: ಈ ನಾಲ್ಕು ಹಣ್ಣುಗಳ ಸಹಾಯದಿಂದ ಹೆಚ್ಚಿಸಿ ಮುಖದ ಕಾಂತಿ : ಹಣ್ಣುಗಳ ಬಳಕೆಯಿಂದ ಆರೋಗ್ಯಕ್ಕೆ ಭರಪೂರ ಪ್ರಯೋಜನಗಳು ಲಭಿಸುತ್ತವೆ ಎಂದು ನಿಮಗೆ ತಿಳಿದೇ ಇದೆ. ಆದರೆ, ಇದೇ ಹಣ್ಣುಗಳಿಂದ ನೈಸರ್ಗಿಕವಾಗಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ? : ಯಾವುದೇ ಋತುಮಾನವಿರಲಿ ಚರ್ಮದ ಆರೈಕೆಗೆ ಒತ್ತು ನೀಡುವುದು ತುಂಬಾ ಅವಶ್ಯಕ. ಇಲ್ಲದಿದ್ದರೆ, ತ್ವಚೆಯ ಸುಂದರತೆ ಮರೆಯಾಗಿ ಚರ್ಮದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ತ್ವಚೆಯ ಆರೈಕೆಗೆ ಕೆಲವು ಹಣ್ಣುಗಳು ಕೂಡ ಪ್ರಯೋಜನಕಾರಿ ಆಗಿದೆ. ಚರ್ಮ ತಜ್ಞರ ಪ್ರಕಾರ, ಚರ್ಮದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಕೆಲವು( ) ಆಗಿ ಬಳಸುವುದರಿಂದ ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎನ್ನಲಾಗುತ್ತದೆ. ಹಾಗಿದ್ದರೆ, ಕಾಂತಿಯುತ ತ್ವಚೆಯನ್ನು ಪಡೆಯಲು ಸಹಾಯಕವಾದ ಹಣ್ಣುಗಳು ಯಾವುವು? ಅವುಗಳನ್ನು ಹೇಗೆ ಬಳಸುವುದು ಎಂದು ತಿಳಿಯೋಣ... ನೈಸರ್ಗಿಕವಾಗಿ ಮುಖದ ಕಾಂತಿ ಹೆಚ್ಚಿಸಲು ತುಂಬಾ ಲಾಭದಾಯಕ ಹಣ್ಣುಗಳು:ಕಿತ್ತಳೆ ಹಣ್ಣು:ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿದ್ದು ಇದು ಚರ್ಮದ ಬಣ್ಣ ಕಳೆಗುಂದದಂತೆ ಕಾಪಾಡುತ್ತದೆ.ಹುರಿದ ಉದ್ದಿನಬೇಳೆ, 1 ಚಮಚ ಹಾಲು ಮತ್ತು 2 ಚಮಚ ಒಣಗಿಸಿ ಪುಡಿಮಾಡಿದ ಕಿತ್ತಳೆ ಸಿಪ್ಪೆಯನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ. 15-20 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ. ಇದರಿಂದ ಮುಖದಲ್ಲಿ ಮೂಡಿರುವ ಕಲೆಗಳು ನಿವಾರಣೆಯಾಗಿ,( ) ಹೊರಹೊಮ್ಮುತ್ತದೆ. ಇದನ್ನೂ ಓದಿ- ಪರಂಗಿ ಹಣ್ಣು:ಪರಂಗಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಚೆನ್ನಾಗಿ ಕಳೆತ ಪರಂಗಿ ಹಣ್ಣನ್ನು ಮ್ಯಾಶ್ ಮಾಡಿ ಮುಖಕ್ಕೆ ಅನ್ವಯಿಸಿ, ಅದು ಒಣಗಿದ ಬಳಿಕ ಮುಖ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಮುಖದಲ್ಲಿ ಮೂಡಿರುವ ಮೊಡವೆಗಳು ಮಾಯವಾಗುವುದರ ಜೊತೆಗೆ ಕಲೆಯಿಂದಲೂ ಪರಿಹಾರ ಪಡೆಯಬಹುದು. ಮಾವಿನ ಹಣ್ಣು:ಹಣ್ಣುಗಳ ರಾಜ ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಎರಡೂ ಹೇರಳವಾಗಿ ಕಂಡು ಬರುತ್ತದೆ. ಇದು ಚರ್ಮವನ್ನು ಪೋಷಿಸಿ ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಜಿ‌ಐ, ಒಂದು ಬಾದಾಮಿಯನ್ನು ಅರೆದು, ಇದರಲ್ಲಿ ಒಂದು ಚಮಚ ಓಟ್ಸ್, ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಮಾವಿನ ತಿರುಳನ್ನು ಇದರೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ಕಾಲ ಬಿಟ್ಟು ನಂತರ ಮುಖ ತೊಳೆಯಿರಿ. ಇದನ್ನೂ ಓದಿ- ನೇರಳೆ ಹಣ್ಣು:ಒಂದು ಹಿಡಿ ಕರಿಬೇವಿನ ಬೀಜ, ಮೂರು ಮಾವಿನ ಎಲೆಗಳನ್ನು ಒಟ್ಟಿಗೆ ಪುಡಿ ಮಾಡಿ. ಇದರಲ್ಲಿ ನೇರಳೆ ಹಣ್ಣಿನ ರಸ ಹಿಂಡಿ ಚೆನ್ನಾಗಿ ಬೆರೆಸಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ ಅರ್ಧಗಂಟೆ ಬಳಿಕ ಫೇಸ್ ವಾಶ್ ಮಾಡುವುದರಿಂದ ಮೊಡವೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಜೊತೆಗೆ ಕಲೆಗಳು ಮಾಯವಾಗಿ, ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಬಹುದು. ಸೂಚನೆ:ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...