ಯಾವುದೇ ಔಷಧಿ ಬೇಡ.. ಯೂರಿಕ್ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತವೆ ಈ ಎಲೆಗಳು!! : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಯೂರಿಕ್ ಆಸಿಡ್‌ ಸಹ ಒಂದು. ಅನೇಕ ಜನರು ಈ ನೋವಿನಿಂದ ಬಳಲುತ್ತಿದ್ದಾರೆ. ಆದರೆ ಈ ಯೂರಿಕ್ ಆಸಿಡ್ ನೋವಿಗೆ ನಮ್ಮಲ್ಲಿ ಅನೇಕ ಮನೆಮದ್ದುಗಳಿವೆ. : ಯೂರಿಕ್ ಆಮ್ಲವನ್ನು ನಿಯಂತ್ರಿಸುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ವಾಸ್ತವವಾಗಿ, ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬದಲಾವಣೆಯಿಂದ ಇಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದೊದಗಿದೆ.. ಪ್ಯೂರಿನ್‌ ಎಂಬ ಅಂಶವು ದೇಹದಲ್ಲಿ ವಿಭಜನೆಯಾದಾಗ ಈ ಯೂರಿಕ್‌ ಆಸಿಡ್‌ ಉತ್ಪತ್ತಿಯಾಗುತ್ತದೆ.. ಹಾಗಾಗಿ ಈ ಪ್ಯೂರಿನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳಾದ ಒಣಗಿದ ಬೀನ್ಸ್, ಬಟಾಣಿ ಮತ್ತು ಬಿಯರ್‌ನಂತವುಗಳಿಂದ ದೂರವಿರುವುದು ಉತ್ತಮ.. ಇದನ್ನೂ ಓದಿ- ಯೂರಿಕ್ ಆಮ್ಲವನ್ನು ನಿಯಂತ್ರಿಸಲು ತುಳಸಿ ಹೇಗೆ ಉಪಯುಕ್ತವಾಗಿದೆ?ತುಳಸಿ ಎಲೆಗಳು ದೇಹವನ್ನು ನಿರ್ವಿಷಗೊಳಿಸುವ ಮತ್ತು ಮೂತ್ರವರ್ಧಕ ಗುಣಗಳನ್ನು ಹೊಂದಿವೆ. ಇದು ದೇಹದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಿ, ಕಿಡ್ನಿ ಸ್ಟೋನ್‌ ಸಮಸ್ಯೆಯನ್ನು ಹೋಗಲಾಡಿಸುತ್ತದೆ.. ಇದನ್ನೂ ಓದಿ- ಈ ಯೂರಿಕ್ ಆಮ್ಲವನ್ನು ನಿಯಂತ್ರಣದಲ್ಲಿಡಲು, ಮೊದಲು ಒಂದೆರಡು ತುಳಸಿಯ ಎಲೆಗಳನ್ನು ತೆಗೆದುಕೊಂಡು ಖಾಲಿ ಹೊಟ್ಟೆಯಲ್ಲಿ ಈ ಎಲೆಯನ್ನು ಅಗಿಯಿರಿ. ಇದು ನಿಮ್ಮ ಮಾನಸಿಕ ಆರೋಗ್ಯ ಮತ್ತು ಯೂರಿಕ್ ಆಮ್ಲವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ತುಳಸಿಯ ಕಷಾಯವು ನಿಮ್ಮ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಷಾಯವನ್ನು ತಯಾರಿಸಲು ಮೊದಲು 2 ರಿಂದ 3 ತುಳಸಿ ಎಲೆಗಳನ್ನು ತೆಗೆದುಕೊಳ್ಳಿ. ನಂತರ ಆ ಎಲೆಗಳನ್ನು ಚೆನ್ನಾಗಿ ತೊಳೆದು 1 ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ.. ನಂತರ, ನೀರನ್ನು ಸೋಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದು ಯೂರಿಕ್ ಆಮ್ಲವನ್ನು ಬೇಗ ನಿಯಂತ್ರಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...