ಈ ಮಳೆಗಾಲದಲ್ಲಿ ಸಂಜೆ ಕ್ರಂಚಿ ಆಲೂಗಡ್ಡೆ ಸ್ನಾಕ್ಸ್ ತಿನ್ನಿ!! ಕೇವಲ 10ನಿಮಿಷದಲ್ಲಿ ತಯಾರಿಸಬಹುದು ಮಳೆಗಾಲದಲ್ಲಿ ಇಳಿ ಸಂಜೆಯಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಅನಿಸುವುದು ಸಾಮಾನ್ಯ ಆದರೆ ಅದರಲ್ಲೂ ಖಾರವನ್ನು ಸ್ವಾದಿಸುತ್ತಾ ತಿನ್ನುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಅದಕ್ಕಾಗಿ ಇಲ್ಲಿದೆ ಸಖತ್ ಕ್ರಂಚಿ ಆಲೂಗಡ್ಡೆ ರೆಸಿಪಿ!! ಕ್ರಂಚಿ ಆಲೂಗಡ್ಡೆ ರೆಸಿಪಿ ತಯಾರಿಸುವುದು ಹೇಗೆ ಗೊತ್ತಾ ಈ ಕುರಿತಂತೆ 10 ನಿಮಿಷದಲ್ಲಿ ಈ ರೆಸಿಪಿಯನ್ನು ತಯಾರಿಸುವ ವಿಧಾನ ಇಲ್ಲಿದೆ. ಸಂಜೆ ಮನೆಗೆ ಬಂದ ಮಕ್ಕಳಿಗೆ ಇದು ಸ್ನಾಕ್ಸ್ ರೀತಿಯಾಗಿದ್ದು, ಮಳೆಗಾಲದ ದಿನದಲ್ಲಿ ಭಾರಿ ಖುಷಿಯನ್ನು ನೀಡುತ್ತದೆ. ಇದನ್ನು ಓದಿ : ಬೇಕಾಗುವ ಸಾಮಾಗ್ರಿಗಳು:ಆಲೂಗಡ್ಡೆ - 1ಇಡ್ಲಿ ಹಿಟ್ಟು - 1 ಕಪ್ವರ ಮೆಣಸಿನಕಾಯಿ - 3ಬೆಳ್ಳುಳ್ಳಿ - 4ಸೋಂಪು - 1/2 ಟೀಸ್ಪೂನ್ಈರುಳ್ಳಿ - 1ಅಕ್ಕಿ ಹಿಟ್ಟು -ಕೊತ್ತಂಬರಿ ಸೊಪ್ಪು - ಸ್ವಲ್ಪಉಪ್ಪು - ರುಚಿಗೆ ತಕ್ಕಂತೆಎಣ್ಣೆ - ಅಗತ್ಯಕ್ಕೆ ತಕ್ಕಂತೆನೀರು - ಅಗತ್ಯಕ್ಕೆ ತಕ್ಕಂತೆ ಆಲೂಗಡ್ಡೆ ಈ ರೆಸಿಪಿ ಮಾಡಲು ಮೊದಲು ಆಲೂಗಡ್ಡೆ ಸಿಪ್ಪೆ ಸುಲಿದು, ಅದನ್ನು ಉದ್ದವಾಗಿ ಕತ್ತರಿಸಿಕೊಳ್ಳಿ. ಬಿಸಿ ನೀರಿಗೆ ಹಾಕಿ ಆಲುಗಡ್ಡೆಯನ್ನು 10 ನಿಮಿಷ ನೆನೆಸಿಡಿ. ಇದಾದ ಬಳಿಕ ಒಂದು ಪಾತ್ರೆಗೆ ಕತ್ತರಿಸಿದ ಆಲೂಗಡ್ಡೆ ಹಾಕಿ ಅದಕ್ಕೆ ನೀರು ಹಾಕಿರಿ, ಇದಕ್ಕೆ ಒಂದು ಚಮಚ ಉಪ್ಪು ಸೇರಿಸಿ ಒಲೆಯ ಮೇಲೆ ಇಡಿ. ಆಲೂಗಡ್ಡೆ ಮುಕ್ಕಾಲು ಭಾಗ ಬೆಂದ ಮೇಲೆ ಒಲೆಯನ್ನು ಆಫ್ ಮಾಡಿ ನೀರು ಮತ್ತು ಆಲೂಗಡ್ಡೆಯನ್ನು ಬೇರ್ಪಡಿಸಿ. ಇದನ್ನು ಓದಿ : ಒಂದು ಪಾತ್ರೆಯಲ್ಲಿ ಇಡ್ಲಿ ಹಿಟ್ಟನ್ನು ತೆಗೆದುಕೊಂಡು, ಮಿಕ್ಸರ್ ಜಾರ್ ನಲ್ಲಿ ಮೆಣಸಿನ ಕಾಯಿ, ಬೆಳ್ಳುಳ್ಳಿ ಮತ್ತು ಸೋಂಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಮಿಶ್ರಣವನ್ನು ಇಡ್ಲಿ ಹಿಟ್ಟಿಗೆ ಸೇರಿಸಿ ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿ. ನಂತರ ಒಲೆಯ ಮೇಲೆ ಬಾಣಲಿಗೆ ಅಗತ್ಯ ಪ್ರಮಾಣದ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ನಂತರ ಆಲೂಗಡ್ಡೆ ತುಂಡುಗಳನ್ನು ತಯಾರಿಸಿದ ಹಿಟ್ಟಿನಲ್ಲಿ ಚೆನ್ನಾಗಿ ಅದ್ದಿ ನಂತರ ಅವುಗಳನ್ನು ಎಣ್ಣೆಯಲ್ಲಿ ಹಾಕಿ. ಚಿನ್ನದ ಬಣ್ಣ ಬರುವವರೆಗೂ ಬಿಟ್ಟು ನಂತರ ಅವುಗಳನ್ನು ತೆಗೆದರೆ ಆಲೂಗಡ್ಡೆ ರೆಸಿಪಿ ತಿನ್ನಲು ಸಿದ್ಧ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...