಇರುವ ಮರಗಳಲ್ಲಿ ಗೂಡು ಕಟ್ಟಿ ರಾಶಿ ರಾಶಿ ಸೇರಿಕೊಂಡಿರುತ್ತವೆ. ಈ ಇರುವೆಯ ಚಟ್ನಿ ಮಾಡಲಾಗುತ್ತದೆ. ಬೆಂಗಳೂರು :ಇರುವೆ ನಮಗೆ ಕಚ್ಚಿದರೆ ಸಾಕು ಒಮ್ಮೊಮ್ಮೆ ಪ್ರಾಣವೇ ಹೋದ ಹಾಗೆ ಆಗುತ್ತದೆ. ಇರುವೆ ಕಡಿದ ಜಾಗವೆಲ್ಲಾ ತುರಿಕೆ, ಉರಿ ಕಾಣಿಸಿಕೊಳ್ಳುತ್ತದೆ.ಆದರೆ ಇದೇ ಇರುವೆಯನ್ನು ಹುರಿದು ಅರೆದು ಚಟ್ನಿ ಮಾಡಿ ಸೇವಿಸುವುದೂ ಇದೆ. ಮಲೆನಾಡ ಭಾಗದಲ್ಲಿ ಈ ಇರುವೆಯ ಚಟ್ನಿ ಮಾಡಲಾಗುತ್ತದೆ. ಈ ಚಟ್ನಿ ಸೇವಿಸುವುದಕ್ಕೆ ಭಾರೀ ರುಚಿ ಎಂದು ಹೇಳಲಾಗುತ್ತದೆ.ಇದರ ಜೊತೆಗೆ ಇದು ನಾನಾ ರೀತಿಯಲ್ಲಿ ಆರೋಗ್ಯಕ್ಕೆ ಕೂಡಾ ಸಹಕಾರಿ ಎನ್ನಲಾಗಿದೆ. ಇರುವೆ ಚಟ್ನಿಯ ಪ್ರಯೋಜನಗಳು :ಇದನ್ನುಸಾಂಪ್ರದಾಯಿಕ ಭಕ್ಷ್ಯವೆಂದು ಕರೆಯಲಾಗುತ್ತದೆ. ಈ ಖಾದ್ಯದ ಸುವಾಸನೆಯು ಬ್ರಿಟಿಷ್ ಬಾಣಸಿಗ ಬೋರ್ಡೆನ್ ರಾಮ್ಸೆ ಅವರ ನೆಚ್ಚಿನ ಖಾದ್ಯಗಳ ಲಿಸ್ಟ್ ಕೂಡಾ ಸೇರಿದೆ. ಕೆಂಪು ಇರುವೆ ಚಟ್ನಿಯು ಫಾರ್ಮಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ, ಸತು, ವಿಟಮಿನ್ ಬಿ-12 ನಂತಹ ಪೋಷಕಾಂಶಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಇದು ನಮ್ಮ ಹೃದಯ ಮತ್ತು ಕಣ್ಣುಗಳ ಆರೋಗ್ಯಕ್ಕೂ ಇದು ಪರಿಣಾಮಕಾರಿಯಾಗಿದೆ. ಒಂದು ವೇಳೆ ನಮ್ಮ ದೇಹದಲ್ಲಿ ಈ ವಿಟಮಿನ್ ಗಳ ಕೊರತೆಯಾದಾಗ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಆದರೆ ಮಾತ್ರೆಗಳ ಬದಲಿಗೆ ಈ 'ಅದ್ಭುತ ಚಟ್ನಿ' ತಿನ್ನುವುದರಿಂದ ದೇಹದ ಅಪೌಷ್ಕತೆ ದೂರವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ ಎನ್ನಲಾಗಿದೆ. ಇದನ್ನೂ ಓದಿ : ಛತ್ತೀಸ್‌ಗಢದ ಬುಡಕಟ್ಟು ಪ್ರದೇಶಗಳಲ್ಲಿ ಯಾರಿಗೂ ದೃಷ್ಟಿ ದೋಷ ಎದುರಾಗುವುದೇ ಇಲ್ಲವಂತೆ.ಇಲ್ಲಿ ಹಣ್ಣು ಹಣ್ಣು ಮುದುಕರು ಕೂಡಾಇವರ ದೃಷ್ಟಿ ಈ ಮಟ್ಟಕ್ಕೆ ಚುರುಕಾಗಿರಲು ಅವರು ಸೇವಿಸುವ ಈ ಕೆಂಪು ಇರುವೆ ಚಟ್ನಿಯೇ ಕಾರಣ ಎಂದು ಹೇಳಲಾಗುತ್ತದೆ. ಮಾವಿನ ಮರವೇ ಇರಲಿ ಅಥವಾ ಇನ್ನಾವುದೇ ಮರವೇ ಇರಲಿ, ಈ ಇರುವೆಗಳು ತಮ್ಮ ಗೂಡು ಸಿದ್ಧಪಡಿಸುತ್ತವೆ.ಇವು ಎಷ್ಟು ಅಪಾಯಕಾರಿ ಎಂದರೆ ಇತರ ಜಾತಿಯ ಇರುವೆಗಳು ಇವುಗಳಿಂದ ದೂರ ಉಳಿಯುತ್ತವೆ. ಇದನ್ನೂ ಓದಿ : ಇರುವೆ ಚಟ್ನಿ ಹೇಗೆ ತಯಾರಿಸಲಾಗುತ್ತದೆ? :ಚಟ್ನಿ ಮಾಡಲು, ಕೊಂಬೆಗಳನ್ನು ಒಡೆಯುವ ಮೂಲಕ ಕೆಂಪು ಇರುವೆಗಳನ್ನು ಮೊಟ್ಟೆಗಳೊಂದಿಗೆ ಸಂಗ್ರಹಿಸಲಾಗುತ್ತದೆ.ಇವುಗಳನ್ನು ಪುಡಿಮಾಡಿ ಒಣಗಿಸಲಾಗುತ್ತದೆ.ನಂತರ ಟೊಮೆಟೊ,ಬೆಳ್ಳುಳ್ಳಿ, ಶುಂಠಿ, ಮೆಣಸಿನಕಾಯಿ, ಪುದೀನಾ ಮತ್ತು ಉಪ್ಪನ್ನು ಬೆರೆಸಿ ಚಟ್ನಿ ತಯಾರಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...