ಎಷ್ಟೇ ಎಚ್ಚರಿಕೆ ವಹಿಸಿದರು, ಹಾಲು ಉಕ್ಕಿ ನಿಮ್ಮ ಅಡುಗೆ ಮನೆಯನ್ನು ಕೊಳಕಾಗಿಸುತ್ತಿದೆಯಾ..? ಈ ಟಿಪ್ಸ್‌ ಬಳಸಿ ಹಾಲು ಉಕ್ಕಿ ಹರಿಯದಂತೆ ತಡೆಯಿರಿ : ನೀವು ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಹಾಲು ಉಕ್ಕಿ ಪಾತ್ರಯಿಂದ ಹೊರಗೆ ಹರಿಯುತ್ತಿದೆಯಾ.? ಪರಿಣಿತರು ಕೂಡ ಹಾಲು ಕುದಿಸುವಲ್ಲಿ ತಪ್ಪು ಮಾಡುತ್ತಾರೆ. ಎಷ್ಟೇ ಹೊತ್ತು ನಿಂತರೂ ಕಣ್ಣಿಗೆ ಎಣ್ಣೆ ಬಿಟ್ಟು ಕಾದರು ಕೆಲವೊಮ್ಮೆ ಹಾಲು ಉಕ್ಕಿ ಅಡುಗೆ ಮನೆಯನ್ನು ಕೊಳಕಾಗಿರುತ್ತದೆ. ಈ ಸಲಹೆಗಳನ್ನು ಬಳಸಿ ಕುದಿಯುವ ಹಾಲು ಪಾತ್ರೆಯಿಂದ ಹೊರಬರದಂತೆ ತಡೆಯಿರಿ... :ನೀವು ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಹಾಲು ಉಕ್ಕಿ ಪಾತ್ರಯಿಂದ ಹೊರಗೆ ಹರಿಯುತ್ತಿದೆಯಾ.? ಪರಿಣಿತರು ಕೂಡ ಹಾಲು ಕುದಿಸುವಲ್ಲಿ ತಪ್ಪು ಮಾಡುತ್ತಾರೆ. ಎಷ್ಟೇ ಹೊತ್ತು ನಿಂತರೂ ಕಣ್ಣಿಗೆ ಎಣ್ಣೆ ಬಿಟ್ಟು ಕಾದರು ಕೆಲವೊಮ್ಮೆ ಹಾಲು ಉಕ್ಕಿ ಅಡುಗೆ ಮನೆಯನ್ನು ಕೊಳಕಾಗಿರುತ್ತದೆ. ಈ ಸಲಹೆಗಳನ್ನು ಬಳಸಿ ಕುದಿಯುವ ಹಾಲು ಪಾತ್ರೆಯಿಂದ ಹೊರಬರದಂತೆ ತಡೆಯಿರಿ... ಹಾಲನ್ನು ಕುದಿಸಲು ಸ್ಟವ್‌ ಮೇಲೆ ಇಟ್ಟ ನಂತರ, ಹಾಲಿನ ಪಾತ್ರೆಯ ಮೇಲೆ ಸ್ಟೀಲ್ ಚಮಚವನ್ನು ಇರಿಸಿ. ಹೀಗೆ ಮಾಡುವುದರಿಂದ ಹಾಲಿನ ಪಾತ್ರೆಯಿಂದ ಹೊರಬರುವ ಹಬೆ ಹೊರಬರಲು ದಾರಿ ಕಂಡುಕೊಳ್ಳದೆ ಪಾತ್ರೆಯ ಹೊಳಗೆ ಹೋಗುತ್ತದೆ. ಹಾಲು ಕುದಿಸುವ ಮೊದಲು ಹಾಲಿನ ಪಾತ್ರೆಯೊಳಗೆ ತುಪ್ಪ ಅಥವಾ ಬೆಣ್ಣೆಯನ್ನು ಹಚ್ಚಿ. ಈ ಮೃದುತ್ವದಿಂದಾಗಿ ಹಾಲು ಕುದಿದ ಮೇಲೂ ಪಾತ್ರಯಿಂದ ಹೊರ ಬರುವುದಿಲ್ಲ. ಹಾಲು ಕುದಿದು ಉಕ್ಕಿ ಬರುವುದನ್ನು ತಡೆಯಲು ಅನೇಕರು ಈ ಟ್ರಿಕ್‌ ಬಳಸುತ್ತಾರೆ. ಕುದಿಯಲು ಹಾಲಿನ ಪಾತ್ರೆಯನ್ನು ಒಲೆಯ ಮೇಲೆ ಇಟ್ಟಾಗ, ಅದೇ ಸಮಯದಲ್ಲಿ ಮರದಿಂದ ಮಾಡಿದ ಸೌಟನ್ನು ಪಾತ್ರೆಯ ಮೇಲೆ ಅಡ್ಡಲಾಗಿ ಇಡಿ ಇದರಿಂದ ಹಾಲು ಪಾತ್ರೆಯಿಂದ ಉಕ್ಕಿ ಹೊರ ಬರುವುದಿಲ್ಲ. ನೀವು ಹಾಲನ್ನು ಕುದಿಸಿದಾಗ, ಹಾಲಿನ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ. ಒಂದು ಅಥವಾ ಎರಡು ಸ್ಪೂನ್ ನೀರು ಸೇರಿಸಿದ ನಂತರವೇ ಪಾತ್ರೆಯಲ್ಲಿ ಹಾಲು ಸೇರಿಸಿ. ಈ ಕಾರಣದಿಂದಾಗಿ ಹಾಲು ಕುದಿದ ನಂತರವೂ ಉಕ್ಕಿ ಹೊರ ಬರುವುದಿಲ್ಲ. ಹಾಲು ಕುದಿಯುತ್ತಿರುವ ವೇಳೆ ತಕ್ಷಣ ಹಾಲಿನ ಮೇಲೆ ಸ್ವಲ್ಪ ನೀರು ಚಿಮುಕಿಸಿ. ಇದು ಹಾಲಿನ ಫೋಮ್ ಅನ್ನು ಸ್ಥಿರಗೊಳಿಸುತ್ತದೆ ಮತ್ತು ಹಾಲು ಕುದಿದು ಉಕ್ಕಿ ಹೊರ ಬರುವುದನ್ನು ತಡೆಯುತ್ತದೆ. (ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. ಇದನ್ನು ಖಚಿತಪಡಿಸುವುದಿಲ್ಲ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...