ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..? : ಗಂಡ ಹೆಂಡತಿ ಸುಖವಾಗಿರಬೇಕು ಎಂದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ, ಮತ್ತು ಈ ಕುರಿತಂತೆ ಸುಧಾಮೂರ್ತಿ ಒಂದು ಸರ್ದರ್ಶನದಲ್ಲಿ ಈ ರೀತಿ ಹೇಳಿದ್ದಾರೆ ನೀವು ಇವುಗಳನ್ನು ಪಾಲಿಸಿ, ನಿಮ್ಮ ದಾಂಪತ್ಯ ಜೀವನವು ಸುಖವಾಗಿರುತ್ತದೆ. ಸಂದರ್ಶನವೊಂದರಲ್ಲಿ ಸುಧಾಮೂರ್ತಿ ಗಮನಾರ್ಹವಾಗಿ ಒಂದು ಮಾತನ್ನು ಹೇಳಿದ್ದಾರೆ. ಗಂಡ-ಹೆಂಡತಿ ಸುಖವಾಗಿರಬೇಕೆಂದರೆ ಅವರ ನಡುವೆ ಜಗಳಗಳು ಖಂಡಿತ ಇರಲೇಬೇಕು. ಜಗಳಗಳಿದ್ದಾಗ ಮಾತ್ರ ಅವರ ನಡುವೆ ಪ್ರೀತಿ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ . ಪ್ರೀತಿ ಇಲ್ಲದೆ ಯಾವುದೇ ಸಂಬಂಧ ಉಳಿಯುವುದಿಲ್ಲ. ಪ್ರೀತಿ ವಿಶೇಷವಾಗಿ ಮದುವೆಯಲ್ಲಿ ಬಹಳ ಮುಖ್ಯ. ಪ್ರೀತಿ ಇದ್ದಾಗ ಮಾತ್ರ ಪರಸ್ಪರ ಸಂತೋಷದಿಂದ ಇರಲು ಸಾಧ್ಯ. ಆದರೆ ಪತಿ-ಪತ್ನಿ ಸುಖವಾಗಿರಬೇಕೆಂದರೆ ಅವರ ನಡುವೆ ಜಗಳಗಳು ಖಂಡಿತಾ ಇರಬೇಕು. ಜಗಳಗಳಿದ್ದಾಗ ಮಾತ್ರ ಅವರ ನಡುವೆ ಪ್ರೀತಿ ಹೆಚ್ಚುತ್ತದೆ ಎಂದು ಹೇಳಿದ್ದಾರೆ. ಇದನ್ನು ಓದಿ : ಸುಧಾ ಮೂರ್ತಿ ಅವರು ಲೇಖಕಿ, ಸಂಸತ್ತಿನ ಸದಸ್ಯೆ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ. ಅವರು ಅದ್ಭುತ ಬರಹಗಾರ್ತಿ ಮಾತ್ರವಲ್ಲ, ನೇರವಾಗಿ ಮಾತನಾಡುವವರೂ ಹೌದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ತಮ್ಮ ಸಂಬಂಧ ಹಾಗೂ ಪತಿ-ಪತ್ನಿಯ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದಾರೆ. ಪತಿ-ಪತ್ನಿ ಜಗಳವಾಡಬೇಕು, ಜಗಳವಾಡದಿದ್ದರೆ ಪತಿ-ಪತ್ನಿಯಾಗಲು ಸಾಧ್ಯವಿಲ್ಲ ಎಂದು ಸುಧಾ ಮೂರ್ತಿ ಹೇಳಿದ್ದಾರೆ. ಪತಿ-ಪತ್ನಿಯರ ನಡುವಿನ ಪ್ರೀತಿಯ ಬಗ್ಗೆ ಸುಧಾ ಮೂರ್ತಿ ಹೇಳಿದ್ದು ಹೀಗೆ.. 'ಗಂಡ ಹೆಂಡತಿಯಾದರೆ ಜಗಳ ಸಹಜ, ಆಗಲೇ ಬೇಕು, ಯಾವತ್ತೂ ಜಗಳ ಮಾಡಲ್ಲ ಎಂದು ಹೇಳಿದರೆ ಗಂಡ-ಹೆಂಡತಿಯಾಗಲು ಸಾಧ್ಯವಿಲ್ಲ. ಸಣ್ಣಪುಟ್ಟ ಜಗಳ, ಜಗಳಗಳಿಂದ ಪ್ರೀತಿ ಹೆಚ್ಚುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಗಂಡ ಹೆಂಡತಿ ಜಗಳವಾಡಿದಾಗ ಬೇಜಾರಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅವರು ಒಬ್ಬರಿಗೊಬ್ಬರು ಸಮಾಧಾನ ಪಡಿಸುವುದು ಮಾಡಿದಾಗ ಪ್ರೀತಿ ಹೆಚ್ಚಾಗುತ್ತದೆ. ಜೀವನದಲ್ಲಿ ಒಳ್ಳೆಯ ಗುಣಗಳು ಮತ್ತು ಕೆಲವು ಕೆಟ್ಟ ಗುಣಗಳು ಯಾವಾಗಲು ಇರುತ್ತವೆ. ಅದನ್ನೆಲ್ಲ ಸರಿ ಪಡಿಸಿ ಮುಂದೆ ಹೋದಾಗ ಮಾತ್ರ ಜೀವನ ಸಂತೋಷವಾಗಿರುತ್ತದೆ. ಇದನ್ನು ಓದಿ : ಒಬ್ಬರಿಗೊಬ್ಬರು ತಮ್ಮ ತಮ್ಮ ಕೆಲಸಗಳಲ್ಲಿ ಪಾಲ್ಗೊಳ್ಳುವುದು, ಅವರ ಬ್ಯುಸಿ ಟೈಮ್ ಅನ್ನು ಗೌರವಿಸುವುದು ತುಂಬಾ ಮುಖ್ಯವಾಗಿರುತ್ತದೆ. ಅಡುಗೆ ಮತ್ತು ಮನೆಗೆಲಸದಲ್ಲಿ ಹೆಂಡತಿಗೆ ಸಹಾಯ ಮಾಡಿ. ಹೆಂಡತಿಯ ಹೊರೆ ಕಡಿಮೆ ಮಾಡುವುದು ಇದರಿಂದ ಸಂಸಾರ ಸುಖವಾಗಿರತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...