ಮಾನ್ಸೂನ್ ಚುಮು ಚುಮು ಚಳಿ ನಡುವೆ ಹಿಮಾವೃತ ಬೆಟ್ಟಕ್ಕೆ ಭಕ್ತಸಾಗರ...!! ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮುಂಗಾರಿನ ಅವಧಿ ಮತ್ತಷ್ಟು ಹಿಮ ಹೊತ್ತು ತರುತ್ತಿದ್ದು ಹಿಮಾಚ್ಛಾದಿತ ಬೆಟ್ಟಕ್ಕೆ ಭಕ್ತರು, ಪ್ರವಾಸಿಗರು ಮನ ಸೋಲುತ್ತಿದ್ದಾರೆ. ಚಾಮರಾಜನಗರ:ಮಾನ್ಸೂನ್ () ಮಳೆ ನಡುವೆ ಹಿಮ ಆಸ್ವಾದಿಸಬೇಕಾದರೇ, ಆಧ್ಯಾತ್ಮಿಕತೆಯಲ್ಲಿ ಮಿಂದೇಳಬೇಕಾದರೆ ಇದಕ್ಕಿಂತ ಮತ್ತೊಂದು ಯಾತ್ರಸ್ಥಳ‌ ಇಲ್ಲಾ. ಹೌದು...., ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ( ) ಮುಂಗಾರಿನ ಅವಧಿ ಮತ್ತಷ್ಟು ಹಿಮ ಹೊತ್ತು ತರುತ್ತಿದ್ದು ಹಿಮಾಚ್ಛಾದಿತ ಬೆಟ್ಟಕ್ಕೆ ಭಕ್ತರು, ಪ್ರವಾಸಿಗರು ಮನ ಸೋಲುತ್ತಿದ್ದಾರೆ. ಇದನ್ನೂ ಓದಿ- ಬೆಟ್ಟದಲ್ಲಿ ಆಗಾಗ್ಗೆ ತುಂತುರು ಮಳೆ ಆಗುತ್ತಿರುವ ಹಿನ್ನೆಲೆ ಸದಾ ಈಗಕಣ್ತುಂಬಿಕೊಳ್ಳಬಹುದಾಗಿದ್ದು ಮಧ್ಯಾಹ್ನ 12 ಗಂಟೆ ಆದರೂ ಮುಂಜಾನೆ 6 ರಂತೆ ಪರಿಸರ ಗೋಚರಿಸುತ್ತಿದೆ. ಅಂದಹಾಗೆ, ಗುಂಡ್ಲುಪೇಟೆ ಮತ್ತು ಬೆಟ್ಟದ ತಪ್ಪಲಿನಿಂದ ಬಸ್ ಸೌಕರ್ಯವಿದ್ದು ವಾರಾಂತ್ಯದಲ್ಲಿ ಹೆಚ್ಚುವರಿ ಬಸ್ ಗಳು ಕೂಡ ಸಂಚರಿಸಲಿದೆ. ಅದೃಷ್ಟ ಇದ್ದರೇ ಬಸ್ ನಲ್ಲಿ ಬೆಟ್ಟ ಹತ್ತುವಾಗ ಹುಲಿ, ಚಿರತೆ ದರ್ಶನವೂ ಆಗಲಿದೆ. ಇದನ್ನೂ ಓದಿ- ಗೋಪಾಲಸ್ವಾಮಿ ಹತ್ತಾರು ಊರುಗಳ ಆರಾಧ್ಯ ದೈವವಾಗಿದ್ದು ಆಧ್ಯಾತ್ಮಿಕ ನೆಲೆಗಟ್ಟಿನಲ್ಲೂ ಈ ದೇವಾಲಯ ಪುರಾಣ ಪ್ರಸಿದ್ಧವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...