ಈ ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಕೇವಲ ರುಚಿಯಷ್ಟೇ ಹಾಳಾಗಲ್ಲ, ಆರೋಗ್ಯಕ್ಕೂ ಹಾನಿಕರ ರೆಫ್ರಿಜರೇಟರ್‌ ಬಳಸುವಾಗ ಯಾವ ರೀತಿಯ ಆಹಾರ ಪದಾರ್ಥಗಳನ್ನು ಅದರಲ್ಲಿ ಸಂಗ್ರಹಿಸಬಹುದು ಮತ್ತು ಯಾವ ಆಹಾರಗಳನ್ನು ಅದರಲ್ಲಿ ಇಡಬಾರದು ಎಂಬ ಬಗ್ಗೆ ಸರಿಯಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಅದರಿಂದ ಪ್ರಯೋಜನವಾಗುವ ಬದಲಿಗೆ ಮಾರಕವಾಗಬಹುದು. :ಆಹಾರ ಹಾಳಾಗದಂತೆ ರಕ್ಷಿಸಲು ರೆಫ್ರಿಜರೇಟರ್‌ ಅನ್ನು ಬಳಸಲಾಗುತ್ತದೆ. ಆದರೆ, ಕೆಲವು ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದಲೇ ಅವು ಕೆಡುತ್ತವೆ. ಅಷ್ಟೇ ಅಲ್ಲ, ಆ ಆಹಾರಗಳು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಲೂಬಹುದು. ಹೌದು,() ಬಳಸುವಾಗ ಯಾವ ರೀತಿಯ ಆಹಾರ ಪದಾರ್ಥಗಳನ್ನು ಅದರಲ್ಲಿ ಸಂಗ್ರಹಿಸಬಹುದು ಮತ್ತು ಯಾವ ಆಹಾರಗಳನ್ನು ಅದರಲ್ಲಿ ಇಡಬಾರದು ಎಂಬ ಬಗ್ಗೆ ಸರಿಯಾಗಿ ತಿಳಿದಿರಬೇಕು. ಇಲ್ಲದಿದ್ದರೆ, ಅದರಿಂದ ಪ್ರಯೋಜನವಾಗುವ ಬದಲಿಗೆ ಮಾರಕವಾಗಬಹುದು. ವಾಸ್ತವವಾಗಿ, ಕೆಲವು ಆಹಾರ () ಪದಾರ್ಥಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದರ ರುಚಿ ಕೆಡುತ್ತದೆ ಎಂದು ನಿಮಗೆ ತಿಳಿದೇ ಇದೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಕೆಲವು ಆಹಾರಗಳನ್ನು ಶೈತ್ಯೀಕರಣಗೊಳಿಸುವುದರಿಂದ ಅದರ ರುಚಿ, ವಿನ್ಯಾಸವಷ್ಟೇ ಅಲ್ಲ ಅದುವಾಗಿ ಪರಿಣಮಿಸಬಹುದು. ಹಾಗಿದ್ದರೆ, ಯಾವ ಆಹಾರಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಾರದು ಎಂದು ನೋಡುವುದಾದರೆ... ಇದನ್ನೂ ಓದಿ- ಈ ಆಹಾರಗಳನ್ನು ಮರೆತೂ ಸಹ ರೆಫ್ರಿಜರೇಟರ್‌ನಲ್ಲಿ ಇಡುವ ತಪ್ಪನ್ನು ಮಾಡಬೇಡಿ:ಕಲ್ಲಂಗಡಿ:ಕಲ್ಲಂಗಡಿಗಳಲ್ಲಿ () 40 ಪ್ರತಿಶತ ಹೆಚ್ಚು ಲೈಕೋಪೀನ್ ಮತ್ತು 139 ಪ್ರತಿಶತದಷ್ಟು ಬೀಟಾ ಕ್ಯಾರೋಟಿನ್ ಅಂಶವಿದೆ. ಕತ್ತರಿಸದ ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದರಿಂದ ಇದು ಇದರ ರುಚಿ, ವಿನ್ಯಾಸ ಎರಡೂ ಬದಲಾಗುತ್ತದೆ. ಟೊಮಾಟೊ:ನಮ್ಮಲ್ಲಿ ಬಹಳಷ್ಟು ಜನರು ಟೊಮಾಟೊ () ಹಾಳಾಗದಂತೆ ತಪ್ಪಿಸಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುತ್ತಾರೆ. ಆದರೆ, ಟೊಮಾಟೊವನ್ನು ಫ್ರಿಡ್ಜ್ ಗಿಂತ ಕೋಣೆಯ ಸಾಮಾನ್ಯ ತಾಪಮಾನದಲ್ಲಿ ಆದರೆ ಸೂರ್ಯನ ನೇರ ಕಿರಣಗಳು ಬೀಳದಂತೆ ಇಡುವುದು ಹೆಚ್ಚು ಸೂಕ್ತ. ಆಲೂಗಡ್ಡೆ:ಆಹಾರದ ರುಚಿ ಹೆಚ್ಚಿಸುವ ಆಲೂಗಡ್ಡೆಯನ್ನು () ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದಾಗ ಅದರ ಸ್ವಾದದ ಜೊತೆಗೆ ಅದರಲ್ಲಿರುವ ಉತ್ತಮ ಅಂಶಗಳು ಕೂಡ ಕಳೆದು ಹೋಗುತ್ತದೆ. ಇಂತಹ ಆಲೂಗಡ್ಡೆ ಸೇವನೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಇದನ್ನೂ ಓದಿ- ಈರುಳ್ಳಿ:ಈರುಳ್ಳಿಯನ್ನು () ರೆಫ್ರಿಜರೇಟರ್‌ನಲ್ಲಿ ಇಟ್ಟಾಗ ಅದರ ಬಣ್ಣ ನಿಧಾನವಾಗಿ ಬದಲಾಗುತ್ತದೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಬಹುದು. ಹಾಗಾಗಿ ಈರುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಡದಂತೆ ಸಲಹೆ ನೀಡಲಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...