ಗಡ್ಡದಾರಿ ಅಥವಾ ಕ್ಲೀನ್ ಶೇವ್ಡ್ ಹುಡುಗ ? ಹುಡುಗಿಯರು ಇಷ್ಟಪಡುವುದು ಯಾರನ್ನು !ಸಂಬಂಧ ಉಳಿಸಿಕೊಳ್ಳುವವರಲ್ಲಿ ಯಾರು ಮೇಲು? ಗಡ್ಡ ಇಟ್ಟು ಕೊಂಡಿರುವ ಯುವಕರಿಗೆ ಹೆಣ್ಣಿನ ಬಗ್ಗೆ ಯಾವ ಭಾವನೆ ಇರುತ್ತದೆ? ಕ್ಲೀನ್ ಶೇವ್ ಮಾಡಿರುವ ಹುಡುಗರು ಸಂಬಂಧವನ್ನು ಯಾವ ರೀತಿ ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಒಂದು ಅಧ್ಯಯನವೇ ನಡೆದಿದೆ. ಬೆಂಗಳೂರು :ತನ್ನ ಬಾಳಿನಲ್ಲಿ ಬರುವ ಸಂಗಾತಿ ಹೀಗೆಯೇ ಇರಬೇಕು ಎನ್ನುವ ಆಸೆ ಹುಡುಗರಿಗೂ ಇರುತ್ತದೆ ಹುಡುಗಿಯರಿಗೂ ಇರುತ್ತದೆ. ಇನ್ನು ಹುಡುಗಿಯರು ಎಂಥಹ ಹುಡುಗರನ್ನು ಇಷ್ಟ ಪಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಬಯಕೆ ಹುಡುಗರಿಗೂ ಇರುತ್ತದೆ. ಆದರೆ ತಿಳಿದುಕೊಳ್ಳುವುದು ಹೇಗೆ ಎನ್ನುವುದೇ ಸವಾಲು. ಇತ್ತೀಚೆಗೆ ಹುಡುಗಿಯರು ಎಂಥಹ ಹುಡುಗರನ್ನು ಇಷ್ಟಪಡುತ್ತಾರೆ ಎನ್ನುವ ಬಗ್ಗೆ ಅಧ್ಯಯನ ನಡೆದಿದೆ. ಈ ಆಧ್ಯಯನದ ವರದಿ ಕೂಡಾ ಹೊರ ಬಂದಿದೆ. ಹಾಗೆಯೇಹುಡುಗರನ್ನು ಕೂಡಾ ಅಧ್ಯಯನಕ್ಕೆ ಒಳಪಡಿಸಲಾಗಿದೆ.ಈ ಮೂಲಕ ಹುಡುಗಿಯರ ಮತ್ತು ಸಂಬಂಧಗಳ ಬಗ್ಗೆ ಅವರ ಮನಸ್ಸಿನಲ್ಲಿ ಇರುವ ವಿಚಾರಗಳನ್ನು ಕೂಡಾ ತಿಳಿದುಕೊಳ್ಳಲಾಗಿದೆ. ಇದನ್ನೂ ಓದಿ : ಅಧ್ಯಯನದ ಪ್ರಕಾರ,ಗಡ್ಡವಿರುವ ಪುರುಷರು ತಮ್ಮ ಕ್ಲೀನ್-ಶೇವ್ ಮಾಡಿಕೊಂಡಿರುವವರಿಗಿಂತ ತಮ್ಮ ಸಂಬಂಧಗಳಲ್ಲಿ ಹೆಚ್ಚು ಸ್ಥಿರವಾಗಿರುತ್ತಾರೆ.ಆರ್ಕೈವ್ಸ್ ಆಫ್ ಸೆಕ್ಷುಯಲ್ ಬಿಹೇವಿಯರ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಗಡ್ಡಧಾರಿ ಪುರುಷರು ಹೊಸ ಹೊಸ ಹುಡುಗಿಯರ ಹುಡುಕಾಟದಲ್ಲಿ ಇರುತ್ತಾರೆಯಂತೆ. ಆದರೆ ಗಡ್ಡ ಇರುವ ಹುಡುಗರು ಒಮ್ಮೆ ಯಾರೊಂದಿಗಾದರೂ ಸಂಬಂಧ ಬೆಳೆಸಿದರೆ ಆ ಸಂಬಂಧವನ್ನು ಜೀವನ ಪೂರ್ತಿ ಉಳಿಸಿಕೊಳ್ಳಲು ಬಯಸುತ್ತಾರೆಯಂತೆ. ಗಡ್ಡ ಇರುವ ಯುವಕರು ತಮ್ಮ ಬದುಕಿನಲ್ಲಿ ಪ್ರವೇಶವಾದ ಹುಡುಗಿಯ ಜೊತೆ ಬಹಳ ಪ್ರಾಮಾಣಿಕವಾಗಿ ಜೀವನ ಕಳೆಯುತ್ತಾರೆಯಂತೆ.ತಮ್ಮ ಕುಟುಂಬ, ಹುಡುಗಿ, ಮನೆ, ಮಕ್ಕಳು ಈ ಬಗ್ಗೆ ಇವರ ಗಮನ ಹೆಚ್ಚು.ಪ್ರೀತಿಸುತ್ತಾರೆಯಂತೆ. ಇದನ್ನೂ ಓದಿ : ಹುಡುಗಿಯರಿಗೆ ಯಾರಿಷ್ಟ ? :ಇನ್ನು ಹುಡುಗಿಯರಿಗೆ ಯಾರು ಇಷ್ಟವಾಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಕೂಡಾ ಇಲ್ಲಿದೆ. ಹುಡುಗಿಯರಿಗೂ ಕ್ಲೀನ್ ಶೇವ್ ಮಾಡಿಕೊಂಡಿರುವ ಹುಡುಗರಿಗಿಂತ ಗಡ್ಡ ಹೊಂದಿರುವ ಯುವಕರೇ ಹೆಚ್ಚು ಇಷ್ಟವಾಗುವುದಂತೆ. ಗಡ್ಡ ಇರುವ ಯುವಕರತ್ತ ಹುಡುಗಿಯರು ಸುಲಭವಾಗಿ ಆಕರ್ಷಿತರಾಗುತ್ತಾರೆಯಂತೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...