ಮಧ್ಯರಾತ್ರಿ ಇದ್ದಕ್ಕಿದ್ದಂತೆ ಯಾರೋ ನಿಮ್ಮ ಮೇಲೆ ಕುಳಿತಂತೆ ಭಾಸವಾಗುತ್ತದೆಯೇ..? ಅದಕ್ಕೆ ಇದೇ ಕಾರಣ.. : ಕೆಲವೊಂದು ಬಾರಿ ಮಧ್ಯರಾತ್ರಿ ಮಲಗಿದ್ದಾಗ ಇದ್ದಕ್ಕಿದ್ದಂತೆ ಯಾರೋ ನಿಮ್ಮ ಮೇಲೆ ಕುಳಿತಂತೆ ಭಾಸವಾಗುತ್ತದೆ. ಇದರಿಂದ ನೀವು ಭಯ ಭೀತರಾಗುತ್ತೀರಿ.. ಅಲ್ಲದೆ, ಕೊಠಡಿಯಲ್ಲಿ ದೆವ್ವ ಇದೇ ಅಂತ ನಿಮಗೆ ಅನಿಸುತ್ತದೆ.. ಹಾಗಾದ್ರೆ, ಈ ರೀತಿ ಅನುಭವವಾಗಲು ಕಾರಣವೇನು..? ಆತ್ಮದ ಕಾಟವೇ..? ಬನ್ನಿ ತಿಳಿಯೋಣ.. :ವೈದ್ಯಕೀಯ ಸಂಶೋಧನೆಯ ಪ್ರಕಾರ ರಾತ್ರಿ ನೀವು ಮಲಗಿದ್ದಾಗ ಎದೆಯ ಮೇಲೆ ಯಾರೋ ಕುಳಿತಂತೆ ನಿಮಗೆ ಭಾಸವಾಗದರೆ ಇದನ್ನು ನಿದ್ರಾ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ. ಎತ್ತರದ ಸ್ಥಳದಿಂದ ಬೀಳುವುದು, ಆಳವಾದ ನೀರಿನಲ್ಲಿ ಮುಳುಗುವುದು ಅಥವಾ ಪ್ರೀತಿಪಾತ್ರರ ಸಾವಿನಂತಹ ದುಃಸ್ವಪ್ನಗಳು ಸಂಭವಿಸುತ್ತವೆ. ಹಾಗಾದರೆ ನಿದ್ರಾ ಪಾರ್ಶ್ವವಾಯು ಎಂದರೇನು..? ಇಲ್ಲಿದೆ ಉತ್ತರ.. ಮಧ್ಯರಾತ್ರಿಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ನಿಮ್ಮ ಮೇಲೆ ಕುಳಿತಿರುವಂತೆ, ನೀವು ಶಬ್ದ ಮಾಡಲು ಸಾಧ್ಯವಾಗುವುದಿಲ್ಲ, ನಿಮ್ಮ ಕೈ ಮತ್ತು ಕಾಲುಗಳನ್ನು ಯಾರೋ ಕಟ್ಟಿ ಹಾಕಿದಂತಾಗುತ್ತದೆ.. ಇದು ಕೆಲವು ಅಲೌಕಿಕ ವಿದ್ಯಮಾನಗಳಿಂದಾಗಿ ಜರುಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು.. ಇದನ್ನೂ ಓದಿ: ವೈದ್ಯಕೀಯ ಸಂಶೋಧನೆಯ ಪ್ರಕಾರ, ನಿದ್ರಾ ಪಾರ್ಶ್ವವಾಯು ಒಂದು ರೀತಿಯ ನಿದ್ರಾಹೀನತೆಯಿಂದ ಬರುವ ಸಮಸ್ಯೆಯಾಗಿದೆ. ನೀವು ನಿದ್ರಿಸುವಾಗ ನಿಮ್ಮ ಆತ್ಮ ಹೊರಟುಹೋದಂತೆ ಮತ್ತು ನಿಮ್ಮ ಕೈಗಳು ಮತ್ತು ಕಾಲುಗಳು ಚಲನೆ ಕಳೆದುಕೊಂಡಂತೆ ಭಾಸವಾಗುತ್ತದೆ.. ಇದನ್ನೇ ನಿದ್ರಾ ಪಾರ್ಶ್ವವಾಯು ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಮನಸ್ಸು ಎಚ್ಚರವಾಗಿದ್ದು, ನಿಮ್ಮ ದೇಹವು ನಿದ್ರಿಸುತ್ತಿರುತ್ತದೆ. ಈ ಸಮಸ್ಯೆ ಹೆಚ್ಚಾಗಿ ಯುವ ಪೀಳಿಗೆಯಲ್ಲಿ ಕಂಡು ಬರುತ್ತದೆ.. ಆಳವಾದ ನಿದ್ರೆಗೆ ಹೋಗುವ ಮೊದಲು ಅಥವಾ ಎಚ್ಚರವಾದ ಸ್ವಲ್ಪ ಸಮಯದ ನಂತರ ಇದು ಸಂಭವಿಸುತ್ತದೆ. ನಿದ್ರಾ ಪಾರ್ಶ್ವವಾಯುವಿಗೆ ಕಾರಣವೇನು? :ನಿದ್ರಾ ಪಾರ್ಶ್ವವಾಯುವಿಗೆ ಹಲವು ಕಾರಣಗಳಿವೆ. ಕೆಲವು ಕಾರಣಗಳಲ್ಲಿ ನಿದ್ರೆಯ ಕೊರತೆ ಮತ್ತು ಒತ್ತಡವೂ ಸೇರಿವೆ. ನೀವು ಸಾಕಷ್ಟು ನಿದ್ರೆ ಮಾಡದಿದ್ದಾಗ, ಈ ನಿದ್ರಾ ಪಾರ್ಶ್ವವಾಯು ಸಮಸ್ಯೆ ಉಂಟಾಗುತ್ತದೆ. ನೀವು ಕಾಲಕಾಲಕ್ಕೆ ನಿಮ್ಮ ಮಲಗುವ ವಿಧಾನವನ್ನು ಬದಲಾಯಿಸಿದರೆ, ಈ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ, ಈ ನಿದ್ರಾ ಪಾರ್ಶ್ವವಾಯು ಸಮಸ್ಯೆಗೆ ಅತಿಯಾದ ನಿದ್ದೆ ಕೂಡ ಒಂದು ಕಾರಣ. ಇದನ್ನೂ ಓದಿ: ನಿದ್ರಾ ಪಾರ್ಶ್ವವಾಯು ಸಮಸ್ಯೆಯನ್ನು ತಡೆಯುವುದು ಹೇಗೆ..? :ಪ್ರತಿದಿನ 7-8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿ. 12 ಗಂಟೆಗೆ ಮಲಗುವುದನ್ನು ತಪ್ಪಿಸಿ ಮತ್ತು ಬೆಳಿಗ್ಗೆ ಬೇಗನೆ ಏಳಿ. ಒತ್ತಡವನ್ನು ಕಡಿಮೆ ಮಾಡಲು ಮತ್ತು ಶಾಂತವಾಗಿ ಮಲಗಲು ಯೋಗ, ಧ್ಯಾನ ಇತ್ಯಾದಿಗಳನ್ನು ಮಾಡಿ. ಮಲಗುವ ಮುನ್ನ ಕಾಫಿ ಮತ್ತು ಹೆಚ್ಚು ಊಟ ಸೇವನೆ ತಪ್ಪಿಸಿ. ಮಲಗುವ ಸ್ಥಳವನ್ನು ಶಾಂತವಾಗಿಡಿ. ಆಲ್ಕೋಹಾಲ್ ಮತ್ತು ಸಿಗರೇಟ್ ಸೇವಿಸಬೇಡಿ. ಮಲಗುವ ಎರಡು ಗಂಟೆಗಳ ಮೊದಲು ಫೋನ್ ಅನ್ನು ನೋಡಬೇಡಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...