ತಾಮ್ರದ ಪಾತ್ರೆಗಳಲ್ಲಿನ ಮೊಂಡು ಕಲೆಗಳನ್ನು ಹೋಗಲಾಡಿಸುವುದು ಕಷ್ಟವಾಗುತ್ತಿದೆಯಾ..? ಈ ವಸ್ತು ಬಳಸಿ ಪಾತ್ರೆ ಉಜ್ಜಿ ತಟ್ಟನೆ ಪಳ ಪಳ ಹೊಳೆಯುತ್ತವೆ : ಪ್ರಾಚೀನ ಕಾಲದಲ್ಲಿ, ಜನರು ತಾಮ್ರ ಅಥವಾ ಮಣ್ಣಿನ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುತ್ತಿದ್ದರು, ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇಂದಿಗೂ ಕೆಲವರು ಅಡುಗೆಗೆ ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ. ತಾಮ್ರದ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ದೇಹಕ್ಕೆ ಆರೋಗ್ಯಕರ ಎಂದು ನಂಬಲಾಗಿದೆ. : ಪ್ರಾಚೀನ ಕಾಲದಲ್ಲಿ, ಜನರು ತಾಮ್ರ ಅಥವಾ ಮಣ್ಣಿನ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುತ್ತಿದ್ದರು, ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಇಂದಿಗೂ ಕೆಲವರು ಅಡುಗೆಗೆ ತಾಮ್ರದ ಪಾತ್ರೆಗಳನ್ನು ಬಳಸುತ್ತಾರೆ. ತಾಮ್ರದ ಪಾತ್ರೆಗಳಲ್ಲಿ ಬೇಯಿಸಿದ ಆಹಾರವು ದೇಹಕ್ಕೆ ಆರೋಗ್ಯಕರ ಎಂದು ನಂಬಲಾಗಿದೆ. ಈ ಕಾರಣಕ್ಕಾಗಿ, ತಾಮ್ರದ ಲೋಟಗಳು ಮತ್ತು ತಾಮ್ರದ ಬಾಟಲಿಗಳ ಟ್ರೆಂಡ್ ಮತ್ತೊಮ್ಮೆ ಮರಳುತ್ತಿದೆ. ಹೆಚ್ಚಿನ ಜನರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಾಮ್ರದ ಲೋಟದಿಂದ ನೀರನ್ನು ಕುಡಿಯುತ್ತಾರೆ. ಆದರೆ ತಾಮ್ರದ ಪಾತ್ರೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದಿದ್ದರೆ, ಅವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ. ನೀವು ಕೆಲವೇ ಟಿಪ್ಸ್‌ ಬಳಸಿ ಕಲೆಗಲನ್ನು ಹೋಗಲಾಡಿಸಿ ಪಾತ್ರೆಗLನ್ನು ಹೋಲೆಯುವಂತೆ ಮಾಡಬಹುದು. ಹೇಗೆ ಎಂದು ತಿಳಿಯಲು ಮುಂದೆ ಓದಿ... ಪುಡಿ ಮಾಡಲು ಬೇಕಾಗುವ ಸಾಮಾಗ್ರಿಗಳು:ಹಿಟ್ಟುಉಪ್ಪುಮಾರ್ಜಕ ಪುಡಿಸೋಡಾಸಿಟ್ರಿಕ್ ಆಮ್ಲಫುಡ್‌ ಕಲರ್‌ವಿನೆಗರ್ನೀರು ಮನೆಯಲ್ಲಿ ಪೀತಾಂಬರಿ ಪುಡಿ ತಯಾರಿಸುವ ವಿಧಾನ: ಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು, ನೀವು ಪುಡಿಯನ್ನು ಮಾಡಬೇಕಾಗುತ್ತದೆ. ಪುಡಿ ಮಾಡಲು, ಮೊದಲು ದೊಡ್ಡ ಬೌಲ್ ತೆಗೆದುಕೊಳ್ಳಿ. ಅದರಲ್ಲಿ ಒಂದು ಸಣ್ಣ ಬೌಲ್ ಹಿಟ್ಟು ಸೇರಿಸಿ. ನಂತರ ಎರಡು ಚಮಚ ಉಪ್ಪು ಮತ್ತು 5 ರಿಂದ 6 ಚಮಚ ಡಿಟರ್ಜೆಂಟ್ ಪೌಡರ್ ಸೇರಿಸಿ. ಈಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ, ಬಟ್ಟಲಿನಲ್ಲಿ 2 ರಿಂದ 3 ಸ್ಪೂನ್ ಸೋಡಾ, 4 ರಿಂದ 5 ಸ್ಪೂನ್ ಸಿಟ್ರಿಕ್ ಆಮ್ಲ ಮತ್ತು ಒಂದು ಪಿಂಚ್ ಫುಡ್‌ ಕಲರ್‌ ಅನ್ನು ಸೇರಿಸಿ. ನಂತರ ಬಟ್ಟಲಿನಲ್ಲಿ ಅರ್ಧ ಕಪ್ ವಿನೆಗರ್ ಸೇರಿಸಿ.ಇದರ ನಂತರ, ಮಿಕ್ಸರ್ ಗ್ರೈಂಡರ್ ತೆಗೆದುಕೊಂಡು ಅದರಲ್ಲಿ ಎಲ್ಲಾ ಪದಾರ್ಥಗಳನ್ನು ಸೇರಿಸಿ. ಇದರೊಂದಿಗೆ, ಅದರಲ್ಲಿ ಅರ್ಧ ಚಮಚಕ್ಕಿಂತ ಕಡಿಮೆ ನೀರನ್ನು ಸೇರಿಸಿ. ಎಲ್ಲವನ್ನೂ ಪುಡಿಮಾಡಿ. ಈ ರೀತಿಯಾಗಿ ನೀವು ಮನೆಯಲ್ಲಿಯೇ ಪೀತಾಂಬರಿ ಪುಡಿಯನ್ನು ಸುಲಭವಾಗಿ ತಯಾರಿಸಬಹುದು. ಪೀತಾಂಬರಿ ಪುಡಿಯನ್ನು ಬಳಸುವುದು ಹೇಗೆ? ಪೀತಾಂಬರಿ ಪುಡಿಯನ್ನು ಬಳಸಲು, ಮೊದಲು ಪಾತ್ರೆಯನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಇದರ ನಂತರ ಬಟ್ಟೆಯನ್ನು ತೆಗೆದುಕೊಳ್ಳಿ. ಅದರ ಮೇಲೆ ಪೀತಾಂಬರಿ ಪುಡಿಯನ್ನು ಹಚ್ಚಿ ನಂತರ ಅದರಿಂದ ಪಾತ್ರೆಗಳನ್ನು ಸ್ವಚ್ಛಗೊಳಿಸಿ. ಕೇವಲ 5 ನಿಮಿಷಗಳ ಕಾಲ ಪಾತ್ರೆಗಳನ್ನು ಉಜ್ಜಿ 20 ರಿಂದ 25 ನಿಮಿಷಗಳ ಕಾಲ ನೆನೆಯಲು ಬಿಡಿ. ಇದರ ನಂತರ, ನೀರಿನಿಂದ ತೊಳೆಯುವ ಮೂಲಕ ಪಾತ್ರೆಯನ್ನು ಸ್ವಚ್ಛಗೊಳಿಸಿ. ನಿತ್ಯವೂ ಈ ಪುಡಿಯನ್ನು ಬಳಸುತ್ತಿದ್ದರೆ ಸ್ವಲ್ಪ ಸಮಯದೊಳಗೆ ನಿಮ್ಮ ಪಾತ್ರೆಗಳು ಹೊಸದರಂತೆ ಹೊಳೆಯುತ್ತವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...