ಸೊಳ್ಳೆಗಳ ಸಮಸ್ಯೆ ಹೆಚ್ಚುತ್ತಿದೆಯೇ? ಮನೆಯಲ್ಲಿ ಈ ನೀರನ್ನು ಚಿಮುಕಿಸಿ! : ಮುಂಗಾರು ಈಗಾಗಲೇ ಬಂದಿದೆ. ಮಳೆಗಾಲವು ಅನೇಕ ಕೀಟಗಳನ್ನು ಸಹ ತರುತ್ತದೆ. ಅದರಲ್ಲೂ ಸೊಳ್ಳೆಗಳು ಮೊದಲು ಬರುತ್ತವೆ. ಹೀಗಾಗಿ ಇಂದು ಸೊಳ್ಳೆಗಳ ಹಾವಳಿ ತಡೆಯಲು ಪರಿಹಾರ ಕಂಡುಕೊಳ್ಳೋಣ.. : ಬೇಸಿಗೆಯಲ್ಲಿ ಪುದೀನಾವನನ್ನು ದೇಹ ತಣ್ಣಗಿಡಲು ಆಹಾರದಲ್ಲಿ ಬಳಸಲಾಗುತ್ತದೆ.. ಆದರೆ ಮಳೆಗಾಲದಲ್ಲಿ ಇದನ್ನು ಸೊಳ್ಳೆ ಓಡಿಸಲು ಬಳಸಲಾಗುತ್ತದೆ ಎನ್ನುವುದು ನಿಮಗೆ ಗೊತ್ತೇ? ಇಲ್ಲವಾದರೇ ಇದೀಗ ತಿಳಿಯೋಣ.. ಪುದೀನಾ ವಿಟಮಿನ್ ಎ, ಸಿ, ಬಿ ಕಾಂಪ್ಲೆಕ್ಸ್, ರಂಜಕ, ಕ್ಯಾಲ್ಸಿಯಂ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.. ಇದರಿಂದ ಅಜೀರ್ಣ, ಗ್ಯಾಸ್, ಅಸಿಡಿಟಿ ನಿವಾರಿಸಿ ದೇಹವನ್ನು ತಂಪಾಗಿಡಬಹುದು.. ಇದನ್ನೂ ಓದಿ- ಮನೆಯಿಂದ ಸೊಳ್ಳೆಗಳು ಮತ್ತು ನೊಣಗಳನ್ನು ಓಡಿಸಲು ಪುದೀನ ಸಹಾಯ ಮಾಡುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ಸೊಳ್ಳೆ, ನೊಣಗಳ ಕಾಟ ಹೆಚ್ಚಿರುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಪುದೀನ ಎಲೆಗಳನ್ನು ಕುದಿಸಿ ಅದರ ನೀರಿನಿಂದ ಸಿಂಪಡಿಸಬೇಕು. ವಾಶ್ ಬೇಸಿನ್ ಪೈಪ್‌ನಲ್ಲಿ ಅಥವಾ ಬೇರೆಡೆ ಹುಳಗಳು ಇದ್ದರೆ, ಪುದೀನಾ ಎಲೆಗಳನ್ನು ಅಡಿಗೆ ಸೋಡಾದೊಂದಿಗೆ ಮ್ಯಾಶ್ ಮಾಡಿ.. ಸೊಳ್ಳೆ ಪೀಡಿತ ಪ್ರದೇಶಕ್ಕೆ ಚಿಮುಕಿಸಿ. ಈ ನೀರು ಕೀಟಗಳನ್ನು ಕೊಲ್ಲುತ್ತದೆ. ​ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...