ಕೂದಲುದುರುವಿಕೆ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿ ನಿಮ್ಮ ಮನೆಯಲ್ಲಿರುವ ಈ ಪದಾರ್ಥಗಳು! : ಇತ್ತೀಚಿನ ಜೀವನಶೈಲಿಯಿಂದಾಗಿ ಕೂದಲು ಉದುರುವಿಕೆ ಒಂದು ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ. ಆದರೆ, ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. :ಸುಂದರ್ ಕೇಶರಾಶಿಯನ್ನು ಹೊಂದಬೇಕು ಎಂಬುದು ಪ್ರತಿ ಹೆಣ್ಣು ಮಕ್ಕಳ ಬಯಕೆ ಆಗಿರುತ್ತದೆ. ಆದರೆ, ಬದಲಾದ ಜೀವನಶೈಲಿಯಿಂದಾಗಿ ಕೂದಲು ಉದುರುವಿಕೆ ಸರ್ವೇ ಸಾಮಾನ್ಯವಾಗಿ ಕಾಡುವ ಸಮಸ್ಯೆ ಆಗಿದೆ. ಆದಾಗ್ಯೂ, ನೀವು ನಿಮ್ಮ ಮನೆಯಲ್ಲಿ ಲಭ್ಯವಿರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಕೂದಲು ಉದುರುವಿಕೆಯಿಂದ ಪರಿಹಾರ ಪಡೆಯಬಹುದು. ಕೂದಲುದುರುವಿಕೆ ಸಮಸ್ಯೆಗೆ ನೈಸರ್ಗಿಕ ಪರಿಹಾರ ( ) ನೀಡಬಲ್ಲ ಪರಿಣಾಮಕಾರಿ ಪದಾರ್ಥಗಳೆಂದರೆ...* ನೆಲ್ಲಿಕಾಯಿ:ನೆಲ್ಲಿಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಹೇರಳವಾಗಿದ್ದು ಇದರ ಬಳಕೆಯಿಂದದೊರೆತು ಕೂದಲುದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. * ಈರುಳ್ಳಿ ರಸ:ಈರುಳ್ಳಿಯಲ್ಲಿ ಸಲ್ಫರ್‌ ಸಮೃದ್ಧವಾಗಿದ್ದು, ಕೊಬ್ಬರಿ ಎಣ್ಣೆಯಲ್ಲಿ ಈರುಳ್ಳಿ ರಸವನ್ನು ಬೆರೆಸಿ ಕೂದಲಿಗೆ ಬಳಸುವುದರಿಂದ ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ, ಕೂದಲ ಬೆಳವಣಿಗೆಯನ್ನು ( ) ಉತ್ತೇಜಿಸುತ್ತದೆ. ಇದನ್ನೂ ಓದಿ- * ಕೊಬ್ಬರಿ ಎಣ್ಣೆ:ನಿಯಮಿತವಾಗಿ ಕೂದಲಿಗೆಯನ್ನು ಬಳಸುವುದರಿಂದಲೂ ಕೂದಲುದುರುವಿಕೆ ಸಮಸ್ಯೆಯಿಂದ ( ) ಪರಿಹಾರ ಪಡೆಯಬಹುದು. * ಅಲೋವೇರಾ:ಅಲೋವೇರಾ ಜೆಲ್ ಅನ್ನು ನೆತ್ತಿಗೆ ಅನ್ವಯಿಸುವುದರಿಂದ ಇದು ನೆತ್ತಿಯ ಮಟ್ಟವನ್ನು ಸುಧಾರಿಸಿ, ಕೂದಲುದುರುವಿಕೆ ಸಮಸ್ಯೆ ನಿವಾರಿಸುತ್ತದೆ. ಅಷ್ಟೇ ಅಲ್ಲ, ನೆತ್ತಿಯ ತುರಿಕೆ, ಉರಿಯೂತ ಮತ್ತು ತಲೆಹೊಟ್ಟಿನ ಸಮಸ್ಯೆಗಳಿಂದಲೂ ಪರಿಹಾರ ದೊರೆಯುತ್ತದೆ. ಇದನ್ನೂ ಓದಿ- * ಬೀಟ್ರೂಟ್ ರಸ:ಬೀಟ್ರೂಟ್ ಉತ್ತಮ ಆರೋಗ್ಯಕ್ಕಷ್ಟೇ ಅಲ್ಲ, ಕೂದಲಿನ ಆರೋಗ್ಯಕ್ಕೂ ಪರಿಣಾಮಕಾರಿ ನೈಸರ್ಗಿಕ ಮದ್ದು. ಕೊಬ್ಬರಿ ಎಣ್ಣೆ, ಅಲೋವೆರಾ ಜೆಲ್ ಜೊತೆಗೆ ಬೀಟ್ರೂಟ್ ರಸವನ್ನು ಬೆರೆಸಿ ಕೂದಲಿನ ಬುಡದಿಂದಲೂ ಹಚ್ಚಿ. ಅದು ಒಣಗಿದ ನಂತರ ಹೇರ್ ವಾಶ್ ಮಾಡುವುದರಿಂದ ಕೂದಲಿನ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...