ಟೊಮಾಟೊ, ಆಲೂಗೆಡ್ಡೆಯಿಂದ ಕುತ್ತಿಗೆ ಸುತ್ತಲಿನ ಕಪ್ಪು ಕಲೆಗೆ ಹೇಳಿ ಗುಡ್ ಬೈ ! ಕತ್ತಿನ ಸುತ್ತ ಕಪ್ಪು ಕಲೆ ಉಂಟಾಗಲೂ ಹಲವು ಕಾರಣಗಳಿವೆ. ಆದರೆ, ನೀವು ನಿತ್ಯ ಬಳಸುವ ಟೊಮಾಟೊ ಹಾಗೂ ಆಲೂಗೆಡ್ಡೆ ಸಹಾಯದಿಂದ ಇದರಿಂದ ಮುಕ್ತಿ ಹೊಂದಬಹುದು ಎಂದು ನಿಮಗೆ ತಿಳಿದಿದೆಯೇ? :ಮುಖಕ್ಕೆ ಹೋಲಿಸಿದರೆ ಕತ್ತಿನ ಸುತ್ತ ಕ್ರಮೇಣ ಬಣ್ಣ ಮಸುಕಾಗುತ್ತದೆ. ಕೆಲವರಲ್ಲಿ, ಇದು ಗಾಢ ರೂಪ ಪಡೆದು ಹೆಚ್ಚು ಕಪ್ಪಾಗುತ್ತದೆ. ಕುತ್ತಿಗೆ ಸುತ್ತಲೂ ಕಾಣುವ ಕಪ್ಪು ಕಲೆಯಿಂದಾಗಿ ಕೆಲವರು ಮುಜುಗರಕ್ಕೊಳಗಾಗುತ್ತಾರೆ. ಆದರೆ, ಇನ್ನೂ ಕೆಲವರಲ್ಲಿ ನಾಲ್ಕು ಜನರ ಮುಂದೆ ಹೋಗುವಾಗ ಆತ್ಮವಿಶ್ವಾಸವೇ ಕುಂದುತ್ತದೆ. ನೀವು ಅಂತಹವರಲ್ಲಿ ಒಬ್ಬರಾಗಿದ್ದರೆ, ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ನಿಮ್ಮ ಅಡುಗೆ ಮನೆಯಲ್ಲಿರುವ ಕೇವಲ ಎರಡೇ ಎರಡು ತರಕಾರಿಗಳು ಈ ಸಮಸ್ಯೆಗೆ ಪರಿಹಾರ ನೀಡಬಲ್ಲವು. ಹೌದು, ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಟೊಮಾಟೊ, ಆಲೂಗೆಡ್ಡೆಯನ್ನು ಬಳಸಿ ನೀವು ನಿಮ್ಮ( ) ಕಲೆಯನ್ನು ನಿವಾರಿಸಬಹುದು. ಇದಕ್ಕಾಗಿ ಏನು ಮಾಡಬೇಕು ಎಂದು ತಿಳಿಯಲು ಮುಂದೆ ಓದಿ... ಇದನ್ನೂ ಓದಿ- ಕುತ್ತಿಗೆ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಆಲೂಗಡ್ಡೆ:ಗೆ ಆಲೂಗೆಡ್ಡೆ ( ) ತುಂಬಾ ಪ್ರಯೋಜನಕಾರಿ ಆಗಿದೆ. ವಾಸ್ತವವಾಗಿ, ತ್ವಚೆಗೆ ಆಲೂಗೆಡ್ಡೆ ಅತ್ಯುತ್ತಮ ಬ್ಲೀಚ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕತ್ತಿನ ಸುತ್ತ ಕಪ್ಪು ಕಲೆಗಳಿದ್ದರೆ ಆಲೂಗೆಡ್ಡೆಯನ್ನು ತುರಿದು ಅದರ ರಸ ತೆಗೆದು ಕತ್ತಿನ ಸುತ್ತಲೂ ಹಚ್ಚಿ. ಲಘುವಾಗಿ ಮಸಾಜ್ ಮಾಡಿ. ಕೆಲಕಾಲ ಹಾಗೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಕಪ್ಪು ಕಲೆ ಮಾಯವಾಗಿ ಕುತ್ತಿಗೆ ಬೆಳ್ಳಗಾಗುತ್ತದೆ. ಇದನ್ನೂ ಓದಿ- ಟೊಮಾಟೊ ಹಣ್ಣು:ಪ್ರತಿಯೊಬ್ಬರ ಮನೆಯಲ್ಲೂ ಟೊಮಾಟೊ ಇದ್ದೇ ಇರುತ್ತದೆ. ಸೂರ್ಯನ ಹಾನಿಕಾರಕ ಕಿರಣಗಳಿಂದ ಉಂಟಾಗುವ ಟ್ಯಾನಿಂಗ್ () ಅನ್ನು ನಿವಾರಿಸಲು ಟೊಮಾಟೊ ಅತ್ಯುತ್ತಮ ಮದ್ದು. ಟೊಮಾಟೊವನ್ನು ಮಧ್ಯಕ್ಕೆ ಕತ್ತರಿಸಿ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ಕತ್ತಿನ ಸುತ್ತಲೂ ನಯವಾಗಿ ಉಜ್ಜುತ್ತಾ ಮಸಾಜ್ ಮಾಡಿ. ನಿಯಮಿತವಾಗಿ ಈ ಪರಿಹಾರ ಕೈಗೊಳ್ಳುವುದರಿಂದ ಕೆಲವೇ ದಿನಗಳಲ್ಲಿ ಕುತ್ತಿಗೆ ಸುತ್ತಲಿನ ಕಪ್ಪುಕಲೆ ಮಾಯವಾಗುತ್ತದೆ. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...