ಪ್ಯಾರಿಸ್ ಒಲಿಂಪಿಕ್ಸ್ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ :ಸರಳ ಉಡುಗೆಯಲ್ಲಿ ನೀತಾ ಮಿಂಚಿದ್ದು ಹೀಗೆ 2024 :ನೀತಾ ಅಂಬಾನಿ ಒಲಿಂಪಿಕ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಫೋಟೋವನ್ನು ಅಂಬಾನಿ ಅಪ್ಡೇಟ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. 2024 :ಪ್ಯಾರಿಸ್‌ನ ಲೂಯಿ ವಿಟಾನ್ ಫೌಂಡೇಶನ್‌ನಲ್ಲಿ 142 ನೇ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸೆಶನ್ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಭಾಗವಹಿಸಿದ್ದರು.ಸಮಾರಂಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ನೀತಾ ಅಂಬಾನಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ನೀತಾ ಅಂಬಾನಿಗೆ ಸ್ವಾಗತ :ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಭಾಗಿಯಾಗಿರುವ ಫೋಟೋ ಹಂಚಿಕೊಳ್ಳಲಾಗಿದೆ. ಇಲ್ಲಿ ಎಮ್ಯಾನುಯೆಲ್ ಮ್ಯಾಕ್ರನ್ ನೀತಾ ಅಂಬಾನಿ ಅವರ ಕೈಗೆ ಕಿಸ್ ಮಾಡುವ ಮೂಲಕ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ಇದನ್ನೂ ಓದಿ : ನೀತಾ ಅಂಬಾನಿ ಕಂಗೊಳಿಸಿದ್ದು ಹೀಗೆ :ಈ ಸಂದರ್ಭದಲ್ಲಿ ನೀತಾ ಸಂಕೀರ್ಣವಾದ ಕಸೂತಿಯಲ್ಲಿ ಅಲಂಕರಿಸಲ್ಪಟ್ಟ ಕೆಂಪು ಸೂಟ್‌ ಧರಿಸಿ ಭಾರತವನ್ನು ಪ್ರತಿನಿಧಿಸಿದ್ದಾರೆ.ನೀತಾ ಅಂಬಾನಿ ಧರಿಸಿದ್ದಸೈಡ್ ಸ್ಲಿಟ್‌ಗಳನ್ನು ಹೊಂದಿದ್ದು, ಉದ್ದದ ತೋಳುಗಳನ್ನು ಒಳಗೊಂಡಿತ್ತು. ಇದರಲ್ಲಿ ಚಿನ್ನದ ಕಸುಉತಿ ಕೂಡಾ ಇತ್ತು ಎನ್ನುವುದು ಗಮನಾರ್ಹ. ಇನ್ನು ನೀತಾ ಚಿನ್ನದ ಕಡಾ ಧರಿಸಿದ್ದರು. ಬಹಳ ಸರಳವಾದ ಉಡುಪಿನಲ್ಲಿಯೂ ನೀತಾ ಮಿರ ಮಿರ ಮಿಂಚುತ್ತಿದ್ದರು. 2024 ರ ಪ್ಯಾರಿಸ್ ಒಲಿಂಪಿಕ್ಸ್ :2024 ರ ಬೇಸಿಗೆ ಒಲಿಂಪಿಕ್ಸ್ ಚತುರ್ವಾರ್ಷಿಕ ಈವೆಂಟ್‌ನ 33 ನೇ ಆವೃತ್ತಿಯಾಗಿದೆ. ಇದು ಜುಲೈ 26 ರಿಂದ ಆಗಸ್ಟ್ 11 ರವರೆಗೆ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯಲಿದೆ. 200 ಕ್ಕೂ ಹೆಚ್ಚು ದೇಶಗಳು ತಮ್ಮ ಕ್ರೀಡಾಪಟುಗಳು 32 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ : ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...