ನೀವು ಮಾಡುವ ಈ 5 ತಪ್ಪುಗಳು ಕಿಡ್ನಿ ಹಾಳಾಗಲು ಮುಖ್ಯ ಕಾರಣ..! : ಇಂದಿನ ಪೀಳಿಗೆಯಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಸಾಮಾನ್ಯವಾಗಿಬಿಟ್ಟಿದೆ.. ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಈ ಸಮಸ್ಯೆ ಬಿಡದೆ ಕಾಡುತ್ತಿದೆ.. ಇವುಗಳು ಕಿಡ್ನಿ ಮತ್ತು ರಕ್ತನಾಳಗಳಿಗೆ ಹಾನಿಯನ್ನುಂಟುಮಾಡುತ್ತವೆ, ಅದಕ್ಕಾಗಿ ಮಧುಮೇಹವನ್ನು ನಿಯಂತ್ರಿಸಲು ಜೀವನಶೈಲಿಯನ್ನು ಬದಲಾಯಿಸಬೇಕು.. :ಮೂತ್ರಪಿಂಡಗಳು ಆರೋಗ್ಯವಾಗಿದ್ದರೆ, ದೇಹವು ಆರೋಗ್ಯಕರವಾಗಿರುತ್ತದೆ. ಆದರೆ ನಾವು ಮಾಡುವ ಕೆಲವು ತಪ್ಪುಗಳಿಂದ ಕಿಡ್ನಿ ವೈಫಲ್ಯವಾಗುವ ಸಾಧ್ಯತೆಗಳು ಸಾಕಷ್ಟಿವೆ. ಅದರಲ್ಲೂ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.. ನಮ್ಮ ಆಹಾರದಲ್ಲಿ ಸೋಡಿಯಂ ಮತ್ತು ಆಲ್ಕೋಹಾಲ್ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಮೂತ್ರಪಿಂಡ ವಿಫಲತೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಧೂಮಪಾನದಂತಹವುಗಳನ್ನು ತಪ್ಪಿಸಬೇಕು. ಇದು ಕ್ಯಾನ್ಸರ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಣ್ಣುಗಳು ಮತ್ತು ತರಕಾರಿಗಳಂತಹ ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಮೂತ್ರಪಿಂಡಗಳನ್ನು ಆರೋಗ್ಯವಾಗಿಡಬಹುದು. ಇದನ್ನೂ ಓದಿ: ಮಧುಮೇಹ, ಅಧಿಕ ರಕ್ತದೊತ್ತಡ :ಮಧುಮೇಹ, ಅಧಿಕ ರಕ್ತದೊತ್ತಡ ಎಲ್ಲರಲ್ಲಿಯೂ ಸಾಮಾನ್ಯ. ಆದರೆ ಹಲವರು ಇವುಗಳ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇವುಗಳು ಕಿಡ್ನಿ ಮತ್ತು ರಕ್ತನಾಳಗಳಿಗೆ ಹಾನಿಯನ್ನುಂಟುಮಾಡುತ್ತವೆ. ಅಲ್ಲದೆ, ಮಧುಮೇಹ ನಿಯಂತ್ರಣ ಮಾಡಲು ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಿ.. ದೈಹಿಕ ಚಟುವಟಿಕೆ, ಬೊಜ್ಜು :ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದಿರುವುದು ಬೊಜ್ಜಿಗೆ ಕಾರಣವಾಗುತ್ತದೆ. ಇದು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಧಿಕ ತೂಕವು ಅಧಿಕ ರಕ್ತದೊತ್ತಡ ಮತ್ತು ಟೈಪ್ 2 ಮಧುಮೇಹದ ಬೆಳವಣಿಗೆಗೆ ಕಾರಣವಾಗಬಹುದು. ದೈಹಿಕ ಚಟುವಟಿಕೆಯು ತೂಕ ಹೆಚ್ಚಾಗುವುದನ್ನು ತಡೆಯುತ್ತದೆ, ಇದರಿಂದ ಕಿಡ್ನಿ ಆರೋಗ್ಯವಾಗಿರುತ್ತೆ. ಇದನ್ನೂ ಓದಿ: ಸೋಡಿಯಂ :ಉಪ್ಪು ಅತಿಯಾದ ಸೇವನೆಯಿಂದ ರಕ್ತದೊತ್ತಡವೂ ಹೆಚ್ಚುತ್ತದೆ. ಇದು ಮೂತ್ರಪಿಂಡಗಳ ಮೇಲೆ ಹೊರೆಯನ್ನುಂಟುಮಾಡುತ್ತದೆ, ಸೋಡಿಯಂ ಹೆಚ್ಚಿರುವ ಆಹಾರಗಳು ಮೂತ್ರಪಿಂಡಗಳಿಗೆ ಹಾನಿಯನ್ನುಂಟುಮಾಡುತ್ತವೆ. ಇದಲ್ಲದೆ, ಸಂಸ್ಕರಿಸಿದ ಆಹಾರಗಳಲ್ಲಿ ಉಪ್ಪು ಹೆಚ್ಚಾಗಿರುತ್ತದೆ, ಆದ್ದರಿಂದ ಅವುಗಳನ್ನು ತಿನ್ನಬೇಡಿ.. ಧೂಮಪಾನ :ಧೂಮಪಾನ ದೇಹಕ್ಕೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತದೆ.. ಇದು ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ಕುಂಠಿತಗೊಳಿಸುತ್ತದೆ. ಅಲ್ಲದೆ, ಟೈಪ್ 2 ಮಧುಮೇಹಕ್ಕೂ ಕಾರಣವಾಗುತ್ತದೆ. ಮೂತ್ರಪಿಂಡದ ಹಾನಿಯನ್ನು ತಡೆಯಲು ಧೂಮಪಾನವನ್ನು ತ್ಯಜಿಸಿ. ಇದನ್ನೂ ಓದಿ: ನೀರು ಕುಡಿಯಿರಿ :ನಿರ್ಜಲೀಕರಣವು ಮೂತ್ರಪಿಂಡದ ಹಾನಿಗೆ ಕಾರಣ.. ಇದನ್ನು ತಡೆಗಟ್ಟಲು ಹೆಚ್ಚು ನೀರು ಕುಡಿಯಬೇಕು. ಇದರಿಂದಾಗಿ ಮೂತ್ರಪಿಂಡದ ಕಲ್ಲುಗಳು ಸಹ ನಾಶವಾಗುತ್ತವೆ.. ಮೂತ್ರಪಿಂಡಗಳು ಆರೋಗ್ಯವಾಗಿರಲು ಪ್ರತಿದಿನ 10 ಲೋಟ ನೀರು ಕುಡಿಯಿರಿ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...