ರಾಜರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಏಳು ಸುತ್ತಿನ ಕೋಟೆಯ ಗೋಡೆ ಕುಸಿತ : ಪಟ್ಟಣದ ಅಂಚೆ ಕಚೇರಿ ಸಮೀಪದ ಐತಿಹಾಸಿಕ ಏಳು ಸುತ್ತಿನ ಕೋಟೆಯ ಪೈಕಿ ಸದ್ಯ ಮೊದಲನೇ ಸುತ್ತಿನ ಕೋಟೆಯ ಗೋಡೆ ಭಾಗಶಃ ಕುಸಿದು ಬಿದ್ದಿದೆ. :ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತುಮಕೂರು ಜಿಲ್ಲೆ ಪಾವಗಡ ತಾಲೂಕು ಐತಿಹಾಸಿಕ ಕೋಟೆಕೊತ್ತಲಗಳ ನಾಡು. ಆದರೆ ಇದೀಗ ಪಾವಗಡ ಪಟ್ಟಣದ ಹೃದಯ ಭಾಗದಲ್ಲಿರುವ ಕೋಟೆ ಗೋಡೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಪಟ್ಟಣದ ಅಂಚೆ ಕಚೇರಿ ಸಮೀಪದಯ ( ) ಪೈಕಿ ಸದ್ಯ ಮೊದಲನೇ ಸುತ್ತಿನ ಕೋಟೆಯ ಗೋಡೆ ಭಾಗಶಃ ಕುಸಿದು ಬಿದ್ದಿದೆ. ಇದಕ್ಕೆಲ್ಲ ಪಾವಗಡ ಪಟ್ಟಣದಲ್ಲಿ ಪ್ರಭಾವಿಗಳು ಕೋಟೆ ಪರಿಸರವನ್ನು ಅತಿಕ್ರಮಣ ಮಾಡಿದ್ದರ ಪರಿಣಾಮ ಐತಿಹಾಸಿಕ ಕೋಟೆ ಅವಸಾನದ ಅಂಚಿಗೆ ಬಂದಿದೆ. ಇದನ್ನೂ ಓದಿ- ಕೈಕಟ್ಟಿ ಕುಳಿತ ಅಧಿಕಾರಿಗಳ ವರ್ಗ:ಇಂತಹವುಗಳನ್ನು ಉಳಿಸಬೇಕಾದಂತಹ ಅಧಿಕಾರಿಗಳ ವರ್ಗ ಮೌನ ವಹಿಸಿದ್ದು,ಪ್ರದರ್ಶಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವ್ಯಕ್ತಿಗಳು ಕೋಟೆಯ ಪರಿಸರವನ್ನು ನಿಧಾನವಾಗಿ ಆಕ್ರಮಿಸಿಕೊಂಡು ಮನೆ, ಕಾಂಪ್ಲೆಕ್ಸ್ ಸೇರಿದಂತೆ ಕಟ್ಟಡಗಳನ್ನು ಕಟ್ಟಲು ಮುಂದಾಗುತ್ತಿದ್ದಾರೆ. ಸದ್ಯ ಕೋಟೆ ಬಿದ್ದಿರುವ ಸ್ಥಳದಲ್ಲಿನ ಪಕ್ಕದಲ್ಲಿಯೇ ಬೃಹತ್ ಕಟ್ಟಡದ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದೆ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಇದನ್ನೂ ಓದಿ- ಸದ್ಯ ಏಕಾಏಕಿ ಕೋಟೆ ಗೋಡೆಯ ಸಮೀಪ ಬೃಹತ್ ಕಟ್ಟಡಗಳ ಕಾಮಾಗಾರಿಗಳು ನಡೆಯುತ್ತಿರುವುದರಿಂದ ಕೋಟೆಯ ಕೆಳಭಾಗದಲ್ಲಿ ಮಣ್ಣು ಸಡಿಲಗೊಂಡು ಕೋಟೆಯ ಬೃಹತ್ ಕಲ್ಲುಗಳು ಜಾರಿ ಬಿದ್ದಿವೆ ಎನ್ನಲಾಗಿದೆ. ಇನ್ನಾದರೂ ತುಮಕೂರು ಜಿಲ್ಲಾಡಳಿತ ಅಥವಾ ಪುರಾತತ್ವ ಇಲಾಖೆ ಎಚ್ಚೆತ್ತು, ಐತಿಹಾಸಿಕ ಕೋಟೆಯನ್ನು ಸಂರಕ್ಷಿಸುವ ಕೆಲಸ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...