ರಾತ್ರಿ ಹೊತ್ತು ಉಗುರನ್ನು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ? ಕತ್ತರಿಸಬಾರದು ಎನ್ನುವುದಕ್ಕೆ ಇಲ್ಲಿದೆ ಕಾರಣ! : ರಾತ್ರಿ ಹೊತ್ತು ಉಗುರು ಕತ್ತರಿಸುವ ಅಭ್ಯಾಸವಿದ್ಯಾ ಅದನ್ನು ಮೊದಲು ನಿಲ್ಲಿಸಿ, ಮನೇಲಿ ಯಾವಾಗಲೂ ರಾತ್ರಿ ಹೊತ್ತು ಉಗುರನ್ನು ಕತ್ತರಿಸಬಾರದು ಎಂದು ಹೇಳುತ್ತಲೇ ಇರುತ್ತಾರೆ ಅದು ಯಾಕೆ ಗೊತ್ತಾ ಇಲ್ಲಿದೆ ನೋಡಿ. ಮನೆಯಲ್ಲಿ ಹಿರಿಯರು ಯಾವಾಗಲೂ ರಾತ್ರಿ ಹೊತ್ತು ಉಗುರು ಕತ್ತರಿಸಬಾರದು ಎಂದು ಹೇಳುತ್ತಾರೆ ಮತ್ತೆ ಕಾರಣ ಕೇಳಿದರೆ ಹೇಳುವುದು ಕಡಿಮೆ. ಅದು ಯಾಕೆ ಗೊತ್ತಾ ಅದಕ್ಕೆ ಹಲವಾರು ಕಾರಣಗಳಿವೆ. ಹಿರಿಯರು ಮೂಢನಂಬಿಕೆಗಳ ಕುರಿತು ಹೇಳಿದರೆ ಅದರ ಹಿಂದೆ ಕೆಲವು ಪ್ರಾಯೋಗಿಕ ಕಾರಣಗಳಿವೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಸಂಸ್ಕೃತದಲ್ಲಿ ಹಲವು ಕಾರಣಗಳಿವೆ. ಇದನ್ನು ಓದಿ : ರಾತ್ರಿ ಹೊತ್ತಲ್ಲಿ ಉಗುರನ ಕತ್ತರಿಸುವುದರಿಂದ ಮತ್ತು ಹುಣ್ಣಿಮೆಯ ಸಮಯದಲ್ಲಿ ಉಗುರನ್ನು ಕತ್ತರಿಸುವುದರಿಂದ ಆಕಾಶ ಶಕ್ತಿ ಮತ್ತು ನೈಸರ್ಗಿಕ ಸಮತೋಲನದ ಮಧ್ಯೆ ಮತ್ತು ಇವೆರಡರ ಸಾಮರಸ್ಸಕ್ಕೆ ತೊಂದರೆಯನ್ನುಂಟು ಮಾಡುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳಿಗೆ ಮತ್ತು ಅದರ ಪರಿಣಾಮಗಳಿಗೆ ಆಹ್ವಾನ ನೀಡುತ್ತದೆ. ಅದಲ್ಲದೆ ಹಿಂದಿನ ಕಾಲದಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ನ ಅಲಭ್ಯದ ಕಾರಣ ಕತ್ತಲಲ್ಲಿ ಉಗುರನ್ನ ಕತ್ತರಿಸುವುದು ಸಂಗ್ರಹಿಸುವುದು ಹಾಗೂ ಬಿಸಾಡುವುದು ಒಂದು ಸಮಸ್ಯೆ ಆಗುತ್ತಿತ್ತು ಆ ಕಾರಣದಿಂದ ಆಹಾರದಲ್ಲಿ ಉಗುರು ಬೆರೆಯಬಹುದು ಮತ್ತು ಇದರಿಂದ ಅಲರ್ಜಿ ಉಂಟಾಗಬಹುದು ಎಂಬ ಕಾರಣದಿಂದ ಹಾಗೆ ಹೇಳಲಾಗುತ್ತಿತ್ತು. ಇದನ್ನು ಓದಿ : ಅದಲ್ಲದೆ ಪೂರ್ವಜರು ಉಗುರನ್ನು ಕತ್ತರಿಸಲು ಕತ್ತರಿ ಮತ್ತು ಚಾಕುಗಳನ್ನು ಬಳಸುತ್ತಿದ್ದರು. ರಾತ್ರಿ ಸಮಯದಲ್ಲಿ ಇವುಗಳಿಂದ ಉಗುರನ್ನ ಕತ್ತರಿಸಿದರೆ ಗಾಯ ಅಥವಾ ರಕ್ತಸ್ರಾಗವಾಗಬಹುದು ಎಂಬ ಕಾರಣಕ್ಕೆ ಹೀಗೆ ಹೇಳಲಾಗುತ್ತಿತ್ತು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...