ಮನೆಯ ಮುಂದೆ ಇದೊಂದು ಗಿಡ ನೆಟ್ಟು ನೋಡಿ... ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ! ಇದರ ವಾಸನೆಗೆ ಓಡಿ ಹೋಗುತ್ತೆ : ಹೀಗಿರುವಾಗ ಹಾವುಗಳನ್ನು ಮನೆಯಿಂದ ದೂರವಿಡಲು ಕೆಲವು ಸಸ್ಯಗಳನ್ನು ನೆಟ್ಟು ನೋಡಿ. ಇದರ ವಾಸನೆಯು ಮನೆಯ ಬಳಿಕ ಹಾವುಗಳು ಬಾರದಂತೆ ತಡೆಯುತ್ತದೆ. :ಮಳೆಗಾಲವು ಬಿಸಿಲಿನ ತಾಪದಿಂದ ಉಪಶಮನವನ್ನು ನೀಡುತ್ತದೆ. ಆದರೆ ಇದು ಹಲವಾರು ರೋಗಗಳನ್ನು ಸಹ ತರುತ್ತದೆ ಎಂಬುದು ತಿಳಿದ ಸಂಗತಿ. ಇದಲ್ಲದೆ, ಈ ಋತುವಿನಲ್ಲಿ ವಿವಿಧ ರೀತಿಯ ಅಪಾಯಕಾರಿ ಹಾವುಗಳು ಮನೆಗೆ ಪ್ರವೇಶಿಸುವ ಅಪಾಯವೂ ಹೆಚ್ಚಾಗುತ್ತದೆ. ಹೀಗಿರುವಾಗ ಹಾವುಗಳನ್ನು ಮನೆಯಿಂದ ದೂರವಿಡಲು ಕೆಲವು ಸಸ್ಯಗಳನ್ನು ನೆಟ್ಟು ನೋಡಿ. ಇದರ ವಾಸನೆಯು ಮನೆಯ ಬಳಿಕ ಹಾವುಗಳು ಬಾರದಂತೆ ತಡೆಯುತ್ತದೆ. ಇದನ್ನೂ ಓದಿ: ವರ್ಮ್ವುಡ್ ಸಸ್ಯ- ವರ್ಮ್ವುಡ್ ಒಂದು ವಿಶೇಷ ವಾಸನೆಯನ್ನು ಹೊಂದಿರುವ ಸಸ್ಯವಾಗಿದೆ. ಅದರ ವಾಸನೆಯನ್ನು ಹಾವುಗಳು ಸಹಿಸುವುದಿಲ್ಲ. ನಿಮ್ಮ ಉದ್ಯಾನ, ಅಂಗಳ, ಬಾಲ್ಕನಿ ಅಥವಾ ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ವರ್ಮ್ವುಡ್ ಗಿಡವನ್ನು ನೆಡಿ. ಈ ವರ್ಮ್ವುಡ್ ವಾಸನೆಯ ಬಂದ ತಕ್ಷಣ ಹಾವುಗಳು ಅಲ್ಲಿಂದ ಓಡಿ ಹೋಗುತ್ತದೆ. ಬೇವಿನ ಗಿಡ- ಬೇವು ರುಚಿಯಲ್ಲಿ ತುಂಬಾ ಕಹಿ. ಆದರೆ ಹಲವಾರು ಆರೋಗ್ಯ ಪ್ರಯೋಜನ ಹೊಂದಿರುವ ಸಸ್ಯ. ಹಾವುಗಳು ಅದರಿಂದ ಹೊರಹೊಮ್ಮುವ ವಾಸನೆಯನ್ನು ಸಹಿಸುವುದಿಲ್ಲ. ಅಂಗಳದಲ್ಲಿ ಅಥವಾ ನಿಮ್ಮ ಮನೆಯ ಹೊರಗೆ ಬೇವಿನ ಮರವಿದ್ದರೆ, ಹಾವುಗಳಿಂದ ಸುರಕ್ಷಿತವಾಗಿರಬಹುದು. ಚೆಂಡುಹೂವಿನ ಗಿಡ- ಅನೇಕ ಜನರು ತಮ್ಮ ತೋಟ, ತಾರಸಿ, ಬಾಲ್ಕನಿಯಲ್ಲಿ ಚೆಂಡುಹೂವಿನ ಗಿಡವನ್ನು ನೆಡುತ್ತಾರೆ. ಈ ಗಿಡ ನೆಟ್ಟರೆ ಹಾವುಗಳಿಂದ ಸುರಕ್ಷಿತವಾಗಿರಬಹುದು. ಏಕೆಂದರೆ ಚೆಂಡುಹೂವಿನ ಬಲವಾದ ಪರಿಮಳವು ಹಾವುಗಳಿಗೆ ಇಷ್ಟವಾಗುವುದಿಲ್ಲ. ಇದನ್ನೂ ಓದಿ: ಕಳ್ಳಿ- ಕಳ್ಳಿ ಒಂದು ಮುಳ್ಳಿನ ಗಿಡ. ಹಾವುಗಳು ಅಂತಹ ಸಸ್ಯಗಳ ಬಳಿ ಬರುವುದಿಲ್ಲ. ಮನೆಯ ಕಿಟಕಿಗಳು, ಮುಖ್ಯ ಗೇಟ್, ಬಾಲ್ಕನಿ ಮುಂತಾದ ಸ್ಥಳಗಳಲ್ಲಿ ಇದನ್ನು ಬೆಳೆಸಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...