ಬಿಳಿ ಬಟ್ಟೆ ಮೇಲೆ ಹಳದಿ ಕಲೆಗಳಿದ್ಯಾ? ಹಾಗಾದ್ರೆ ಜಸ್ಟ್ 5 ರೂ. ಬೆಲೆಯ ಈ ವಸ್ತುವಿನಿಂದ ವಾಶ್‌ ಮಾಡಿ.. ಚಿಟಿಕೆಯಲ್ಲಿ ಕಲೆ ಮಾಯವಾಗುತ್ತೆ : ಮಳೆಗಾಲದಲ್ಲಿ ಕೆಸರು ಸಮಸ್ಯೆಯೂ ಒಂದು. ಎಷ್ಟೇ ಎಚ್ಚರಿಕೆ ವಹಿಸಿದರೂ ನಡೆಯುವಾಗ ಬಟ್ಟೆಯ ಮೇಲೆ ಒಂದಿಷ್ಟು ಮಣ್ಣು ಬೀಳುತ್ತದೆ. ಬಟ್ಟೆಯ ಮೇಲಿನ ಕೊಳೆಯನ್ನು ಬಹಳ ಸುಲಭವಾಗಿ ಹೋಗಲಾಡಿಸಲು ಈ ಟಿಪ್ಸ್‌ʼಗಳನ್ನು ಪ್ರಯತ್ನಿಸಿ. :ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ಬಟ್ಟೆಯ ಮೇಲೆ ಒಂದಿಷ್ಟು ಮಣ್ಣು ಅಥವಾ ಬೇರಾವುದೋ ಕಲೆಗಳು ಆಗುವುದು ಸಹಜ. ಇನ್ನು ನೀರಿನಿಂದ ತೊಳೆದರೆ ಈ ಕಲೆಗಳು ಮಾಯವಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಅಷ್ಟು ಸುಲಭವಾಗಿ ಆ ಕಲೆಗಳು ಹೋಗುವುದಿಲ್ಲ. ಹೀಗಿರುವಾಗ ಅಂತಹ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಕೆಲ ಟಿಪ್ಸ್‌ ಇಲ್ಲಿ ನೀಡಲಿದ್ದೇವೆ. ಇದನ್ನೂ ಓದಿ: ಮಳೆಗಾಲದಲ್ಲಿ ಕೆಸರು ಸಮಸ್ಯೆಯೂ ಒಂದು. ಎಷ್ಟೇ ಎಚ್ಚರಿಕೆ ವಹಿಸಿದರೂ ನಡೆಯುವಾಗ ಬಟ್ಟೆಯ ಮೇಲೆ ಒಂದಿಷ್ಟು ಮಣ್ಣು ಬೀಳುತ್ತದೆ. ಬಟ್ಟೆಯ ಮೇಲಿನ ಕೊಳೆಯನ್ನು ಬಹಳ ಸುಲಭವಾಗಿ ಹೋಗಲಾಡಿಸಲು ಈ ಟಿಪ್ಸ್‌ʼಗಳನ್ನು ಪ್ರಯತ್ನಿಸಿ. ಮೊದಲಿಗೆ, ಕಲೆಗಳನ್ನು ತಕ್ಷಣ ಟಿಶ್ಯೂ ಅಥವಾ ಪೇಪರ್‌ʼನಿಂದ ಒರೆಸಿ. ಅದು ಸಾಧ್ಯವಾಗದಿದ್ದರೆ, ನೀರಿನಲ್ಲಿ ಒದ್ದೆ ಮಾಡಿ ಬ್ರಶ್ʼನಿಂದ ಉಜ್ಜಿ. ಅದರ ನಂತರ ಡಿಟರ್ಜೆಂಟ್ ಬೆರೆಸಿದ ಬಿಸಿ ನೀರಿನಲ್ಲಿ ನೆನೆಸಿ ತೊಳೆಯಿರಿ. ಮಣ್ಣಿನ ಕಲೆಗಳನ್ನು ತೆಗೆದುಹಾಕುವಲ್ಲಿ ವಿನೆಗರ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮಣ್ಣಿನ ಕಲೆ ಇರುವ ಕಡೆ ವಿನೆಗರ್ ಹಚ್ಚಬೇಕು. ನಂತರ ಡಿಟರ್ಜೆಂಟ್‌ ಬೆರೆಸಿದ ಬಿಸಿ ನೀರಿನಲ್ಲಿ ಬಟ್ಟೆಗಳನ್ನು ನೆನೆಸಿ. ಅರ್ಧ ಗಂಟೆಯ ನಂತರ ಕೈಯಿಂದ ಉಜ್ಜಿದರೆ ಮಣ್ಣಿನ ಕಲೆ ಮಾಯವಾಗುತ್ತದೆ. ಇದನ್ನೂ ಓದಿ: ನಿಂಬೆ ಮತ್ತು ಅಡಿಗೆ ಸೋಡಾ ಕೂಡ ಮಣ್ಣಿನ ಕಲೆಗಳನ್ನು ತೆಗೆದುಹಾಕಬಹುದು. ನಿಂಬೆ ಮತ್ತು ಅಡಿಗೆ ಸೋಡಾ ಬಟ್ಟೆಯಿಂದ ಮಣ್ಣಿನ ಕಲೆಗಳನ್ನು ತೆಗೆದುಹಾಕುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕಲೆಗಳ ಮೇಲೆ ನಿಂಬೆ ರಸ ಮತ್ತು ಅಡಿಗೆ ಸೋಡಾವನ್ನು ಮಿಕ್ಸ್‌ ಮಾಡಿ, ಬ್ರಶ್‌ ಸಹಾಯದಿಂದ ಬಟ್ಟೆಯನ್ನು ಮೆಲ್ಲಗೆ ಉಜ್ಜಿ. ಸುಲಭವಾಗಿ ಹಳದಿ ಕಲೆ ಮಾಯವಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...