ರಾಜ್ಯದ ಏಕೈಕ ಅಷಾಡ ರಥೋತ್ಸವಕ್ಕೆ ಸಿದ್ಧತೆ ಆರಂಭ: ನವಜೋಡಿಗಳ ಕಲರವಕ್ಕೆ ದಿನಗಣನೆ ಆಷಾಡ ಮಾಸದಲ್ಲಿ ರಥೋತ್ಸವ ( ) ನಡೆಯುವುದು ಬಹಳ ಅಪರೂಪ ಮತ್ತು ವಿರಳವಾಗಿದ್ದು ರಾಜ್ಯದಲ್ಲಿ ಚಾಮರಾಜನಗರದಲ್ಲಿ ಮಾತ್ರ ಆಷಾಢದ ಜಾತ್ರೆ ( ) ನಡೆಯಲಿದೆ. ಚಾಮರಾಜನಗರ:ಆಷಾಡ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವವಾದ ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದ್ದು ಶಾಸಕ ಸಿ.ಪುಟ್ಟರಂಗಶೆಟ್ಟಿ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ( ) ನಡೆಯುವುದು ಬಹಳ ಅಪರೂಪ ಮತ್ತು ವಿರಳವಾಗಿದ್ದು ರಾಜ್ಯದಲ್ಲಿ ಚಾಮರಾಜನಗರದಲ್ಲಿ ಮಾತ್ರ ಆಷಾಢದ ಜಾತ್ರೆ ( ) ನಡೆಯಲಿದೆ. ಇದೇ 20 ರಂದು ರಥೋತ್ಸವ ನಡೆಯಲಿದ್ದು ಇದಕ್ಕಾಗಿ ಸಾಂಪ್ರದಾಯಿಕವಾಗಿ ತಯಾರಿ ಆರಂಭಗೊಂಡಿದೆ. ಇದನ್ನೂ ಓದಿ- ( ) ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು ಇದು ದಂಪತಿಗಳ ಜಾತ್ರೆ ಎಂಥಲೇ ಜನಪ್ರಿಯವಾಗಿದೆ. ಮದುವೆಯಾದ ಹೊಸತರಲ್ಲಿ ಪತ್ನಿ ತವರಿನಲ್ಲಿ ಇರುವುದರಿಂದ ಈ ಜಾತ್ರೆಯ ದಿನದಂದು ಪತಿ- ಪತ್ನಿ ( ) ಭೇಟಿಯಾಗಿ ಹಣ್ಣು ಜವನ ಎಸೆದು ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ‌ ವಿಶೇಷವಾಗಿದೆ. ಇದನ್ನೂ ಓದಿ- ತೇರು ಕಟ್ಟುವ ಕಾಯಕದಲ್ಲಿ ನುರಿತರು ಪಾಲ್ಗೊಂಡಿದ್ದು ಈ ಬಾರಿ ಮಳೆ ಉತ್ತಮವಾಗಿ ಸುರಿಯುತ್ತಿರುವ ಹಿನ್ನೆಲೆ ಅದ್ಧೂರಿಯಾಗಿ ಜಾತ್ರೆ ಮಾಡಲು ಭಕ್ತರು ಅಣಿಯಾಗುತ್ತಿದ್ದಾರೆ.‌ ಈ ಜಾತ್ರೆಯಲ್ಲಿ ನವಜೋಡಿಗಳ ಕಲರವವೇ ಕೇಂದ್ರ ಬಿಂದುವಾಗಿದ್ದು ಚಾಮರಾಜನಗರದಲ್ಲಿ ಜಾತ್ರೆ ಕಳೆ ಬರುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...