ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ʻಈʼ ಒಂದು ಪದಾರ್ಥ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ..! 21 ದಿನಗಳ ಚಾಲೆಂಜ್‌ ತೆಗೆದುಕೊಂಡು ನೋಡಿ : ಕೂದಲು ಉದುರುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆದಾಗ್ಯೂ, ಕೆಲವೊಮ್ಮೆ ಮನೆಮದ್ದುಗಳ ಮೂಲಕ ಈ ಸಮಸ್ಯೆಗಳಿಗೆ ಗುಡ್‌ ಬೈ ಹೇಳಬಹುದು. ಹಾಗಾದರೆ ಆ ಪದಾರ್ಥ ಯಾವುದು? ಸಮಸ್ಯೆ ಬಗೆಹರಿಸಲು ಮಾಡಬೇಕಾದ ಕೆಲಸ ಏನು?ತಿಳಿಯಲು ಈ ಸ್ಟೋರಿ ಓದಿ... : ಕೂದಲು ಉದುರುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆದಾಗ್ಯೂ, ಕೆಲವೊಮ್ಮೆ ಮನೆಮದ್ದುಗಳ ಮೂಲಕ ಈ ಸಮಸ್ಯೆಗಳಿಗೆ ಗುಡ್‌ ಬೈ ಹೇಳಬಹುದು. ಹಾಗಾದರೆ ಆ ಪದಾರ್ಥ ಯಾವುದು? ಸಮಸ್ಯೆ ಬಗೆಹರಿಸಲು ಮಾಡಬೇಕಾದ ಕೆಲಸ ಏನು?ತಿಳಿಯಲು ಈ ಸ್ಟೋರಿ ಓದಿ... ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೂದಲು ಉದುರುವುದು ಮತ್ತು ಕೂದಲು ಬೇಗನೆ ಬಿಳಿಯಾಗುವುದು ಮುಂತಾದ ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ. ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದು. ಒತ್ತಡ, ಹಾರ್ಮೋನುಗಳ ಸಮತೋಲನ, ಔಷಧಿಗಳೂ ಇದಕ್ಕೆ ಕಾರಣವಾಗಬಹುದು. ಇದಲ್ಲದೆ, ಕೂದಲಿನ ಮೇಲೆ ಬಳಸುವ ಸ್ಟೈಲಿಂಗ್ ಉತ್ಪನ್ನಗಳು ಸಹ ಕೂದಲಿಗೆ ಹಾನಿಯನ್ನುಂಟು ಮಾಡಬಹುದು. ಆದಾಗ್ಯೂ, ಈ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವು ನೈಸರ್ಗಿಕ ಮಾರ್ಗಗಳಿವೆ. 21 ದಿನಗಳ ಮೆಂತ್ಯ ಚಾಲೆಂಜ್ ಕೂದಲಿನ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ನಿವಾರಿಸುತ್ತದೆ. ಮೆಂತ್ಯ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತ್ಯವು ಈಸ್ಟ್ರೊಜೆನ್‌ನಲ್ಲಿ ಸಮೃದ್ಧವಾಗಿದ್ದು, ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ, ಕೂದಲು ಮೃದು ಮತ್ತು ಹೊಳೆಯಲು ಆರಂಭಿಸುತ್ತದೆ ಅಷ್ಟೆ ಅಲ್ಲ ನಿಮ್ಮ ಕೂದಲಿನ ಸರ್ವ ಸಮಸ್ಯೆಗಳಿಗೂ ಇದು ಪರಿಹಾರ ನೀಡುತ್ತದೆ. ಮಾಡಬೇಕಾದ್ದು ಏನು..?ಮೆಂತ್ಯವನ್ನು ಪಾತ್ರೆಯಲ್ಲಿ ನೆನೆಸಿಡಬೇಕು. ಮರುದಿನ ಆ ನೀರನ್ನು ತಲೆಗೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಇದ್ದು ಸ್ನಾನ ಮಾಡಿ. ಇದನ್ನು 21 ದಿನಗಳವರೆಗೆ ಮಾಡಿ. ಕೂದಲು ಉದುರುವುದು ಕಡಿಮೆಯಾಗುತ್ತದೆ. ಮೆಂತ್ಯ ಪ್ಯಾಕ್ಸ್ವಲ್ಪ ಮೊಸರು,ಮೆಂತ್ಯ, ನಿಂಬೆ ರಸ ಮತ್ತು ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ.ತಲೆಗೆ ಹಚ್ಚಿ ನಂತರ 20 ನಿಮಿಷಗಲ ಕಾಲ ಬಿಟ್ಟು ಕೂದಲನ್ನು ತೊಳೆಯಿರಿ. ತೆಂಗಿನ ಎಣ್ಣೆತೆಂಗಿನ ಎಣ್ಣೆ ಕೂದಲಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ಕೂದಲಿಗೆ ನೈಸರ್ಗಿಕ ತೇವಾಂಶ, ಹೊಳಪು ಮತ್ತು ಮೃದುತ್ವವನ್ನು ನೀಡುತ್ತದೆ. ಮೆಂತ್ಯ ನೆನೆಸಿದ ನೀರಿಗೆ ಸ್ವಲ್ಪ ಎಣ್ಣೆ ಹಾಕಿ ತಲೆಗೆ ಹಚ್ಚಿಕೊಳ್ಳಿ. ಒಂದು ಗಂಟೆಯ ನಂತರ ಶಾಂಪೂ ಮಾಡಿ. ಇದರಿಂದ ಕೂದಲು ಆರೋಗ್ಯಕರವಾಗಿರುತ್ತದೆ. (ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...