ನಿಮ್ಮ ಮುಖದಲ್ಲಿ ಈ ಲಕ್ಷಣಗಳು ಕಂಡುಬಂದರೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ..! : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ಅಪಾಯಕಾರಿ ಚಿಹ್ನೆ. ಇದು ಅನೇಕ ಹಾನಿಕಾರಕ ರೋಗಗಳಿಗೆ ಕಾರಣವಾಗಬಹುದು. ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಬ್ರೈನ್ ಸ್ಟೋಕ್ ನಂತಹ ಕಾಯಿಲೆಗಳಿಗೆ ಕೂಡ ದಾರಿ ಮಾಡಿ ಕೊಡಬಹುದು. ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಹೃದಯಾಘಾತದ ಅವಕಾಶ ಹೆಚ್ಚಾಗುತ್ತದೆ. :ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ಅಪಾಯಕಾರಿ ಚಿಹ್ನೆ. ಇದು ಅನೇಕ ಹಾನಿಕಾರಕ ರೋಗಗಳಿಗೆ ಕಾರಣವಾಗಬಹುದು. ಕೆಟ್ಟ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಬ್ರೈನ್ ಸ್ಟೋಕ್ ನಂತಹ ಕಾಯಿಲೆಗಳಿಗೆ ಕೂಡ ದಾರಿ ಮಾಡಿ ಕೊಡಬಹುದು. ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಹೃದಯಾಘಾತದ ಅವಕಾಶ ಹೆಚ್ಚಾಗುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಾರಂಭಿಸುತ್ತಿದೆ ಎಂದು ಸೂಚಿಸುವ ಕೆಲವು ಲಕ್ಷಣಗಳಿವೆ. ಈ ರೋಗಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಪತ್ತೆ ಮಾಡಿದರೆ ಜೀವನಶೈಲಿ ಮತ್ತು ಆಹಾರದ ಬದಲಾವಣೆಗಳ ಮೂಲಕ ನಿಯಂತ್ರಿಸಬಹುದು. ಆದ್ದರಿಂದ ನೀವು ಮುಖದ ಮೇಲೆ ಕೆಲವು ರೀತಿಯ ರೋಗಲಕ್ಷಣಗಳನ್ನು ಕಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಮುಖದ ಮೇಲೆ ಚರ್ಮವು ಹಳದಿ ಬಣ್ಣಕ್ಕೆ ತಿರುಗಿದರೆ, ಇದಕ್ಕೆ ಕಾರಣ ರಕ್ತ ಪರಿಚಲನೆಯ ಕೊರತೆ ಎಂದು ಅರ್ಥ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದು ರಕ್ತ ಪರಿಚಲನೆಯನ್ನು ತಡೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಈ ರೀತಿ ಹೆಚ್ಚಾದರೆ, ಚರ್ಮದ ಮೇಲೆ ಹಳದಿ ಬಣ್ಣ ಕಾಣಿಸಿಕೊಳ್ಳುತ್ತದೆ . ಇದನ್ನೂ ಓದಿ: ಮುಖದ ಮೇಲೆ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ. ಅನೇಕ ಜನರು ಇಂತಹ ಗುಳ್ಳೆಗಳು ಕಂಡು ಬಂದಾಗ ತಾವಾಗಿಯೇ ಕಡಿಮೆಯಾಗುತ್ತದೆ ಎಂದು ಭಾವಿಸುತ್ತಾರೆ. ಈ ಉಬ್ಬುಗಳು ಸಾಮಾನ್ಯವಾಗಿ ಕಣ್ಣುಗಳ ಸುತ್ತಲೂ ರೂಪುಗೊಳ್ಳುತ್ತವೆ ಇಂತಹ ಚಿಹ್ನೆ ಕಂಡು ಬಂದಲ್ಲಿ ಇದು ನಿಮ್ಮ ದೇಹದಲ್ಲಿನ ಕೆಟ್ಟ ಕೊಲಷ್ಟ್ರಾಲ್‌ ಅನ್ನು ಸೂಚಿಸುತ್ತಿದೆ ಎಂದು ಅರ್ಥ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಕಣ್ಣುಗಳ ಸುತ್ತ ತಿಳಿ ಹಳದಿ ಬಣ್ಣದ ದದ್ದುಗಳು ಮತ್ತು ಹಳದಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿದ ಸಂಕೇತವೆಂದು ಪರಿಗಣಿಸಬೇಕು. ಮುಖದ ಮೇಲೆ ಊತವು ಅನೇಕ ಕಾರಣಗಳನ್ನು ಹೊಂದಿರಬಹುದು. ಆದರೆ ಕೆಲವೊಮ್ಮೆ ಈ ಊತವು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದ ಕಾರಣದಿಂದಾಗಿರಬಹುದು. ಇದರಿಂದ ಮುಖ ಊದಿಕೊಂಡಂತೆ ಕಾಣುತ್ತದೆ. ಇಲ್ಲದಿದ್ದರೆ, ಚರ್ಮವು ಸಂಪೂರ್ಣವಾಗಿ ಒಣಗುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಆಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಂಕ್ ಫುಡ್ ಅನ್ನು ಸಂಪೂರ್ಣವಾಗಿ ತ್ಯಜಿಸಬೇಕು. ನೀವು ಪ್ರತಿ ರಾತ್ರಿ ಎಂಟು ಗಂಟೆಗಳ ನಿದ್ದೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳನ್ನು ತಕ್ಷಣವೇ ನಿಲ್ಲಿಸಬೇಕು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...