ನೈಸರ್ಗಿಕ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ? ಆಲೂಗಡ್ಡೆಯನ್ನು ಈ ರೀತಿ ಬಳಸಿ : ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಪಡೆಯಲು ನಿಮ್ಮ ಅಡುಗೆಮನೆಯಲ್ಲಿಯೇ ಇರುವ ಆಲೂಗಡ್ಡೆ ತುಂಬಾ ಪ್ರಯೋಜನಕಾರಿ ಆಗಿದೆ. :ಹೊಳೆಯುವ, ಕಾಂತಿಯುತವಾದ ಸುಂದರ ತ್ವಚೆಯನ್ನು ಹೊಂದಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಆಲೂಗಡ್ಡೆ ನಿಮಗೆ ತುಂಬಾ ಪ್ರಯೋಜನಕಾಗಿ ಆಗಿದೆ. ಆಲೂಗಡ್ಡೆಯಲ್ಲಿ ತ್ವಚೆಯ ಕಾಂತಿಯನ್ನು ( ) ಹೆಚ್ಚಿಸಲು ಅಗತ್ಯವಾದ ವಿಟಮಿನ್ ಸಿ, ಪೊಟ್ಯಾಸಿಯಮ್ ಸೇರಿದಂತೆ ಹಲವು ಜೀವಸತ್ವಗಳು ಕಂಡು ಬರುವುದರಿಂದ ಇದು( ) ಪಡೆಯಲು ಸಹಕರಿಸುತ್ತದೆ. ಇದಕ್ಕಾಗಿ ಆಲೂಗಡ್ಡೆಯನ್ನು ಬಳಸುವ ಸರಿಯಾದ ವಿಧಾನವನ್ನು ತಿಳಿಯೋಣ... ನಿಂಬೆ ಹಣ್ಣಿನೊಂದಿಗೆ ಆಲೂಗಡ್ಡೆ:ಸಮ ಪ್ರಮಾಣದಲ್ಲಿ ಆಲೂಗಡ್ಡೆ-ನಿಂಬೆ ರಸವನ್ನು ಬೆರೆಸಿ ಈ ಮಿಶ್ರಣವನ್ನು( ) ರೀತಿ ಕುತ್ತಿಗೆಯವರೆಗೂ ಹಚ್ಚಿ 15 ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಈ ರೀತಿ ಮಾಡುವುದರಿಂದ ಎಣ್ಣೆಯುಕ್ತ ಚರ್ಮದ ಸಮಸ್ಯೆ ನಿವಾರಣೆಯಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ. ಇದನ್ನೂ ಓದಿ- ಡ್ರೈ ಸ್ಕಿನ್‌ಗಾಗಿ ಆಲೂಗಡ್ಡೆ:ನಿಮ್ಮ ಸ್ಕಿನ್ ಡ್ರೈ ಆಗಿದ್ದರೆ ಆಲೂಗಡ್ಡೆಯನ್ನು ಬೇಯಿಸಿ ಅದರಲ್ಲಿ ಹಾಲಿನ ಪುಡಿ, ಬಾದಾಮಿ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಫೇಶಿಯಲ್ ರೀತಿ ಬಳಸಿ. ಆಲೂಗಡ್ಡೆ ಮತ್ತು ಸೌತೆಕಾಯಿ:ಸಿಪ್ಪೆ ಸುಲಿದ ಸೌತೆಕಾಯಿ ಹಾಗೂ ಆಲೂಗಡ್ಡೆಯನ್ನು ತುರಿದು ಎರಡನ್ನೂ ಬೆರೆಸಿ ಕ್ಲೆನ್ಸರ್ ತಯಾರಿಸಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದನ್ನೂ ಓದಿ- ಆಲೂಗಡ್ಡೆ ಮಸಾಜ್:ತಾಜಾ ಆಲೂಗಡ್ಡೆಯನ್ನು ಕತ್ತರಿಸಿ ಎರಡು ಒಳುಗಳಾಗಿ ಮಾಡಿ, ಇದನ್ನು ವೃತ್ತಾಕಾರದಲ್ಲಿ ಮುಖದ ಮೇಲೆ ಉಜ್ಜುತ್ತಾ ನಯವಾಗಿ ಮಸಾಜ್ ಮಾಡಿ. ಇದರಿಂದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸುಕ್ಕುಗಳ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಜೊತೆಗೆ ನೈಸರ್ಗಿಕವಾದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...