ಹೂಕೋಸನ್ನು ಹೀಗೆ ಸ್ವಚ್ಛಗೊಳಿಸಿದರೆ ಒಂದೇ ಒಂದು ಹುಳ ಅದರೊಳಗೆ ಉಳಿಯುವ ಭಯ ಇರುವುದಿಲ್ಲ ! ಮಳೆಗಾಲದಲ್ಲಿ ಇದು ಅಗತ್ಯ : ಮಳೆಗಾಲದಲ್ಲಿ ಈ ತರಕಾರಿಯನ್ನು ಸವಿಯಬೇಕೆಂದರೆ ಇದರ ಸ್ವಚ್ಚತೆಯ ಬಗ್ಗೆ ಸ್ವಲ್ಪ ಹೆಚ್ಚೇ ಕಾಳಜಿ ವಹಿಸಬೇಕು. ಇಲ್ಲಿ ತಿಳಿಸಿರುವ ವಿಧಾನಗಳ ಮೂಲಕ ಸ್ವಚ್ಛಗೊಳಿಸಿದರೆ ಆಹಾರದ ರುಚಿಯೂ ಹೆಚ್ಚುವುದು ಜೊತೆಗೆ ಆರೋಗ್ಯ ಕೆಡುತ್ತದೆ ಎನ್ನುವ ಭಯವೂ ಇರುವುದಿಲ್ಲ. ಬೆಂಗಳೂರು :ಸಾಮಾನ್ಯವಾಗಿ ಎಲ್ಲರೂ ಹೂಕೋಸು ತಿನ್ನಲು ಇಷ್ಟಪಡುತ್ತಾರೆ. ಆದರೆ, ಅದನ್ನು ತಯಾರಿಸುವ ಮೊದಲು,ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ.ಏಕೆಂದರೆ ಇದರಲ್ಲಿ ಹಲವು ರೀತಿಯ ಸಣ್ಣ ಸಣ್ಣ ಬ್ಯಾಕ್ಟೀರಿಯಾಗಳು ಮತ್ತು ಕೀಟಗಳು ಮನೆ ಮಾಡಿರುತ್ತವೆ.ಇದು ಅದು ಹೊಟ್ಟೆಯನ್ನು ತಲುಪಿದರೆ ನಮ್ಮನ್ನು ಅನಾರೋಗ್ಯಕ್ಕೆ ಗುರಿ ಮಾಡಿಬಿಡುತ್ತದೆ. ಮಳೆಗಾಲದಲ್ಲಿ ಈ ತರಕಾರಿಯನ್ನು ಸವಿಯಬೇಕೆಂದರೆ ಇದರ ಸ್ವಚ್ಚತೆಯ ಬಗ್ಗೆ ಸ್ವಲ್ಪ ಹೆಚ್ಚೇ ಕಾಳಜಿ ವಹಿಸಬೇಕು. ಇಲ್ಲಿ ತಿಳಿಸಿರುವ ವಿಧಾನಗಳ ಮೂಲಕ ಸ್ವಚ್ಛಗೊಳಿಸಿದರೆ ಆಹಾರದ ರುಚಿಯೂ ಹೆಚ್ಚುವುದು ಜೊತೆಗೆ ಆರೋಗ್ಯ ಕೆಡುತ್ತದೆ ಎನ್ನುವ ಭಯವೂ ಇರುವುದಿಲ್ಲ. ಇದನ್ನೂ ಓದಿ : ಹೂ ಕೋಸನ್ನು ಹೀಗೆ ಶುಚಿಗೊಳಿಸಿ :ಹಂತ 1: ಹೂ ಕೋಸನ್ನು ಕತ್ತರಿಸಿ :ಮೊದಲ ಹಂತವೆಂದರೆ ಅದರ ಹೊರಗಿನ ಎಲೆಗಳನ್ನು ತೆಗೆದು ಮಧ್ಯಮ ಗಾತ್ರದ ತುಂಡುಗಳಾಗಿ ಕತ್ತರಿಸುವುದು. ಚಾಕುವಿನ ಸಹಾಯವಿಲ್ಲದೆ ನಿಮ್ಮ ಕೈಗಳಿಂದಲೇ ಈ ಕೆಲಸವನ್ನು ಮಾಡಿ ಮುಗಿಸಬಹುದು. ಹಂತ 2: ಹೂಕೋಸನ್ನು ನೀರಿನಲ್ಲಿ ನೆನೆಸಿಡಿ :ಹೂಕೋಸು ತುಂಡುಗಳನ್ನು ಉಗುರುಬೆಚ್ಚಗಿನ ನೀರಿನಲ್ಲಿ ಉಪ್ಪು ಅಥವಾ ಅಡಿಗೆ ಸೋಡಾ ಬೆರೆಸಿ ನೆನೆಸಿಡಿ.ಇದು ಹೂಕೋಸಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ.ಅದರಲ್ಲಿ ಅಡಗಿರುವ ಕೀಟಗಳು ಸಹ ಒಂದೊಂದಾಗಿ ಹೊರಬರುತ್ತವೆ. ಹಂತ 3: ಹೂಕೋಸನ್ನು ನೀರಿನಿಂದ ತೊಳೆಯಿರಿ :10-15 ನಿಮಿಷಗಳ ನಂತರ,ಹೂಕೋಸುಗಳನ್ನು ನೀರಿನಿಂದ ಹೊರತೆಗೆದು ಶುದ್ಧ ನೀರಿನಿಂದ ಪ್ರತ್ಯೇಕವಾಗಿ ತೊಳೆಯಿರಿ.ನಂತರ ನೀರಿನಿಂದ ಹೊರತೆಗೆದುಇರಿಸಿ. ಇದನ್ನೂ ಓದಿ : ಹಂತ 4: ಒಣಗಿಸಿ ಮತ್ತು ಬಳಸಿ :ಈಗ ಹೂಕೋಸನ್ನು ಚೆನ್ನಾಗಿ ಒಣಗಿಸಿ ಅದನ್ನು ನಿಮ್ಮ ನೆಚ್ಚಿನ ಪಾಕವಿಧಾನದಲ್ಲಿ ಬಳಸಿಕೊಳ್ಳಿ.ಈ ರೀತಿ ಸ್ವಚ್ಛಗೊಳಿಸಿದ ಹೂಕೋಸು ನಿಮ್ಮ ಆಹಾರವನ್ನು ಆರೋಗ್ಯಕರವಾಗಿಸುತ್ತದೆ.ಮಾತ್ರವಲ್ಲ ಅದರ ರುಚಿ ಕೂಡಾ ದುಪ್ಪಟ್ಟಾಗಿರುತ್ತದೆ. (ಸೂಚನೆ : ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಾ ಇದರಲ್ಲಿ ಇದ್ದರೆ ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...