: ಪೋಷಕಾಂಶಗಳ ಮೂಲ.. ಈ ವೆರೈಟಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ..! : ರವೆಯಿಂದ ಇಡ್ಲಿ ಮಾಡುವುದು ಎಲ್ಲರಿಗೆ ಗೊತ್ತಿರುವ ವಿಷಯ ಆದರೆ ಪೌಷ್ಟಿಕ ಆಹಾರವಾಗಿ ವೆಜಿಟೇಬಲ್ ಇಡ್ಲಿಯನ್ನು ತಯಾರಿಸಬಹುದು. ರವೆಯಿಂದ ಇಡ್ಲಿ ಮಾಡುವುದು ಎಲ್ಲರಿಗೆ ಗೊತ್ತಿರುವ ವಿಷಯ ಆದರೆ ಪೌಷ್ಟಿಕ ಆಹಾರವಾಗಿ ವೆಜಿಟೇಬಲ್ ಇಡ್ಲಿಯನ್ನು ತಯಾರಿಸಬಹುದು. ಇದು ಆರೋಗ್ಯಕ್ಕೆ ಪೌಷ್ಟಿಕತೆಯನ್ನು ನೀಡುವುದರ ಜೊತೆಗೆ ದೇಹಕ್ಕೆ ತುಂಬಾ ಸಹಕಾರಿಯಾಗಿದೆ ಈ ಇಡ್ಲಿಯನ್ನು ತಯಾರಿಸುವ ವಿಧಾನ ಇಲ್ಲಿದೆ. ಸಾಮಾನ್ಯವಾಗಿ ಜನರಿಗೆ ಇಡ್ಲಿ ಸಾಂಬಾರ್ ಎಂದರೆ ತುಂಬಾ ಇಷ್ಟವಾದಂತಹ ಆಹಾರ. ಇಡ್ಲಿ ಮಾಡಲು ಬಳಸುವ ವಿಧಾನವನ್ನು ಇದಕ್ಕೂ ಬಳಸಲಾಗುತ್ತದೆ ಆದರೆ ಇದರ ಜೊತೆಗೆ ತರಕಾರಿಗಳನ್ನು ಬಳಸುತ್ತಾರೆ. ಇದನ್ನು ಓದಿ : ಬೇಕಾಗುವ ಪದಾರ್ಥಗಳು ಇದನ್ನು ಓದಿ : ತಯಾರಿಸುವ ವಿಧಾನಅಕ್ಕಿ ಮತ್ತು ಮೆಂತ್ಯವನ್ನು ಒಟ್ಟಿಗೆ ಆರು ಗಂಟೆಗಳ ಕಾಲ ನೆನೆಸಿಟ್ಟು, ನೆನೆಸಿದ ಅಕ್ಕಿ ಮತ್ತು ಬೇಳೆಯನ್ನು ನೀರಿನಿಂದ ಚೆನ್ನಾಗಿ ತೊಳೆದು ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣಕ್ಕೆ ಕತ್ತರಿಸಿದ ತರಕಾರಿ, ಕೊತ್ತಂಬರಿ ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಮೆಣಸಿನ ಪುಡಿ, ಅರಿಶಿಣ ಮತ್ತು ಉಪ್ಪನ್ನು ಸೇರಿಸಿ ಸರಿಯಾಗಿ ಮಿಶ್ರಣ ಮಾಡಿ ಆರರಿಂದ ಎಂಟು ಗಂಟೆಗಳ ಕಾಲ ಇಡಬೇಕು. ಇದಾದ ಬಳಿಕ ಇಡ್ಲಿ ಪಾತ್ರೆಗೆ ಎಣ್ಣೆ ಹಾಕಿ ಹಿಟ್ಟನ್ನು ಹಾಕಿ ಸಾಮಾನ್ಯ ರೀತಿಯಲ್ಲಿ ಮಾಡುವ ಹಾಗೆ ಮಾಡಿದರೆ ವೆಜಿಟೇಬಲ್ ಇಡ್ಲಿ ರೆಡಿ ಮತ್ತು ಇದನ್ನು ಟೊಮ್ಯಾಟೋ ಚಟ್ನಿ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಬಹುದು. ತರಕಾರಿ ಇಡ್ಲಿ ಯಲ್ಲಿ ವಿಟಮಿನ್ ಬಿ ಸಿ ಎ ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಕಬ್ಬಿಣ ಕ್ಯಾಲ್ಸಿಯಂ ಮೆಗ್ನೀಷಿಯಂ ನಂತಹ ಪೋಷಕಾಂಶಗಳನ್ನು ಒಳಗೊಂಡಿದ್ದು, ಮೂಳೆಗಳನ್ನು ಗಟ್ಟಿಯಾಗಿಸುತ್ತದೆ. ಇದು ರಕ್ತದೊತ್ತಡ ಜೀರ್ಣ ಕ್ರಿಯೆಯಂತಹ ಸಮಸ್ಯೆಗಳನ್ನು ಸುಧಾರಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...